ಪುಟ:ಅರಮನೆ.pdf/೩೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩ರ್೪ ಸಾಯುತ್ತಿದ್ದೆನಲ್ಲಾ..” ರಂದು ಚಾವತ್ತು ಮಮ್ಮಲನ ಮರುಗಿದನು. ರೂಪಾಯಿಗಳ ಮ್ಯಾಲಿದ್ದ ರಾಜನ ಮುಖ 'ನಾನೂ ರಾಜ ಕಣಯ್ಯಾ' ಯಂದು ಪಿಸುನುಡಿಯುತ್ತಿರುವಂತೆ ಭಾಸವಾಯಿತು. ವರಮಾನದ ಕವುರವನ್ನು ಕಡಿಮೆ ಮಾಡಬೇಕಾದರೆ ತಾನು.. ಯಂದು ನಿರರಿಸಿದನೆಂಬಲ್ಲಿಗೆ ಸಿವಸಂಕರ ಮಾದೇವss ಅತ್ತ ಕಡುಪದ ಸಮೀಪ ಯಿದ್ದ ಬೆಟ್ಟದ ಮ್ಯಾಲ ಯಿದ್ದ ಬ್ಯಾಸಗಿ ಬಂಗಲೆಯೊಳಗೆ ಮಿಶ್ರಾಂತಿ ತೆಗೆದುಕೊಳ್ಳುತಲಿದ್ದ ಥಾಮಸು ಮನೋ ಸಾಹೇಬನು ಬಳ್ಳಾರಿ ಸೀಮೆ ಕಡೇಕ ನಿಗಾಯಿಟ್ಟು ಅಲ್ಲಿನ ವಂದೊಂದು ವರಮಾನ ವನ್ನು ಕೇಳಿ ತಿಳಿಯುತ್ತ ತಾನು ಅಸಾಂತಿ ಗೀಡಾಗಿದ್ದನು. ಯಷ್ಟೋ ಸಾವುಗಳಿಗೆ ಕಾರಣ ನಾಗಿರುವ ತಾನು, ಯಷ್ಟೋ ಸಾವುಗಳನು ಕಣ್ಣಾರೆ ಕಂಡಿರುವ ತಾನು ವಬ್ಬ ಯಕಃಶ್ಚಿತ್ ನಾಗಿರೆಡ್ಡಿಯ ಸಾವಿಗಾಗಿ ಯಾಕೆ ಮರುಗುವುದು? ತಾನ್ಯಾಕ ಪಶ್ಚಾತ್ತಾಪ ಅನುಭವಿಸಬೇಕು. ತಾನು ತನ್ನ ಮನಸ್ಸಿನ ಮ್ಯಾಲ ಸ್ಥಿಮಿತ ಸಾಧಿಸುವ ಸಲುವಾಗಿ ವಂದು ಗ್ರಂಥವನ್ನು ಬರೆಯುತ್ತಿದ್ದನಷ್ಟೆ.. ಅದನು ಕಯ್ಯಗೆ ಮುತ್ತಿಕೊಂಡನು. ನಾಗಿರೆಡ್ಡಿಯನ್ನು ಕೊಂಡಾಡುವ ನಾಲಕು ಸಾಲುಗಳನ್ನು, ಸರಕಾರದ ಜಯ ವಂದು ಜಂರವೇ ಯಂಬ ವಂದು ಪ್ರಶ್ನೆಯನ್ನು ಬರೆದನು. ತಾನು ಸ್ಟಾಟಲೆಂಡಿನವನಾಗಿದ್ದರೂ ಯಿಂಡಿಯಾವೇನು ತನಗೆ ಅಪರಿಚಿತ ದೇಸವಲ್ಲ... ಗವರರು ಜನರಲ್ಲು ಲಾರ್ ಯಲ್ಲೆಸ್ಲಿಯ ಆದೇಸದ ಮೇರೆಗೆ ತಾನು ಸದರಿ ದೇಸದ ಸಿಂಧೆ, ಬೀಹಾರ ಮುಂತಾದ ವುತ್ತರಾಯಣದ ಪ್ರಾಂತಗಳಿಂದ ಹಿಡಿದು ದಖ್ಯಣಾಯಣದ ಸಿಲೋನಿನವರೆಗೆ ಅಡ್ಡಾಡಿರುವಂಥವನು. ಹಯ್ದರಾಲಿಯ ಸೋಲಿಗೆ, ಮತ್ತವನ ಮೀರಪುತ್ರಟಿಪ್ಪುಸುಲ್ತಾನನ ಸಾವಿಗೆ ಯಿಂಥ ಯಷ್ಟೋ ಮೀರ ಸೇನಾನಿಗಳ ಸೋಲಿಗೆ, ಸಾವಿಗೆ ಕಾರಣನಾಗಿರುವಂಥವನು. ಯಲ್ಲ ತಂತ್ರಕುತಂತ್ರಗಳನ್ನು ಲೀಲಾಜಾಲವಾಗಿ ಬಳಸಿ ಕುಂಪಣಿ ಸರಕಾರದ ಸಾಮ್ರಾಜ್ಯ ಯಿಸ್ತರಣಾ ದಾಹವನ್ನು ತಣಿಸಿರುವಂಥವನು.. ಸದರಿ ದೇಸದ ನಿತ್ಯ ಪರಾಭವದಲ್ಲಿ ಮುಖ್ಯ ಪಾತ್ರವಹಿಸುತಲಿರುವುದು ಭೂತಕಾಲದಾರಾಧನೆಯೇ ಹೊರತು ವರಮಾನ ಕಾಲವಲ್ಲ.. ವರಮಾನದ ಪರಿಗ್ನಾನವಿಲ್ಲದ, ಗುಲಾಮೀ ಭಾವನೆಗಳಿಗೆ ಪರವಶರಾಗುವ ಪ್ರಜೆಗಳುಳ್ಳ ಯೀ ದೇಶವನ್ನು ಯಾರು