ಪುಟ:ಅರಮನೆ.pdf/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೨ ಅರಮನೆ ತೆಗೆದನು.. ಅದನ್ನು ತನ್ನ ಭೂಮದ್ಯೆ ತಿಲಕದೋಪಾದಿಯಲ್ಲಿ ಧರಿಸಿ ಆಗಲೇ ನೆರೆತ್ತಿದ್ದ ಹತ್ತಾರು ಮಂದಿ ಹಿರೀಕರನ್ನುದ್ದೇಶಿಸಿ ಭಕ್ತರಾ.. ತಾಯಿ ಸಾಂಬವಿ ಮುಟ್ಟಾಗ ಕನರಪ್ಪಾ.. ಯಂದು ನುಡಿದೊಡನೆ.. ಜನ ಮರುಳೋ? ಜಾತುರೆ ಮರುಳೋ.. ಬೆಲ್ಲದ ಕಣ್ಣಿಗೆ ಯಿರುವೆ ಮುತ್ತುವಂತೆ, ಮಾಯಿನ ಹಣ್ಣಿಂಗೆ ನೋಣ ಮುತ್ತುವಂತೆ.. ಯಲ್ಲಿದ್ದರೋ ಯಂತಿದ್ದರೋ.. ಗಂಡು ಹೆಣ್ಣು ಯಂಬುವ ಬೇದಯಿಲ್ಲದ ಅಬಾಲ ರುದ್ಧರಾದಿಯಾಗಿ ಯಾವತ್ತೂ ಮಂದಿಯು ಮೋಬಯ್ಯನ ಸರೀರವನ್ನು ಮುತ್ತಿಬಿಟ್ಟಿತು. ಆ ಅಯಿಲುಗೇಡಿ ಮಂದಿ ಆವೇಸದಿಂದ ತನ್ನನ್ನೆಲ್ಲಿ ಹರಕೊಂಡು ತಿಂಥಾರೋ ಯಂಬ ಭಯವಾಯಿತು ಮೋಬಯ್ಯಗ.. ಅವನ ಗ್ರಾಚಾರ ನೆಟ್ಟಗಿತ್ತು ಯಂಬಂತೆ. ಮುಂದೆ ನಡೆಯಬೇಕಿರುವ ದಯವ ಸಂಬಂಧೀ ಕಾರೈವು, ಕಟ್ಟಳೆಗಳಿಗೆ ದುಡ್ಡು ದುಗ್ಗಾಣಿ ಜೋಡಾವಣಿ ಮಾಡುವ ಸಲುವಾಗಿ ಯಂಬಂತೆ ಹಂಪಜ್ಜನ ಸಲಹೆ ಮೇರೆಗೆ ಪಟ್ಟಣ ಸೋಮಿಗಳು ಆ ಕೂಡಲೆ... “ನೋಡಿರಾ ತಾಯಿ ವುಟ್ಟು ಮಯ್ಲಿಗೆ ಆಗೊದು ಮನುವಂತರಕೊಂದೊಂದು ಸಲ, ಮುಟ್ಟಾಗುವ ದ್ವಾರ ತಾನೂ ವಂದು ಹೆಣ್ಣೆಂಬುದನು ತಾಯಿ ಸಾಬೀತು ಮಾಡ್ಯಾಳ.. ತಾಯಿ ಮುಟ್ಟಾಗಿರುವ ಪಟ್ಟಣದೊಳಗ ಕ್ಷಾಮಡಾಮರ ಸುಳಿಯೋದಿಲ್ಲ.. ಯೀ ದ್ರವರೂಪೀ ಸವುಭಾಗ್ಯದ ಕಿಂಚಿತ್ತು ಯಾರ ಮನೆಯೊಳಗಿರುತಯ್ಯೋ ಆ ಮನೆಯೊಳಗ ಅನುಗಾಲ ಚಿನ್ನದ ಹೊಗೆ ಆಡತಯ್ಕೆ! ಅದನ್ನು ತಿಲಕದೋಪಾದಿಯಲ್ಲಿ ಧರಿಸಿದವರ ಸನೀಕ ರೋಗ ರುಜೆಣ ಸುಳಿಯಾಕಿಲ್ಲ. ಆದರ ವಂದು ಮಾತನ ಮರಿಬ್ಯಾಡೂರಿ...” ಯಂದು ಮುಂತಾಗಿ ಯಿವರಿಸಿದ್ದಲ್ಲದೆ ಯಿಂಥಿಷ್ಟಕ್ಕೆ ಯಿಂಥಿಷ್ಟು ರುಸುಮುರಂದು ನಿಗದಿಪಡಿಸಿದೊಡನೆ ಭಕುತಾದಿ ಮಂದಿ ಯಾಕಾಗಬಾರದಂತು. ನೋಡು ನೋಡುವಷ್ಟರೊಳಗ ಮೋಬಯ್ಯನ ಸರೀರವು ಕುಂಕುಮಭರಣಿ ಆತು ಸಿವನೇ.. ವಂದು ಕೊಡುವಲ್ಲಿ ಯರಡು ಕೊಟ್ಟವರೆಷ್ಟೋ? ಯರಡು ಕೊಡುವಲ್ಲಿ ನಾಲುಕು ಕೊಟ್ಟವರೆಷ್ಟೋ? ಪರವೂರೊಳಗ ಯಿರುವ ತಮ ತಮ್ಮ ನೆಂಟರಿಷ್ಟರಿಗೆ ಯಿರಲೆಂದವರೆಷ್ಟೋ? ಅಂತರ ಪಿಚಾಚಿಗಳಾಗಿರುವ ತಮತಮ ಹಿರೀಕರು ಸೊರಗ ಸೇರುವ ಸಲುವಾಗಿ ಯಿರಲಿ ಯಂದವರೆಷ್ಟೋ? ವಟ್ಟಿನಲ್ಲಿ ಯಾರ ಮನೆಯೊಳಗಿಣುಕಿದರೂ.. ಯಾರ ಮನದೊಳಗಿಣುಕಿದರೂ.. ಯಾರ ಹಣೇನ ನೋಡಿದರೂ.. ಸಾಂಬವಿಯ ಪಯಿತ್ತಮುಟ್ಟು ಮಯ್ಲಿಗೆ