ಪುಟ:ಅರಮನೆ.pdf/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೪ ಅರಮನೆ ನೀರು ಸುರುವುತಲೂ, ಸೀಗೇಕಾಯಿ ಪುಡಿಯಿಂದ ಅದರ ಮಯ್ಯನ್ನು ಗಸಗಸ ವುಜ್ಜುತಲೂ, ಮಜ್ಜಣವನ್ನು ತಾಸುಗಟ್ಟಲೆ ಮಾಡಿಸಿದರು. ತರುವಾಯ ರೇಶಿಮೆ ಅರಿವೆಯಿಂದ ಮಯ್ಯ ತಂಗಲನ್ನು ವರೆಸಿದರು. ಹೊಚ್ಚ ಹೊಸ ಬಟ್ಟೆಬರೆ ತೊಡಿಸಿದರು. ಮುಖಕ ಅರುಷಣ ಕೊಂಬಿನ ಲೇಹ್ಯವ ಸೂಸಿದರು.. ಲೋಬಾನದ ಹೊಗೆ ಆಡಿಸಿದರು. ವುತ್ತು, ಕರಬೂರ, ದ್ರಾಕ್ಷಿ, ಗೋಡಂಬಿ, ಬಾದಾಮು ತಿನ್ನಿಸಿದರು. ಕೆನೆವಾಲು, ನೊರೆವಾಲು ಕುಡಿಸಿದರು. ಜೋಂಪಿನಿಂದ ತೂಕಡಿಸಲಾರಂಭಿಸಿದ ವಸ್ತಿಯನ್ನು ತೂಗು ತೊಟ್ಟಿಲೊಳಗೆ ಮಲಗಿಸಿದರು.. “ಮಲಗವ್ವಾ ತಾಯಿ ಮಲಗವ್ವಾ ಮಾಮಾಯಿ” ಯಂದು ಪದ ಹಾಡುತ ತೂಗಿದರು.. ಹಂಗ ವಸ್ತಿಯು ಗಪ್ಪಂತ ಕಣ್ಣುಮುಚ್ಚಿ ಮೊಂಕಾರ ಸದ್ರುಸ ಗೊರಕೆಯನ್ನು.... * ಪ್ಲಾ.. ಯಿನ್ನೇನು.. ತಾಯಿ ಸಾಂಬವಿ ನಿದ್ದೆ ಮಾಡುತಾಳ.. ಆಕೆ ಯಚ್ಚರಾಗುವುದರೊಳ ಗಾಗಿ ಹಿಡಿಯಲು ಬಂದ ಅಣ್ಣಂಗಳಿಗೆ ಅಜೇಯನಾಗಿ ವುಳಕೊಂಡಿರುವ ಮಾಬಲಿಯನ್ನು ಹಿಡಿಯಬೇಕದೆ, ಹಿಡಿದು ಕಟ್ಟಬೇಕದೆ! ಕಟ್ಟಿ ಸೊಕ್ಕಡಗಿಸಬೇಕದೆ.. ಅದನೆಂಗ ಹಿಡಿಯೋದು? ಯಂಬ ಪ್ರಶ್ನೆಯೊಂದೆ ನೆಲಮುಗುಲಿಗೇಕಾಗಿ ವುಳಕೊಂತು. ಸದರಿ ಸಮಸ್ಯೆಯನ್ನು ಬಗೆಹರಿಸಲು ನೆರೆತಿದ್ದ ಸಭೆಯ ಯಾರೊಬ್ಬರ ಬಾಯಿಯಿಂದ ವಂದೇ ವಂದು ಸರಿಯಾದ ಸಮಾಧಾನ ವುದುರಲಿಲ್ಲ.. ಯೇಟಿ ಭರಚಿ ಹಿಡಕೊಂಡು ಅದರ ಮ್ಯಾಲ ಯೇರಿ ಹೋಗುವಂತಿಲ್ಲ.. ಕಾಳಗ ಮಾಡುವಂತಿಲ್ಲ. ಅದರ ಸರೀರದಿಂದ ಮದೇ ವಂದು ಹನಿಯನ್ನು ನೆಲಕ್ಕ ವುದುರಿಸುವಂತಿಲ್ಲ. ಯದು ವುಪಾಯದಿಂದ ಸಾಧಿಸಬೇಕಿರುವ ಗುರುತರ ಕಾರವು.. ಯೇನು ಮಾಡುವುದು? ಹೆಂಗ ಮಾಡುವುದು? ದಾರಿ ಹುಡುಕಿರಪ್ಪಾ.. ದಾರಿ ಹುಡುಕಿರಿ.. ಯೀ ಪ್ರಕಾರವಾಗಿ ಕೇಳಿಕೊಂಡ ಹಿರೀಕರಿಗೆ ಗೊತ್ತಿಲ್ಲದ್ದೇನಯ್ಯ? ಹುಲಿ ಹಿಡಕೊಂಡು ಬಿಂದರ ಯೇಳುಪಟ್ಟೆ ಹುಲಿಯನ್ನು ರೆಪ್ಪೆ ಮುಚ್ಚಿ ತೆರೆಯುವು ದರೊಳಗ ತಂದು ಮಲಗಿಸತೇವಃ ಸಿಮ್ರಾನ ಹಿಡಕೊಂಡು ಬರೆಂದರ ಮಯ್ಯ ಲಟಲಟ ಮುರಿಯುವುದರೊಳಗ ಹಿಡತಂದು ಕೆಡವತೇವss ಆದರs ಆ ಮಾಬಲಿ ಮಾಬಲನೇ ಸಯ್ಯ... ಯಂದು ಜವಾಬು ನೀಡಿದರು ಕಿರೀಕರು... ಅದರ ಹೊರ ರೂಪ ಕೋಣದ್ದೇನೋ ಸರಿ. ಆದರ ಅದರೊಳಗ