ಪುಟ:ಅರಮನೆ.pdf/೩೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩೩ ಸರಕಾರ ಯಂದರೆ ಯಾರು? ಅದಕ್ಕೊಂದು ಸಂವಿಧಾನ, ಶಿಕ್ಷಾಸಂಹಿತೆ ರೀತಿ ರಿವಾಜು ಯಿರುವುದೇ? ಸರಕಾರ ಯೇಕಮುಖವಾಗಿ ಆಪಾದಿತನ ಯಿರುದ್ದ ಅಪರಾಧಗಳ ಜಾಬಿತ ಸಲ್ಲಿಸಿರುವುದು ಯಷ್ಟರ ಮಟ್ಟಿಗೆ ಸರಿ? ಆಪಾದಿತನು ಮಾಡಿರುವ ಗುರುತರ ಅಪರಾಧಗಳು ಯಾವುವು? ಸಾಕ್ಷಿ ಪುರಾವೆಗಳು ವಂದಾದರು ಯಿರುವವಾ? ಯಿಂಥ ನಿರಂಕುಶ ಯಿಚಾರಣೆಯಿಂದ ನಾಗರಿಕನೋಗ್ರನ ಸಾಧ್ವಜನಿಕ ಜೀವನದ ಮಾಲ ಹಲ್ಲೆ ನಡೆಸಿದಂತೆ ಆಗುವುದಿಲ್ಲವೆ? ಯಂದು ಮುಂತಾಗಿ ನಿರರಳವಾಗಿ ವಾದ ಮಂಡಿಸುತ್ತಿರುವ ಶಾಸ್ತ್ರಿಗಳು.. ಯೀ ಕೂಡಲೆ ತಮ್ಮ ಕಕ್ಷಿದಾರನನ್ನು ಬಿಡುಗಡೆ ಮಾಡಬೇಕೆಂದೂ, ಕ್ಷಮೆ ಕೋರುವುದರ ಮೂಲಕ ಸರಕಾರ ತನ್ನ ಘನತೆಯನ್ನು ಕಾಪಾಡಿಕೊಳ್ಳಬೇಕೆಂದೂ ಮನವಿ ಮಾಡಿಕೊಂಡರೆಂಬಲ್ಲಿಗೆ.... ಬ್ಯಾರಿಸ್ಟರ್ ಪದವಿಯ ಕನಸು ಕಾಣುತಲಿದ್ದ ನೀಲಕಂಠರಾಯರಲ್ಲಿ ಪ್ರಾಣ ಯಿರಲಿಲ್ಲ. ನ್ಯಾಯಾಲಯ ಪ್ರವೇಶ ಮಾಡಿದೊಡನೆ, ಆಪಾದಿತನ ಮುಖ ನೋಡಿದೊಡನೆ ನಿತ್ರಾಣ ಗೊಂಡಿದ್ದರು. ನಾಲಗೆಯನ್ನು ತೇವ ಮಾಡಿಕೊಳ್ಳಲೋಸುಗ ಜಾವ ಜಾವಕೊಂದೊಂದು ಸಲ ನೀರು ಕುಡಿಯುತಲಿದ್ದರು. ತಾವು ಯಲ್ಲೋ ಯಿರುವ ಗವರರು ಜನರಲ್ಲನ, ಕಲೆಟ್ಟರ ಸಾಹೇಬನ ಗಮನಕ್ಕೆ ಬೀಳಬೇಕೆಂಬ ವುದ್ದಿಶ್ಯದಿಂದ ಸದರಿ ಆಪಾದಿತನು ಕಾನೂನನ್ನು ತನ್ನ ಕಯ್ ತಗೊಂಡು ಗುರುತರ ಅಪರಾಧ ಯಸಗಿರುವನಂದೂ, ಸಾಕ್ಷಿ ಪುರಾವೆಗಳಿಲ್ಲ ಯಂದ ಮಾತ್ರಕ್ಕೆ ಕ್ಷಮಿಸಬಾರದೆಂದೂ, ಮರಣದಂಡನೆಯನ್ನು ಯಿಧಿಸಬೇಕೆಂದೂ ವಾದ ಮಂಡಿಸದೆ ಯಿರಲಿಲ್ಲ.. ಯೋ ಪ್ರಕಾರವಾಗಿ ವಾದ ಪ್ರತಿವಾದ ಬಹಳ ಹೊತ್ತಿನ ತನಕ ನಡೆಯಿತು... ಯೀ ಹಿಂದೆಯೇ ಬರೆದಿಟ್ಟುಕೊಂಡಿದ್ದ ಅದನ್ನು ಪುನರ್ ಪರಿಸೀಲಿಸಿ ಥಾಮಸು ಮನೋ ಅಂಗೀಕಾರ ಮುದ್ರೆವತ್ತಿದ್ದ, ಯಲ್ಲಾ ಧರ ಗ್ರಂಥಗಳ ಆಶಯಗಳಿಗೆ ಯಿರುದ್ದ ಯಿದ್ದಂಥ ತೀರನ್ನು ಪಠಣ ಮಾಡುವಾಗ ಹ್ಯಾಂ ಸಾಹೇಬರು “ದೇವರೇss ಖಂಡಿತ ನೀನು ನನ್ನನ್ನು ಕ್ಷಮಿಸುವುದಿಲ್ಲ.” ಯಂದು ಮನದೊಳಗೆ ಅಂದುಕೊಂಡರು. ಹಲವು ಪುಟಗಳಿದ್ದ ಅದನ್ನು ಮೋದುವಾಗ್ಗೆ ಅವರ ದ್ವನಿಯ ಕಂಪನಗೊಳ್ಳದೆ ಯಿರಲಿಲ್ಲ. ಮೋದಿದರೂ.. ಮೋದಿದರೂ.. ಮೋದುತ್ತಲೇ ಹೋದರು. ಕೇವಲ ಯರಡು ವಾಕ್ಯಗಳು ಮಾತ್ರ ಬಾಕಿ ವುಳಿದವು... ಮೆಲ್ಲಗ ತಲೆಯೆತ್ತಿ ಆಪಾದಿತನ ಮುಖ ನೋಡಿದರು.. “ರೆಡ್ಡಿಗಾರು.. ನೀವು