ಪುಟ:ಅರಮನೆ.pdf/೩೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೩೬ ಅರಮನೆ ವುದ್ದರಿಸುತ್ತ ತನ್ನ ಕಣ್ಣುಗಳನ್ನು ಕೆಂಜಗ ಮಾಡಿಕೊಂಡನು. ಯೇ ಜವಾಬು ಯಿದ್ರೋಹದ ಸುಳಿವು ನೀಡುವುದೆಂದೂ, ಯದನ್ನು ವಾಪಾಸು ತಕ್ಕೊಂಡು ತನ್ನ ಚಾವಡಗಳನ್ನು ಮುಟ್ಟಿ ಕ್ಷಮೆ ಯಾಚಿಸಬೇಕೆಂದೂ ಹುಕುಂ ಮಾಡಿದನು. ಅದನ್ನು ಕೇಳಿದೊಡನೆ ನಿಂತ ನಿಲುವಿಕೀಲೆ ಧಗ ಧಗಾಂತ ವುರಿದ ಗವುಡನು ಅಂಥ ಗುರುತರ ಅಪರಾಧ ತಾನು ಮಾಡಿಲ್ಲವೆಂದೂ, ಪ್ರತಿಯೊಂದು ಕ್ರಿಯಾಕಟ್ಟಲೆಗೆ ಪರವಾನಿಗಿ ಪಡೆಯಬೇಕೆಂದರ ಹೆಂಗಾದೀತು ಯಂದು ಹೇಳುತ್ತ ಯದೆಸೆಟೆಸಿದನು. ಸ್ಕೂವರನು ತಾನಿದ್ದಲ್ಲಿಂದ ಯದ್ದು ಬಂದು ಅವಯ್ಯನ ಸುತ್ತ ವಂದು ಪರದಕ್ಷಿಣೆ ಹಾಕಿ, ಮುಖದಲ್ಲಿ ಮುಖಯಿಟ್ಟು ತೀಕ್ಷವಾಗಿ ದಿಟ್ಟಿಸಿ “ಹುಲಿಯನ್ನು ಕೊಂದು ಹುಲಿ ನಾಮನ್ನೂ, ಕರಡಿಯನ್ನು ಕೊಂಡು ಕರಡಿ ಯಿನಾಮನ್ನೂ ಪಡಕೊಂಡಿರುವಿಯಂತಲ್ಲಾ ಯಿದು ನಿಜವೇನು?” ಯಂದು ಯ್ಯಂಗ್ಯದಿಂದ ಪ್ರಶ್ನಿಸಿದನು. ಅದಕೆ ಗವುಡ “ಹೂ..' ಯಂದಷ್ಟೆ ಹೇಳಿದನು. ಸದರಿ ನೆಲದ ಗುಣವೇ ಯಿಂಥಾದ್ದು. ಯಿಲ್ಲಿ ಬೆಕ್ಕೂ ಹುಲಿಯಂತೆ ಘರನೆ ಮಾಡುವುದು ಯಂಬುದಕ್ಕೆ ಯೀ ಸೂರನೇ ನಿದರನ.. ಯಂದಂದುಕೊಂಡ ಸ್ಕೂವರನಲ್ಲಿದ್ದ ಎಂದು ಯಿಶೇಷ ಸಂಗತಿಯೆಂದರೆ ತನ್ನ ಪ್ರಯಾಣದ ಕಾಲದಲ್ಲಿ ಆಯಾಯಾ ಸೀಮೆಯ ಯಿತಿಹಾಸದ ಪುಟಗಳನ್ನು ತಿರುವಿಹಾಕುವುದು.. ಅದರಂತೆ ತಾನಿಲ್ಲಿಗೆ ಬರುವ ಮೊದಲು ಹರಪನಹಳ್ಳಿಯ ನೂರಿನ್ನೂರು ವರುಷಂಗಳ ಚರಿತ್ರೆಯನ್ನು ವಂದಕ್ಕರ ಬಿಡದಾಂಗ ಬಾಯಿಪಾಠ ಮಾಡಿಕೊಂಡಿದ್ದನು. ಯಿದರಿಂದಾಗಿ ಭರಮನ ಗವುಡಗೆ ಸಂಬಂಧಿಸಿದ ಪ್ರತಿಯೊಂದು ಯಿವರನೂಸದರಿ ಅಧಿಕಾರಿಯ ತುದಿ ನಾಲಗೆ ಮ್ಯಾಲ ಯಿತ್ತು. ನಿನ್ನೆ ಮೊನ್ನೆ ಅಯಿವತ್ತನ್ನು ದಾಟಿದ್ದಿರಬವುದಾದ ಗೌಡನಿಗೆ “ಚಾವುಡ ಚುಂಬಿಸಿ ನೀನು ನಿನ್ನ ಯಿನಾಮುಗಳನ್ನು ಕಾಪಾಡಿಕೊಂಡು ಹೆಂಡರು, ಮಕ್ಕಳು, ಮೊಮ್ಮಕ್ಕಳೊಂದಿಗೆ ಸುಖವಾಗಿರು” ಯಂದು ಮರು ಯಚ್ಚರಿಕೆಯನ್ನು ನೀಡಿದನು. ಅದಕ್ಕಿದ್ದು ಗವುಡನು “ತಾನಿಂಥ ಹೀನ ಕ್ರುತ್ಯ ಯಸಗಿ ನೂರು ವರುಷಂಗಳ ಪಲ್ಯಂತ ಬದುಕಲು ಯಿಷ್ಟ ಪಡುವುದಿಲ್ಲ” ಯಂದು ಖಡಾಖಂಡಿತವಾಗಿ ಜವಾಬು ನೀಡಿದನು. ಅಧಿಕಾರಿಯ ಪಾಳೆಯದಲ್ಲಿದ್ದ ಕೆಲವರು “ಚುಂಬಿಸಿದಲ್ಲಿ ತುಟಿ ಸವೆತಾವೇನು? ಸಣು ಮಾಡಿದಲ್ಲಿ ಕಯ್ಯ ಮೊಂಡಾಗುತಾವೇನು? ಕ್ಷಮಾ ಕೇಳಿದಲ್ಲಿ ಬಾಯಿ ವಣಗುತಾದೇನು? ಹೇಳಿಧಾಂಗ ಕೇಳಿಬಿಡಯ್ಯಾ ಕೇಳಿಬಿಡು” ಯಂದು ಮೂರೂ ಬಿಟ್ಟಿದ್ದವರಂತೆ ವಬ್ಬರ ಹಿಂದ