ಪುಟ:ಅರಮನೆ.pdf/೩೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩೫ ಮಾದೇವss ಅತ್ತ ಯಿಮ್ಮಡಿ ಸೋಮಶೇಕರ ಮಾರಾಜನ ಕಯ್ಯಂದ ಪಾರಿತೋಷಕ ಪಡೆವು. ಬಾಯಿಯಿಂದ ರಣಭಯಂಕರ ಯಂದು ಹೊಗಳಿಸಿಕೊಂಡಿದ್ದಂಥ ಭರಮನಗೌಡನು ಸೂರ ಸಿಪಾಯಿ ದಂಡೋಜಿ ಜೊತೆ ಅದು ಯಿದು ಮಾತಾಡುತ್ತಾ ಮಾತಾಡುತ್ತಾ ಫಲಾನ ದಿವಸದಂದು ಹರಪನಳ್ಳಿಯ ಬಿಡದಿ ಮನೆಯಲ್ಲಿ ಕಳೆದೆರಡು ದಿವಸಗಳಿಂದ ಸ್ಕೂವರನ ಕರೆಗಾಗಿ ಯದುರು ನೋಡುತಲಿದ್ದನು. ಅಲ್ಲಿ ಆತನು ಯಾರೊಂದಿಗೂ ಕಲೆಯುವಂತಿರಲಿಲ್ಲ... ಪಟ್ಟಣದ ಯಾವ ಕಡೆಗೂ ಹೋಗುವಂತಿರಲಿಲ್ಲ.. ತನ್ನ ಬಳಿಗೆ ಬಂದು ಹೋಗುತ್ತಿದ್ದಂಥವರು ಸೂಜಿಗೆ ಮುದ್ದು ಕೊಟ್ಟಂತೆ ಅಗಾಧವಾಗಿ ಮಾತಾಡುತಲಿದ್ದರು. ಕ್ರಮೇಣ ಅವಯ್ಯಗೆ ಅದ್ಧವಾದದ್ದೇನೆಂದರೆ ತನ್ನನ್ನು ಗುಹಬಂಧನದಲ್ಲಿ ಯಿರಿಸಲಾಗಿದೆ ಯಂಬ ಸಂಗತಿಯು.. ಪಲಾಯನ ಮಾಡಬೇಕೆಂದರೆ. ಅದೂ ಆಗುತ್ತಿಲ್ಲ.. ಯೇನು ಮಾಡುವುದಪ್ಪಾ ಯಂದು ಗವುಡನು ಯಸನ ಮಾಡುತ್ತಿರಬೇಕಾದರ ವಂದಿಬ್ಬರು ಸಿಪಾಯಿಗಳು ಬಂದು ಕರದೊಯ್ದು ಸ್ಕೂವರನೆದುರು ಹಾಜರುಪಡಿಸಿದರು. ಅದೇ ಮೊದಲ ಸಲಕ್ಕೆ ತಾವಿಬ್ಬರು ಪರಸ್ಪರ ಭೆಟ್ಟಿಯಾದದ್ದು. ವಟ್ಟೆ ಖಡುಗದಂತಿರುವನು ಗವುಡ ಯಂದು ಕುಂಪಣಿ ಅಧಿಕಾರಿಯೂ, ವಳ್ಳಿ ಮೀಟಿ ಯಿದ್ದಂತಿರುವನು ಸ್ಕೂವರು ಯಂದು ಗವುಡನೂ ಅಂದುಕೊಂಡರು. ಸ್ಕೂವರನು ತರುವಾಯ ವಂದರ ಮಾಲ ವಂದರಂತೆ ಪ್ರಶ್ನೆಗಳನ್ನು ಹಾಕುತ್ತ ಹೋದನು. ಅದಕ ಗವುಡನು ಪ್ರತಿಯೊಂದಕ್ಕೂ ಸಮಚಿತ್ತದಿಂದ ಜವಾಬು ಕೊಡುತ್ತ ಹೋದನು. ತಾನು ಕುಂಪಣಿ ಸರಕಾರದ ಯಿರುದ್ಧ ಯಾವುದೇ ಮೂರನ್ನು ಯತ್ತಿ ಕಟ್ಟುತ್ತಿಲ್ಲವೆಂದೂ, ಫಲಾನರುಗಳಲ್ಲಿ ತಲೆದೋರಿರುವ ಅರಾಜಕತೆಯನ್ನು ಹೋಗಲಾಡಿಸುವ ಸಲುವಾಗಿ, ಸುಖ ನೆಮ್ಮದಿ ನೆಲೆಗೊಳ್ಳುವಂತೆ ಮಾಡುವ ಸಲುವಾಗಿ ಸಂಚಾರ ಮಾಡುತ್ತಿರುವುದಾಗಿ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದನು. ಅದಕ್ಕಿದ್ದು ಅಧಿಕಾರಿಯು ಯಿದಕ್ಕೆ ಸರಕಾರದ ಪರವಾನಿಗೆ ಪಡೆಯಬೇಕಿತ್ತಲ್ಲಾ ಯಂದು ಕೇಳಿದ್ದಕ್ಕೆ ಆ ರಣ ಭಯಂಕರ ಬಿರುದಾಂಕಿತನು ಯಾವ ಸರಕಾರ? ಯಾಕ ಪಡೆಯಬೇಕು? ಯಂದು ತುಟಿ ಜಾರಿ ನುಡಿದು ಯಿರುಕಿನಲ್ಲಿ ಸಿಕ್ಕುಕೊಂಡನು. ಅಂಥದೇ ಜವಾಬಿಗಾಗಿ ಯದುರು ನೋಡುತಲಿದ್ದ ಅಧಿಕಾರಿಯು “ಹಾ.. ಯಾವ ಸರಕಾರ? ಯಾಕ ಪರವಾನಿಗಿ?” ಯಂದು