ಪುಟ:ಅರಮನೆ.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೩೯ mದರಿಂದ ವುತ್ತೇಜಿತಗೊಂಡ ರಾಯನು ವಂದು ಯಿಶೇಷ ಕಾಗ್ಯಾಚರಣೆ ಪಡೆಯನ್ನು ರಚನೆ ಮಾಡಿ ಅದಕ 'ಸವುಭಾಗ್ಯ' ಯಂಬ ಶಿಕ್ಷಿಕೆಯನ್ನು ಮುಡುಸಿದನು. ಅದಕ ಮುರಾರಿರಾವ್ ಯಂಬ ಪತ್ತೆದಾರನನ್ನು ಮುಖ್ಯಸ್ಥನನ್ನಾಗಿ ನೇಮಿಸಿದನು. ಕೂದಲನ್ನು ಸೀಳಿ ಯರಡು ಹೋಳು ಮಾಡುವುದರಲ್ಲಿ ನಿಷ್ಣಾತನಾದ ಅವಯ್ಯನು ಆ ಕ್ಷಣದಿಂದ ತನಗೆ ಅನುಮಾನ ಬಂದವರ ಮನೆಗಳಿಗೆ ನುಗ್ಗಲಾರಂಭಿಸಿದನು. ಗುಮಾನಿಯಿಂದ ಹಲವರನ್ನು ಬಂಧಿಸಿ ಯಳದು ತಂದು ಪ್ರಶ್ನೆಗಳ ಮಳೆ ಕರೆಯತೊಡಗಿದನು.. ಸವುಭಾಗ್ಯದ ಆ ಯರಡು ನಮೂನೆಗಳನ್ನು ಅಪಹರಣ ಮಾಡಿರಬವುದು, ಅವೆರಡರ ಪಯ್ಕೆ ವಂದನ್ನು ಧಾರಣವಾಗಿ ಕೊಲೆ ಮಾಡಿರಬವುದೆಂಬ ಅನುಮಾನಕ್ಕೆ ಮೊದಲಿಗೆ ಬಂದನು. ಅದರ ಪರಿಣಾಮವಾಗಿ ಸುಬ್ಬಣ್ಣ ನೇತ್ರುತ್ವದ ತರುಣರು ಬಗೆಬಗೆಯ ಹಿಂಸೆಗೆ ತುತ್ತಾದರು.. ಯಷ್ಟೋ ಮಂದಿ ಅಯ್ದಗೇಡಿಗಳು ತಾತ್ಕಾಲಿಕವಾಗಿ ಪಟ್ಟಣವನ್ನು ವದಲಿ ಅಕ್ಕಪಕ್ಕದ ಕುರುಚಲು ಕಾಡುಗಳಲ್ಲಿ ವಾಸ ಮಾಡತೊಡಗಿದರು. ವುಳಿದವರ ಅವಸ್ಥೆಯಂತೂ ಹರಹರ ಮಾದೇವ ಆಗಿಬಿಟ್ಟಿತು.... ಸವುಭಾಗ್ಯ ಪಡೆಯ ಸಿಪಾಯಿಗಳು ಮಾರು ವೇಷದಲ್ಲಿ ಅನತಿ ದೂರದ ಕಂದಗಲ್ಲು ಗ್ರಾಮದಿಂದ ಬುಗುಡಿ ನೀಲಕಂಠಪ್ಪನನ್ನು ಬಂಧಿಸಿ ಯಳ ತಂದು ತಮ್ಮ ಮುಖಂಡನೆದುರು ಹಾಜರು ಮಾಡಿದರು. ತಾಯಕ್ಕಳನ್ನು ಕೊಲೆ ಮಾಡಿದ್ಯಾಕೆ? ಮಾಡಿ ಹೆಣವನ್ನು ಯಲ್ಲಿ ಗಾಯಬ್ ಮಾಡಿರುವಿ? ಆಕೆಯ ಮಗಳಾದ ಚಿನ್ನಾಸಾನಿಯನ್ನು ಯಾವ ದೇಶಕ್ಕೆ ಸಾಗಿಸಿರುವಿ ಯಂಬಂಥ ಪ್ರಶ್ನೆಗಳನ್ನು ಮುಖಕ್ಕೆ ರಾಚಿದಂತೆ ಕೇಳಿ ಮುರಾರಿರಾವ್ ತನ್ನ ಗಿರಿಜಾಮೀಸೆ ತಿರುವಿದನು. ವಾಗ್ ಬಾಣಗಳಿಂದ ಘಾಸಿಗೊಂಡನು ಬುಗುಡಿಯು. ತಾನು ತನ್ನ ಪತ್ನಿಯನ್ನು. ತಾನು ತನ್ನ ಕುವರಿಯನ್ನು!! ಯೇನೆಲ್ಲ ಹೇಳಲುಪಕ್ರಮಿಸಿದನು. ಆದರದೆಲ್ಲ ರಾವ್‌ನ ಕಿವಿ ಮ್ಯಾಲ ಬಿದ್ದರ ತಾನೆ! ನಿಜಕ್ಕೂ ತಾಂರಕ್ಕಳ ಯೀ ಕ್ರುತ್ಯದಿಂದ ತಾನೇ ಸೋತುಂ ಅಡಲ್ಲಾಗಿಬಿಟ್ಟಿದ್ದನು. ಕಳೆದ ರಾತ್ರಿಯಷ್ಟೋ ಹೊತ್ತಿನ ತನಕ ನಕ್ಕೋತ ಕೆಲಕೋತ ತಾಯಿ ಮಗಳೊಂದಿಗೆ ಯಿದ್ದು ಬಂದಿದ್ದನು. ಬರುವಾಗ್ಗೆ ಮುಂದಿನ ದಿನಚರಿಯನ್ನು ರೂಪಿಸಿರದೆ ಯಿರಲಿಲ್ಲ. ಆದರಂತೆ ಮಾರನೆ ದಿನ ಮುಂಜಾನೆ ಬಂದು ನೋಡುತ್ತಾನೆ.. ಬಿಕೋ ಬಿಕೋ.. ಆಳುಕಾಳುಮಂದಿಯನ್ನು ಕೇಳಿ