ಪುಟ:ಅರಮನೆ.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನೋಡಲ್ಲಿ” ಯಂದು ಬೊಟ್ಟು ಮಾಡಿ ತೋರಿಸಿತೆಂದರೆ ನಂಬುವುದಾ? ನಂಬದಂಗ ಯಿರುವುದಾ? ಯಿದೆಂಥಾ ಕಣಸಿದ್ದೀತಪ್ಪಾ ಸಿವನೇ..... ಯಿವಯ್ಯ ನೋಡಲಾಗಿ ಆ ತಾಯಿಯು ನೆಲಮುಗುಲಿಗೇಕಾಗಿ, ಭೂಮಿಗಾತುರದವಳಾಗಿ, ಗೋಚರ ಮಾಡಿದಳಂತೆ.. ವಂದೊಂದು ಹೆಜ್ಜೆಗೆ ವಂದೊಂದು ಲೋಕವನ್ನಳೆದಳಂತೆ.. ಗುಡುಗು ಸಿಡಿಲುಗಳನ್ನು ತನ್ನ ನಾಲಗೆ ಮ್ಯಾಲ ವಟ್ಟಿ ಕೊಂಡಿದ್ದಳಂತೆ. ಮಿಂಚು ಕೋಲ್ಮೀಂಚುಗಳನ್ನು ತನ್ನ ಕಣ್ಣೆಳಗೆ ಮಡುಗಿದ್ದಳಂತೆ. ಅಷ್ಟ ದಿಗ್ಗಜಗಳ ರಸಾಸ್ವಾದನೆಯನ್ನು ತಾನು ಮಾಡುತ್ತಿದ್ದಳಂತೆ.. ಸಿವನೇ..... ಅಂಥಾ ತಾಯಿಯನ್ನು ತನ್ನ ಕಣಸೊಳಗ ಅದೇ ಮೊದಲ ಸಲ ನೋಡಿದ ವನಾದ ಯವನು ಬೆಕ್ಕಸ ಬೆರಗಾದ ನ೦ತ, ಮೂಕಯಿಸುಮಿತನಾದನಂತೆ.. ಯದೆ ಝಲ್ಲಂದಂಗಾತಂತೆ.. ಕಣ್ಣು ಕುಕ್ಕಿ ದಂಗಾತಂತೆ. ವುಗುಳು ಗಂಟಲ ಹೊಸ್ತಿಲ ಬಳಿ ಮಡುಗಟ್ಟಿ ನಿಂತಂಗಾತಂತೆ.. ಚೂರುಪಾರು ಸಗುತಿಯನ್ನು ನಾಲಗೆಗೆ ತಂದುಕೊಂಡು - “ಕ್ಲಾಂ.. ಹಾಂ... ತಾಯಿ. ತಾಯಿ ಅಂದರ ನೀನೆ ಕಣವ್ಯಾ. ನಿನ್ನ ದರುಸನದಿಂದ ಜಲುಮ ಸಾರಕ ಆಯಿತವ್ವಾ.. ಹೊಕ್ಕೊಳಿಕ್ಕೆ ನಿಂಗೆ ನನ ಸರೀರವೇ ಬೇಕಾಗಿತ್ತೇನವ್ವಾ. ನನ್ನ ಸರೀರದೊಳಗ ಯೇನಂಥ ಸಿರಿ ಸಂಪತ್ತಯ್ತಂತ ಬಂದೀಯವ್ವಾ.. ಯಿದು ಮೊಧೇ ವಂದೊಂದು ಹೆಜ್ಜೆಗೆ ವಂದೊಂದು ಸಬುಧ ಮಾಡುತಯ್ಕೆ.. ಕುಂತರೆ ಯದ್ದೇಳಕಾಗೊಲ್ಲ.. ಯದ್ದರೆ ಕುಂಡಲಕಾಗುತ್ತಿಲ್ಲ. ಜೀವಾತುಮ ಯಂಬುದು ಯಿಲ ಮಿಲನೆ ವದ್ದಾಡುತಯ್ಕೆ. ಯಿದರೊಳಗ ಮಾವುಸಗಿದ್ದ ಮಣ, ರಗುತ ಪಾದೂವರೆ ಯಿದ್ದರ ಮಸ್ತಾದೀತು, ಯಿಂದ್ರಿಯಗಳು ಸವುಕೊಂಡು ಹೋಗ್ಯಾವ, ಯಂಥ ಸರೀರದೊಳಗ ಯೇನು ಅಯಿಭೋಗ ಅಯಿತಂತ ಬಂದೀಯವ್ವಾ. ಹೆಂಗ ವಸ್ತಿ ಯಿರುತೀಯವ್ವಾ.. ಯೇ ನನ್ನ ಮಟ ಮಟ ಮಝಗಿ ಸರೀರದೊಳಗ ಯಾವ ಸುಖನ ಪಡುತೀಯವ್ವಾ..” ಯಂದು ಮುಂತಾಗಿ ಯೇವಯ್ಯ ಮನಾರ ಕೇಳಿಕೊಂಡಿದ್ದಕ್ಕೆ ಸರೀರವು ಪಕಪಕ ನಗಾಡುತ ಹುಚ್ಚಪ್ಪಾ.. ನಾಡ ಹುಚ್ಚಪ್ಪಾ ಅಂದಂಗಾತಂತ, ಮತ್ತ ಯೀತನು.... ನೀ ಹೋಗುತೀನಂದರ ನೀನಿದ್ದಲ್ಲಿಗೆ ಬಂದು ಮಂಡೆ ಕೊಡುತೀನಪ್ಪಾ ಅಂದನಂತೆ.. ಕಂನ್ನು ಮುಗಿತೀನಂದನಂತೆ.. ಕಾಲಿಗೆ ಕಡಕೊಂಡು