ಪುಟ:ಅರಮನೆ.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ಬೀಳುತೀನಂದನಂತೆ.. ಅದಲ್ಲದೆ ಮಯ್ಯ ಅಡ್ಡಡ್ಡ ಕುಯ್ದು ಸರಗ ಚೆಲ್ಲುತೀನಪ್ಪಾ ಅಂದನಂತೆ.. ಆಕೆ ನಗು ನಗುತ ತನ್ನ ಸರೀರವ ಪ್ರವೇಸ ಮಾಡಿದೊಡನೆ ತರಗೆಲೆ ಹಂಗ ಹೊಯ್ದಾಡಿ ಬಿಟ್ಟನಂತೆ. ಆ ಅಂಥ ಸರೀರದೊಳಗ ದ್ಯಾವಾನು ದ್ಯಾವತೆಗಳು ಪುಷ್ಪರುಷ್ಟಿ ಕರೆದರಂದರ ಹೆಂಗ ನಂಬಿಕೆ ಬಂದೀತು? ಮೋಬರ.... ನಿಂದೇನು ಸರೀರವಾ.. ಪರಂಪೂಕು ಜಮೀನಾ ಅಂತ ಆ ಕಾಲದೊಳಗ ಯಾರಾದರೂ ಕೇಳಿರಲಿಲ್ಲವಾ ಯಂಬ ಅನುಮಾನ ಯೀ ಕಾಲದ ಮಂದಿಗೆ ಬರದಾಂಗ ಯಿರುವುದಾ..? ತನ್ನ ಸರೀರದ ಬಗ್ಗೆ ತಾನೇ ಕಥೆ ಕಟ್ಟಿ ಹೇಳಿರಬೌದಾಯಂಬ ಗುಮಾನಿ ನಡುವೆಯೂ ಮುಂದೇನಾತಂತ ಕೇಳಿಕೋತ ಹೋದರ.... ಆ ವಂದು ಚಣ ಅವಯ್ಯ ತರಗೆಲೆಯಂಥಾಗಿ ತೇಲಾಡಿದನಂತೆ ಸಿವನೇ.. ಹಿಂದಕು ಮುಂದಕು ವಾಲಾಡಿದನಂತೆ.. ಮತ್ತೆ ನಿಸೂರಾಗಿ ಬಾಯಿನ ಮ್ಯಾಲ ಬೊಟ್ಟಿಟ್ಟುಕೊಂಡನಂತೆ.. ತನ್ನಂಥ ದುಡಿದುಂಬುವವರ ಸರೀರದೊಳಗ ವಸ್ತಿ ಮಾಡುವ ಹಕ್ಕನ್ನು ಸಾಂಬವಿಗೆ ಕೊಟ್ಟವರಾರು ಅಂಥ ತನಗ ತಾನ ಸಮುಸಯ ತಾಳಿಕೊಂಡನಂತೆ.. ವಂಚೂರಾರ ವುಪಕಾರ ಸ್ಮರಣೆಯಿಲ್ಲ ನಿನಗೆ ಅಂತ ತನ್ನ ಸರೀರವನ್ನ ತಾನ ತರಾಟೆ ತಗೊಂಡನಂತೆ.. ಹೆಂಡತಿ ಜಗಲೂರಿ ಬಂದು ಯಲ್ಲಯ್ಕೆ ನಿನ್ನ ಸರೀರ ಯಂದು ಕೇಳಿದರ ಯೇನಂತ ಜವಾಬು ಕೊಡುವುದು ಯಂದು ಯಸನವನ್ನೂ ಮಾಡಿದನಂತೆ.... ಅವಯ್ಯನು ಹಗಲು ಗನಸು ಕಾಂಬುತ್ತಿದ್ದ ಹೊತ್ತಿನಲ್ಲಿ.... ಗುಡಿ ಹಿಂದಲ ಮನೆಯಂಗಳದಲ್ಲಿ ನೆಲಮುಗಿಲಿಗೇಕಾಗಿ ಭೂಮಿ ತಾಯಿಗೆ ಛತ್ರಿ ಹಿಡಿದಂತೆ ಬೆಳೆದು ನಿಂತಿದ್ದ ಬೇಯಿನ ಮರವು ಯಂಟೂ ದಿಕ್ಕಿಗೂ ಹೊಯ್ದಾಡಿದಂತೆ.. ವುಫ್ ವುಫ್ ಅಂತಂತೆ ಸಿವನೇ.... ಅತ್ತ ಅರಮನೆಯೊಳಗ ಹಿಡಿಯೋರಿಲ್ಲದ ಅನಾಥವಾಗಿದ್ದ ಬಿದ್ದಿದ್ದ ಪಿಕದಾನಿಯು ನರಳಾಡಿತಂತೆ.. ರಾಜಮಾತೆ ಭಮ್ರಮಾಂಬೆಯ ಬಲಗಣ್ಣು ಹಾರಲಾರಂಭಿಸಿತಂತೆ. ರಾಜಕುಮಾರ ಕಾಟನಾಯಕನ ಯಡದೊಡೆ ಯಡಭುಜ ಹಾರತೊಡಗಿದವಂತ.. ಸೂರಾಮ ವಂಛಣ ಮಂಕಾದನಂತೆ. ಸುತ್ತಮುತ್ತಲಿದ್ದ ನಾಕೂ ಗುಡ್ಡಗಳ ಕಲ್ಲು ಗುಂಡುಗಳು ಜಲಜಲ ಬೆವೆತು ನೀರೊಡೆದವಂತೆ.. ಹಕ್ಕಿ ಪಕ್ಷಿಗಳು ತಮ್ಮ ತಮ್ಮ ಗಂಟಲೊಳಗಿನ ತಂಬೂರಿಗಳನು ಸ್ತುತಿ ಸರಿಪಡಿಸಿ ಕೊಂಡವಂತೆ, ಪಟ್ಟಣದ ಮಂದಿಯ ಮಮ್ಮಿ ಜುಮ್ಮೆಂದಂಗಾಯಿತಂತೆ.. ಹೊರಗೋಡೋಡಿ ಬಂದು ಮುಖಯ ಆಕಾಸ ಮಾರಗದಲ್ಲಿ ಮೂಡಿದ್ದ