ಪುಟ:ಅರಮನೆ.pdf/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೪೮ ಅರಮನೆ ಪಾಲಯ್ಯನು “ವಬ್ಬ ಮಾನುಭಾವನನ್ನು ಹೊಗಳಿ ಸಾಧು ಮಾಡಬೇಕು ಸ್ವಾಮಿ” ಯಂದು ಯಿನ್ನಯಿಸಿಕೊಳ್ಳಲಾಗಿ.. ಅವಯ್ಯನು “ಮಾನುಭಾವ ಯಂದರೆ ಯಾವೂರ ರಾಜನು?” ಯಂದು ಪ್ರಶ್ನೆ ಹಾಕಲಾಗಿ ಪಾಲಯ್ಯನು “ಆತನು ಚತುಷ್ಪಾದಿಗಳಿಗೆಲ್ಲ ಮಾರಾಜನು ಸ್ವಾಮೀ” ಯಂದುದಕ್ಕೆ ಅವಯ್ಯನು ಹುಬ್ಬೇರಿಸಿ “ಅಂದರ” ಯಂದು ಪ್ರಸ್ಮಾರಕ ಚಿನ್ನೇನ ಮುಡುದನು... ಆಗ ಮುಖದ ಬೆವರೊರೆಸಿಕೊಳುತ ಪಾಲಯ್ಯನು ಯಿದ್ದದ್ದು ಯಿದ್ದಂಗೆ ಯಿವರಿಸಲಾಗಿ ಸಿವ.. ಸಿವಾ.. ರಾಮರಾಜುವು ದುಕ್ಕದ ಕಡಲೊಳಗ ಮುಳುಗಿದನು. ರಾಜಮಾರಾಜರನ್ನು ಹೊಗಳಿದ ಬಾಯಿ ವಂದು ಯಕಃಶ್ಚಿತ್ ಕೋಣವನ್ನು ಹೊಗಳಲಕ ಸೋಪ್ತಿಯಾಯಿತಲ್ಲಾ.. ಅಯ್ಯೋ ತಾಯಿ ಸರಸತಿ, ಯಿದೇನು ಕಮ್ಮ ನಿನ್ನದು.. ಛೀ.. ಛೀ ಯಿದು ತನ್ನಿಂದಾಗದು..ಛೇ.. ಛೇ ಅದು ತನ್ನಿಂದ ಸಾಧ್ಯಯಿಲ್ಲ. ಯಂದನಕಂತ ತಲೆಗೆ ಕಂಮ್ಮ ಹಚ್ಚಿ ರೋಧನ ಮಾಡಲಾರಂಭಿಸಿದ. ತನ್ನ ಪತಿ ದಯ್ಯವನ್ನು ಶಾರದಮ್ಮ ಬಗೆಬಗೆಯಿಂದ ರಮಿಸತೊಡಗಿದಳು ಮರೆಯಿಂದ ಧಾವಿಸಿ ಬಂದು... ಪಾಲಯ್ಯನು ಆ ಕೂಡಲೆ ವಂದರ ಹಿಂದ ವಂದರಂತೆ ಅಯ್ತು ಬೆಳ್ಳಿ ನಾಣ್ಯಗಳನ್ನು ತೆಗೆದು ಚಾಜದೊಳಗಿಟ್ಟು “ಹಂಗನ್ನ ಬ್ಯಾಡೂರಿ ಸ್ವಾಮಿ, ಯಿದು ಪಟ್ಟಣದ ಮರುವಾದಿ ಪ್ರಶ್ನೆ ಅಯ್ಕೆ.. ಯಿದಕ ಸಾಕ್ಷಾತ್ ಆನಿಸಗುತಿಯ ವಪ್ಪಿತ ಅಯ್ಕೆ. ಸರಸೋತಿಯು ಬ್ಯಾರೆ ಅಲ್ಲ.. ಸಾಂಬವಿಯು ಬ್ಯಾರೆ ಅಲ್ಲ..” ಯಂದು ಕಯ್ಯ ಮುಗುದು ಕೇಳಿಕೊಂಡನು.... ಬೆಳ್ಳಿ ರೂಪಾಯಿಗಳು ಚಿಮ್ಮತೊಡಗಿದ ಬೆಳಕಲ್ಲಿ ಸೂಯ್ಯಾಮ ಮಂಕಾದನು.. ಹೊಟ್ಟೆ ತುಂಬ ಚಾಜ, ಕಯ್ಯ ತುಂಬ ಬೆಳ್ಳಿ ರೂಪಾಯಿಗಳು.. ಮನೆಮಂದಿಯಲ್ಲಿ ಹೊಟ್ಟೆ ತುಂಬ ವುಂಬದೆ ಯೇಸು ಕಾಲವಾತು? ಕೋಣಾನ ಹೊಗಳಿದರ ತಪ್ಪೇನಯ್ಯ..? ನಾಯೀನ ಹೊಗಳಿದರೆ ತಪ್ಪೇನಯ್ಕೆ.? ವಪ್ಪಿಕೊಳ್ಳಿರೀ.. ವಪ್ಪಿಕೊಳ್ಳಿರಿ.. ವಪ್ಪಿಕೊಳ್ಳದಿದ್ದರೆ ತನ್ನ ಕೊಳ್ಕೊಳಗಿನ ಮಾಂಗಲ್ಯದ ಮ್ಯಾಲ ಆಣೆ ಪ್ರಮಾಣ ಅಯ್ಕೆ.. ಯಂದು ಮುಂತಾಗಿ ಶಾರದಮ್ಮ ಜುಲುಮಿ ಮಾಡಲು.... ರಾಮರಾಜನು “ಅಯ್ಯೋ.. ನನ್ನ ಧರುಮಪತ್ನಿಯೇ.. ಆಣೆ ಪ್ರಮಾಣ ಮಾಡುತಿರುವಿಯಲ್ಲಾ... ನೀನಾಡಿದ ವಂದೊಂದು ಮಾತು ಕೂರಸೆಯಂತೆ ಯಿರಿಯಿತಲ್ಲಾ... ನೀನು ಯಿಂಥ ಮಾತನ್ನಾಡೋ ಬದಲಿಗೆ ವಂಥೆಟ್ಟು ಮಿಷ ನೀಡಿದ್ದರ ಮುತ್ತಯ್ದೆ ಸಾವನ್ನು ಸಾಯುವಂತೆ ಅಸೀರುವಾದ ಮಾಡಿ