ಪುಟ:ಅರಮನೆ.pdf/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೪೧ ಮಸಲವಾಡವು.. ಜಾಗ ನಿಖಾಲಿ ಮಾಡಲು ಮನಸ್ಸಾಗುವುದೆಂದರೆ.. ಸಾವುರ ವರುಷಗಳ ಪಠ್ಯಂತ ಬದುಕಿದ್ದು ದೀನದಲಿತರನ್ನುದ್ಧಾರ ಮಾಡಬೇಕಿದ್ದ ಭೂತಭುಜಂಗನಾಥರು ಯಾವ ಪಾಪಕ್ಕೆ ಅಕಾಲ ಮರಣಕ್ಕೆ ತುತ್ತಾದರು? ಕಣಸೊಳಗ ಬಂದಾಗ ಸದರಿ ಅನುಮಾನವನ್ನು ಪ್ರಸ್ತಾಪಿಸಬೇಕೆಂದು ತಾಯಕ್ಕ ಪ್ರತಿರಾತ್ರೀಅಂದುಕೊಳ್ಳುತ್ತಿದ್ದಳು. ಆದರೆ ನಾಥರ ಚಮತ್ಕಾರದ ಮಾತುಗಳೆದುರು ಮರೆತು ಬಿಡುತಲಿದ್ದಳು. ಯಲ್ಲಿಯ ತಾರಾನಗರದ ತಾನು? ಯಲ್ಲಿಂಯ ಮಾನ್ಯರ ಮಸಲವಾಡ ಅವರು? ಯಂದಾಕೆ ಬಿಟ್ಟ ನಿಟ್ಟುಸಿರು.. ಹಿಂಗ ಸುತ್ತನ್ನಾಕಡೇಕ ವಂದಲ್ಲಾ ಎಂದು ಯಿದ್ಯಾಮಾನವು ಸಂಭವಿಕೆ ಮಾಡುತಲಿದ್ದಾಗ.. ಅತ್ತ ಕುದುರೆಡವು ಪಟ್ಟಣ ಯಂಬುವ ವರಮಾನದ ಅಗಾಧದೊಳಗ. ಸೂರನು ಪರಾಕ್ರಮ ಮೆರೆಯುತ್ತ ದೂರುವಾಶ್ರಮದ ವಾಸಣೆಗುಂಟ ಬಂದು ವುದ್ದಕ ಮಲಕ್ಕೊಂಡಿದ್ದ ವಸ್ತಿಯನ್ನು ಅಂದರ ಮೋಬಯನನ್ನು ನಖ ಶಿಖಾಂತ ಮುಸು ಮುಸನೆ ಮೂಸಿತಲ್ಲಾ.. ಅದರ ಸುದೀಪ್ಪ ವಾಕ್ಯಗಳಂಥ ನಿಚುವಾಸಗಳು ಬರೆ ಹಾಕಿದಂಗ ಅಟೆದಿದ್ದವಲ್ಲಾ.. ಅದು ತನ್ನ ಮೊಳವರೆ ನಾಲಗೆ ತೆಗೆದು ಅವಯ್ಯನ ಸರೀರದ ಮ್ಯಾಲಣ ವಂದೊಂದು ಸೈದರಂದ್ರವನ್ನು ನೆಕ್ಕಿ ಕಾಮಗಾರಿ ಮಾಡಿತ್ತಲ್ಲಾ.. ಆ ಕ್ರಿಯೆಯ ಮೂಲಕ ಅದು ಯಂಥದೋ ಸಂದೇಸಗಳನ ರವಾನಿಸುತ್ತಿತ್ತಲ್ಲಾ.. ಅದು ಯಲ್ಲಿ ತನ್ನನ್ನು ಹೊತ್ತೊಯ್ದು ಜಗಲೂರಿ ರಂಬುವ ಬಂದಿಖಾನೆಯೊಳಗೆ ಹಾಕಿ ಬಿಡುವುದೋ ಯಂದೊಂದರಗಳಿಗೆ ಮೋಬಯ್ಯನು ಅಲ್ಲೋಗಿದ್ದನು. ಹಂಗು ಸಹಿಸಿಕೊಂಡು ಮಲಗಿದ್ದನಷ್ಟೆ. ಮಲಗಿ ಹಂಗು ಗಾಢ ನಿದುರೆ ಮಾಡುತ್ತಿದ್ದನಷ್ಟೆ.... ಮುಂದೇನಾತೋ? ಯೇನು ಬುಟ್ರೋ? ಅವಯ್ಯನುಟ್ಟಿದ್ದ ದೋತರದ ಭಾಗವು ಕೆಂಪಾನು ಕೆಂಪಗಾಗಿತ್ತು. ಅದೆಂಗಾತೋ? ಯಾಕಾತೋ! ನೀನೇ ವಡದು ಹೇಳಬೇಕು ಸಿವನೇ.. ಅದೇ ಯಿನ್ನು ಮಜ್ಜಣ ಮಾಡಿ ಬಂದ ಹಂಪಗೆ ಜಡೆತಾತನು 'ಯಲಾಮ್ ಪೂರುವಿಕನೇ ವಸ್ತಿಯ ದೋತರ ರಗುತ ರಂಬಾಟಾಗ ನೋಡು' ಯಂದು ಹೇಳುತ ಗಮನ ಸೆಳೆದನು. ಆಗಿದ್ದು ಮುದೇತನು ಹಂಗೇನು? ಅವುದೇನು? ಯಂದನಕಂತ ಕಣ್ಣುಗಳನ ಯೀಟಗಲ ಮಾಡಿ ನೋಡಿದ್ದಲ್ಲದೆ ಅದರ ರಸವನ್ನು ಬೆರಳಿನ ತುದಿಗೆ ವಂಚೂರು ತಗುಲಿಸಿಕೊಂಡು ಮೂಸಿ ನೋಡಿ ಪ್ಲಾ ಪ್ಲಾ.. ಸಾಂಬವಿ” ಯಂದು ವುದ್ದಾರ