ಪುಟ:ಅರಮನೆ.pdf/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩೧ ವುದ್ವಿಗ್ನರಾಗುವುದು, ಭಾವಪರವಸರಾಗುವುದು ಯಿವರ ದವುರುಬಲ್ಯವು.. ಯಾಕಾದರು ತಾನು ಸಿರಿವಂತರ ಬಡವರ ನಡುವೆ ಅಂತರವನ್ನು ಸರಿಪಡಿಸಬೇಕಿತ್ತು.. ಕಾಯಿದೆ ಕಾನೂನುಗಳನ್ನು ತನ್ನ ಕಯ್ದೆ ತೆಗೆದುಕೊಳ್ಳಬೇಕಿತ್ತು.. ತಾನೇ ಎಂದು ಸರಕಾರವೆಂಬ ಭ್ರಮೆಯನ್ನುಂಟು ಮಾಡಬೇಕಿತ್ತು. ಆತನಿಗೆ ವಾಸ್ತವದ ಅರಿವಿತ್ತಾ? ವಬ್ಬರ ಸ್ಥಿತಿ ಸುಧಾರಿಸಲಾಗಿ ಯಿನ್ನೊಬ್ಬರನ್ನು ಬಡವರನ್ನಾಗಿ ಪರಿವರ್ತಿಸಿದ್ದು ನ್ಯಾಯವಾ? ಯಿಂಥವರಿಗೆ ಪುರಾಣ ಮುಖ್ಯವಾಗುತ್ತದೆಯೇ ಹೊರತು ವರಮಾನವಲ್ಲ. ಯಂಥವರು ಪುರಾಣದ ನಾಯಕರಾಗಲು ಹಾತೊರೆಯುತ್ತಾರೇ ವಿನಾ ಜನಸಮುದಾಯದ ನಾಯಕರಾಗಲು ಅಲ್ಲ... ತಾನು ಮಾಡಿದ್ದೇ ಸರಿ. ತಾನೀ ನಿಲ್ಲಯ ತಗೊಂಡಿದ್ದು ಯಿದ್ದಕ್ಕಿದ್ದಂತೆ ಅಲ್ಲ.. ಹಲವು ದಿನಗಳ ಕಾಲ ಕೂಲಂಕಷ ಯೋಚನೆ ಮಾಡಿದ ನಂತರವೇ.. ಮಿಷೆಲ್ಲ ಯೋಚಿಸುವ ತಾನೂ ವುದ್ವಿಗ್ನಗೊಳ್ಳದೆಯಿರಲಿಲ್ಲ.. ತಾನು ನಿರಾಪರಾಧಿಯಂದು ಸಾಬೀತು ಮಾಡುವ ಪ್ರಮೇಯ ಯೇನಿತ್ತು? ಮನೋ ತನ್ನನ್ನು ತಾನು ಸಮಾಧಾನಪಡಿಸಿಕೊಳ್ಳುತ್ತ.. ನಾಗಿರೆಡ್ಡಿಯಿಂದ ಬಿಡುಗಡೆ ಪಡೆಯಲು ಸರಥಾ ಯತ್ನಿಸುತ್ತೆ. ಅವನನ್ನು ಮರೆಯಲೋಸುಗ ತನ್ನ ಸ್ವಾಟೆಂಡು, ತನ್ನ ಗ್ಲಾಸೋವಾಗಳೇನೆಲ್ಲವನ್ನೂ ನೆನಪಿಸಿಕೊಳ್ಳುತ್ತ ಅವಸರ ಬವಸರದಿಂದ ಬಳ್ಳಾರಿ ನಗರವನ್ನು ಯರಡು ದಿನಗಳ ಹಿಂದೆಯೇ ವದಲಿದ್ದ ಕಾರಸೂಚಿಯಂತೆ ತಾನು ಯೀ ದಿನ ವದಲಬೇಕಿತ್ತು. ಆದರೆ ಮೂರುವ ನಿಲ್ದಾರಿತ ನ್ಯಾಯ ಯಿಚಾರಣೆಯನ್ನು ಕೂತಲ್ಲಿಂದಲೇ ಮೊಹಿಸಿಕೊಳ್ಳುವ ಹಿಂಸೆಯ ಭಯ ಕಾಡಿತ್ತು. ಆತನ ಕಳೇಬರದ ಮ್ಯಾಲ ಪುಷ್ಪಗುಚ್ಚ ಯಿರಿಸುವಾಗ ತಾನು ಚಿಕ್ಕ ಮಗುವಿನಂತೆ ಅಳುವ ಸಾಧ್ಯತೆ ಯಿಲ್ಲದಿರಲಿಲ್ಲ.. ಆದರ ತನ್ನೆದೆಯೊಳಗಿನ ನ್ಯಾಯಾಲಯವಿನ್ನೂ ಬರಖಾಸ್ತಾಗಿಲ್ಲವಲ್ಲ...ತನ್ನೆದೆಯ ಕಟಕಟೆಯೊಳಗ ರೆಡ್ಡಿಯು ಧೀರೋದಾತ್ತ ನಿಲುವಿನಿಂದ ನಿಂತಿರುವನಲ್ಲಾ... ಯಿದು ಮನೋನ ಕುಟಿಲೋಪಾಯ ಯಂದು ಸಾರಿ ಸಾರಿ ಹೇಳುತ್ತಿರುವನಲ್ಲಾ... ತೀರನ್ನು ಮನಸ್ಸಿನೊಳಗ ಯಿಟ್ಟುಕೊಂಡಿರುವ ನ್ಯಾಯಾದೀಶ ಗೋಲ್ಡಿಂಗ್ ಹ್ಯಾಂ ಶ್ರವಣೇಂದ್ರಿಯದ ಸಹಾಯವಿಲ್ಲದೆ ಹೇಳಿಕೆಯನ್ನು ಆಲಿಸುತ್ತಿರುವನಲ್ಲ.. ಓಹ್ ಗೋಲ್ಡಿಂಗ್ ಹ್ಯಾಂ! ಓಹ್ ಸ್ವೀಡನ್ನಿನ ಸತ್ಪ್ರಜೆಯೇ.. ಓಹ್ ಧರುಮ ಪ್ರಚಾರಕನಾಗಲೆಂದೇ ಯಿಂಡಿಯಾಕ್ಕೆ ಬಂದವನು ಗವನ್ನರನ ಸಲಹೆಗೆ ಮನ್ನಣೆ ಕೊಟ್ಟು ನ್ಯಾಯಾಧೀಶನಾದವನೇ! ಯಿಂಥದೊಂದು ಯಿವೇಚನಾ ರಹಿತ ತೀರು ಕೊಡಲು ಆತ ಮೊದ ಮೊದಲು ವಪ್ಪಲಿಲ್ಲ...