ಪುಟ:ಅರಮನೆ.pdf/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೪೩ ಮಾಲ ತಮಗೂ ಹಕ್ಕಯ್ಕೆ.. ತಾವು ಬರೋಗಂಟಾ ವಸ್ತೀಗೆ ಮಜ್ಜಣ ಮಾಡಿಸಬಾರದೆಂಬ ನಿರೂಪ ಅಕ್ಕಪಕ್ಕದ ಗ್ರಾಮಗಳ ಪಟ್ಟಣ ಸೋಮಿಗಳಿಂದ ಬರಲಾರಂಭಿಸಿದೊಡನೆ.... ತನ್ನ ಗಂಡನಿದ್ದಲ್ಲಿಗೆ ತಲುಪಿದ್ದ ತನ್ನತ್ತ ಪಿಳಿಪಿಳಿಗುಟ್ಟುತಲಿದ್ದ ತನ್ನ ಗಂಡನ ಕಣ್ಣುಗಳನ್ನು ನೋಡುತ್ತಿದ್ದ... ಜಗಲೂರವ್ವಗ ಹಿಸ್ಟ್ರಿ ಅನ್ನಿಸಿಬಿಟ್ಟಿತು. ಆ ವಂದರಗಳಿಗೆಯಲ್ಲಿ ಮುಖನ ಸಿಂಡರಿಸಿಕೊಂಡಳು.. ಏಸೋ ವರುಷಂಗಳ ಹಿಂದೆ ಮುಟ್ಟಾಗಿದ್ದ ಆ ಸಾದ್ವಿಯು, ಪ್ಲಾ... ಹಾ... ನಿನ್ ಕಟಕಂಡೀಸುವರುಸ ಬಾಳ್ವೆ ಮಾಡಿದೆನಲ್ಲೋ ಸೂಗಾss ಯಂದನಕಂತ ತನ್ನ ಗಂಡನತ್ತ ನೋಡಿ ಹಲ್ಲು ಕಡಿದಳು. ಕಳ್ಳರೆಂಬ ಅಗ್ಗದಲ್ಲಿ ಹಿರೀಕರತ್ತ ದುರುಗುಟ್ಟಿ ನೋಡುತ್ತ ಪರಪರ ಕೆರೆದುಕೊಂಡು ತಲೆಗೂದಲನ್ನು ಸೆಲ್ಲೊಡೆದಳು. “ಜಗಲೂರಜ್ಜನೇ.. ನನ್ನನ್ಯಾಕ ಬದುಕಲಕ ಹಚ್ಚ ತಂದೆಯೇ..” ಯಂದು ರವುಸದಿಂದ ಚೀರಿದಳು.. ತಾನೀ ದೂರಾಗ ಯಿರೋದ್ರಿಂತ ಬ್ಯಾರೆ ಮೂರಾಗ ಮಣ್ಣಾಗೋದೇವಾಸಿ.. ಯಲ್ಲದಿಯೋ ಸೂರಾಃ ಯಲ್ಲಿದೀಯೋ.. ಯೀ ಸೂಗನಿಗೆ ನನ್ನ ಕೊಟ್ಟಾತನೇ 0ರಂದು ಚೀರಿಕೊತ ಅಲ್ಲಿಂದ ಬಿರುಗಾಳಿಯೋಪಾದಿಯಲ್ಲಿ ಹೊಂಟೋದೊಡನೆ.... ಹಿರೀಕರು ಹಂಪಜ್ಜನ ನೇತ್ರುತ್ವದೊಳಗ ಬಂದ ಯಿಚಾರದಾವುದೆಂದರೆ.. ನೆರಿಗೆ ಕಟ್ಟಿದ್ದೂ ತಡ ಹಿಡೀಲಿಲ್ಲ.... ಮೂರು ಗುಡ್ಡಗಳಿಂದ ಮೂರು ಕಲ್ಲು ಗುಂಡುಗಳನ ತರಿಸಿ ವಲೆ ಮೂಡಿದ್ದು ತಡ ಹಿಡೀಲಿಲ್ಲ... ಅದರ ಮ್ಯಾಲ ಪುರಾತನಕಾಲದ ಹಂಡೇವ ಯಿಟ್ಟಿದ್ದು ತಡ ಹಿಡೀಲಿಲ್ಲ... ಕೊಡಪಾನಗಟ್ಟಲೆ ಪಂಚೋದಕವನ್ನು ಸುರಿವಿದ್ದು ತಡ ಹಿಡೀಲಿಲ್ಲ.. ಬನ್ನಿ, ಬಿಲ್ವ ಗಂಧದ ಕೊರಡುಗಳನ್ನು ವಲೆಯೊಳಗಮರಿಸಿದ್ದು ತಡಃ ಹಿಡೀಲಿಲ್ಲ.. ಸಿವನ್ನಾಮ ಪಾರೋತಿ ಪತಿ ಹರಹರ ಮಾದೇವ ಯಂದು ಹೇಳುತ ಬೆಂಕಿ ಮುಡಿಸಿದ್ದು ತಡಃ ಹಿಡೀಲಿಲ್ಲ.... ಸಾಂಬವಿಯ ನಾಮಸ್ಮರಣೆ ಮಾಡುತ ಚಳ್ಳಮಳ್ಳ ನೀರು ಕಾಯಿಸಿದರು.. ವಸ್ತಿಯನ್ನು ಮೆಲುಮೆಲ್ಲಕ ಯಬ್ಬಿಸಿ ಬಚ್ಚಲಕ ಕರೆ ತಂದರು. ಅದಕ್ಕಂಟಿದ್ದ ಬಟ್ಟೆಬರೆ ವುದುರಿಸಿ ಬೆಳ್ಳಿ ಪೀಠದ ಮ್ಯಾಲ ಕುಂಡುರಿಸಿದರು. ಸುಡುಸುಡುವ