ಪುಟ:ಅರಮನೆ.pdf/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪ರಿ ಅರಮನೆ ನೋಡುತ್ತಾನೆ.. ಅವರೆಲ್ಲರ ಬಾಯಿಗಳೂ ಸಹ ಬಿಕೋ.. ಬಿಕೋ... ಗೊತ್ತಿರುವ ಜಾಗಗಳನ್ನೆಲ್ಲ ಹುಡುಕಿ ನೋಡುತ್ತಾನೆ. ಅಲ್ಲೂ ಸಹ ಬಿಕೋ ಬಿಕೋ.. ಕೊಲೆ ಅಥವಾ ಅಪಹರಣ.. ಯೀ ಯರಡೂ ಅನುಮಾನಗಳು ತನಗೂ ಬಾರದೆಯಿರಲಿಲ್ಲ.. ಹೊತ್ತಿಗೆ ತೆಗೆಸಿ ಕೇಳುವ ಸಲುವಾಗಿ ಮಲ್ಲಾರಿದೀಕ್ಷಿತರಿದ್ದ ಕಂದಗಲ್ಲಿಗೆ ಹೋಗಿದ್ದನು. ಅವರ ಮವುನರೊತ ವಂದೆರಡು ದಿವಸಗಳಲ್ಲಿ ಮುಗಿಯಲಿದ್ದುದರಿಂದ ಅದೇ ಗ್ರಾಮದಲ್ಲಿದ್ದ ತಮ್ಮ ದೂರದ ನೆಂಟರ ಮನೆಯಲ್ಲಿ ವಾಸ್ತವ್ಯ ಮಾಡಿದ್ದನು.. ಅಲ್ಲಿಗೆ ಬರಲಕ ತಾನು ಯಾರಿಗೂ ಹೇಳಿರಲಿಲ್ಲ. ಕೇಳಿರಲಿಲ್ಲ... ಬಹಿರೊಸಗೆ ಯಂದು ಹೊರಟವನು ಸವುಡ ಮಾಡಿದ್ದು ಕಂದಗಲ್ಲು ಸರಹದ್ದಿನಲ್ಲಿ.. ಯದು ವಂದು ಗುನೇಃ ಆಗಿ ಪರಿಣಮಿಸಿಬಿಟ್ಟಿತ್ತು. ತನ್ನದೇ ಆದ ವಂಖರಿ ದ್ವಾರಾ ಅಪರಾಧಿಗಳನ್ನು ನಿರಾಪರಾಧಿಗಳನ್ನಾಗಿಯೂ, ನಿರಾಪರಾಧಿಗಳನ್ನು ಅಪರಾಧಿಗಳನ್ನಾಗಿಯೂ ಪರಿವತ್ತನೆ ಮಾಡುವುದರಲ್ಲಿ ಸಿದ್ಧಹಸ್ತನಾದ ಮುರಾರಿರಾವನು ಬಾಂಛೇದು ಯನ್ನುವುದರಲ್ಲಿದ್ದನು. ಆಗ ಬುಗುಡಿಯು ತಾನು ಮಾಜಿ ಪಟ್ಟಣಸ್ವಾಮಿಯಂದೂ, ಕುಂಪಣಿ ಸರಕಾರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ವತನದಾರನೆಂದೂ.. ತನಗಪಮಾನ ಮಾಡಿದವರು ನಾವು ಕರಿ ಕಳೆದುಕೊಳ್ಳುವರೆಂದೂ.. ಹೇಳಿ ಸಂದಾಯವಾಗಲಿದ್ದ ಶಿಕ್ಷೆಗೆ ಲಗಾಮು ಹಾಕಿದನು. ಸಮಯಕ್ಕೆ ಸರಿಯಾಗಿ ವಂದು ಕಡೇಲಿಂದ ಆಪಾದಿತನ ಧರುವ ಪತಿ ಗವುರವ, ಯಿನೊ೦ದು ಕಡೇಲಿಂದ ಖುದ್ದ ಯಂಕೋಬರಾಯನು ಬಂದರು. ಮೂರುವಾಗ್ರಹಗಳಿದ್ದರೂ ರಾಯನು ಸರಕಾರದ ಪರವಾಗಿ ಬುಗುಡಿಯಲ್ಲಿ ಕ್ಷಮೆ ಯಾಚಿಸುತ್ತಿರುವಾಗ.... ಅತ್ತ ಮಾನ್ಯರ ಮಸಲವಾಡದಲ್ಲಿ ಯಾವ ಚಿಂತೆಯಿಲ್ಲದೆ ತಾಯಕ್ಕ ಮಗಳೊಂದಿಗೆ ವುಳುಕೊಂಡು ರೋಮಾಂಚನಕ ಮರು ನಾಮಕರಣ ಮಾಡಿದ್ದಳು. ಮಲಗಿದಾಗೆಲ್ಲ ಭೂತಭುಜಂಗನಾಥರು ಕಣಸೊಳಗೆ ಮೂಡಿ ಮಧುರ ಹಳೆ ನೆನಪುಗಳನ್ನು ಕೆದಕಿ ತಿಕ್ಕಿ ಥಳಥಳ ಹೊಳೆಯುವಂತೆ ಮಾಡುತ್ತಿದ್ದುದರಿಂದ ಕೂಡ್ಲಿಗಿ ಕಡೇಕ ಮುಖ ಮಾಡಲು ಮನಸ್ಸೇ ಆಗಿರಲಿಲ್ಲ... ಗತಿಸಿದ ಗುರುಗಳ ಪ್ರೇರಣೆಯಿಂದಾಗಿ ತಮ್ಮ ಬೇಕು ಬೇಡಗಳನ್ನು ಮ್ಯಾಲಿಂದ ಮ್ಯಾಲ ಯಿಚಾರಿಸುತ್ತಿರುವ ನಾಥ ಸಂಪ್ರದಾಯದ ಶಿಷ್ಯ ರುಂದವು.. ಸೊರಗವೇ ಕಡಕೊಂಡು ಬಿದ್ದು ಮೂರಾಗಿರುವಂತೆ ಭಾಸವಾಗುತ್ತಿರುವ ಮಾನ್ಯರ