ಪುಟ:ಅರಮನೆ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬಿಡುವುದೋ, ಅದರೊಳಗ ತಾನಿದ್ದುದಾss ತನ್ನೊಳಗ... ಅದು ಯಿತ್ತೋ, ತಾನು ನೋಡು ನೋಡುವಷ್ಟರೊಳಗss .... ಕಮ್ಮಿ ಕಾಲುಗಳು ತಾವೇ ತಾವಾಗಿ ಬೆಳೆಯಲಾರಂಭಿಸಿದಂತೆ.. ಕಿವಿಗಳು ಮಾರು ಮಾರಗಲ ವಾಗುತ್ತಿರುವಂತೆ ವಂದೊಂದು ಕಲ್ಲೊಳಗ ಸಾವುರ ಸಾವುರ ದೀವಟಿಗೆಗಳ ದಿಬ್ಬಣ ಹೊಂಟಿರುವಂತೆ.. ಬಾಯೆಂಬುದು ಬ್ರುಹತ್ ಕೂಪವಾಗುತ್ತಿರುವಂತೆ.. ಯೋಜನದುದ್ದಗೊಂಡ ಹಣೆ ನಡುವೆ ಯೇಳು ಮಾರಗಲದ ಕುಂಕುಮ ಬೊಟ್ಟೋಂದು ರಾರಾಜಿಸುತ್ತಿರುವಂತೆ.. ತನ್ನ ಕೊರಳೊಳಗಂತೂ ತರಾವರಿss.. ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ........... ಆ ಯಿರಾಟ್ ರೂಪೀ ತನ್ನ ಸರೀರದೊಳಗೆ ತಾನು ತೂರಿಕೊಳ್ಳುವ ಪ್ರಯತ್ನಗಳನ್ನು ವಂದರ ಮ್ಯಾಲೊಂದರಂತೆ ಕುಂತ ಕುಂತಲ್ಲೆ ಮಾಡಿದನು. ಅದರ ಮ್ಯಾಲಿನ ತನ್ನ ಪರಂಪರಾಗತ ಹಕ್ಕನ್ನು ಬಿಟ್ಟುಕೊಡಬಾರದೆಂಬ ವಂದೇ ಕಾರಣಕ್ಕಾಗಿ.. ಬರಬ್ಯಾಡಪ್ಪಾ ಬರಬ್ಯಾಡ.. ನೀನಲ್ಲೇ ಯಿರು.. ನಾನಿಲ್ಲೇ ಯಿರುತೀನಿ ಯಂದು ಸರೀರ ಅಂಬುವುದೆಂದರೇನು? ಯಿದೇನು ಹೇಳುವ ಮಾತಲ್ಲ ಸಿವನೇ, ಕೇಳುವ ಮಾತಲ್ಲ ಸಿವನೇ.. ಅದರ ಮಾಲಿದ್ದ ಬೆಮರ ಕುಣಿಗಳಿಂದ ಅಗೋಚರ ಹಸ್ತಗಳು ವಡಮೂಡಿ ತನ್ನನ್ನು ಕತ್ತು ಹಿಡಿದು ತಳ್ಳಿದಂಗಾಯ್ತಂತೆ.. ಬಲು ಬ್ಯಾಸರ ಬಂದೀವಯ್ಯ “ಯಾಕೆ ಸರೀರವೇ.. ನನ ಮಾಲ ನೀನು ಮುನುಸಿಕೊಂಡೀ ಯಾಕೆ? ನಾನು ನಿನ್ನೊಳಗ ಯಿರೋದು ನಿಂಗೆ ಬ್ಯಾಡಾಗಂಯೇನು?” ಎಂದು ಕೇಳಿದನಂತೆ.. ಅದಕಿದ್ದು ಅರಮನೆಯೋಪಾದಿಯಲ್ಲಿ ಬೆಳೆಯುತಲಿದ್ದ, ನಿಗಿ ನಿಗಿ ಹೊಳೆಯುತಲಿದ್ದ ಆ ಸರೀರವು ಪಕಪಕ ನಗಾಡಿದಂಗಾಯ್ತಂತೆ.. ನಗಾಡುತ್ತಲೇ “ಯಲಾಮ್ ನರಮಾನ್ನವನೇ ಯೇ ಕ್ಷಣದಿಂದ ಯೀ ಸರೀರವು ಅಂದರೆ ನಾನು ನಿನ್ನದಲ್ಲ... ನಾನು ಸಗುತಿ ಸಾಂಬವಿಯ ವಾಸಕ್ಕೆ ಅಣಿಗೊಂಡಿರುವೆ ಕಣಪ್ಪಾ.. ಆಕೆಯು ತನ್ನ ಸೋದರಿಯರಾದ ಸುಂಕಲೀ, ಚವುಡೀ, ವುಡುಸಲೀ, ಮಾರೀ, ಮಸಣಿಯರೇ ಮೊದಲಾದವರೊಂದಿಗೆ ದಯಮಾಡಿಸ್ಯಾಳ.. ವಬ್ಬೊಬ್ಬರು ವಂದೊಂದು ಮುಗವನ್ನು ವಾಹನ ಮಾಡಿಕೊಂಡು ದಯಮಾಡಿಸವರೆ.. ತಮ ವಂದೊಂದು ಕಯ್ಲಿ ವಂದೊಂದು ಆಯುಧವನ್ನು ಹಿಡಿದುಕೊಂಡವರೆ.. ನಾನಾ ನಮೂನಿ ಪಕ್ಷಿಗಳನ್ನು ತಮ್ಮ ತಮ್ಮ ತುರುಬುಗಳಿಗೆ ಹುದ್ವಿನೋಪಾದಿಯಲ್ಲಿ ಮುಡುದವರೆ.. ಬೀರೇಳು ಲೋಕಗಳಿಗೆ ಕೇಳಿಸುವಂತೆ ನಗಾಡುತವರೆ, ಅಗೋ