ಪುಟ:ಅರಮನೆ.pdf/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೫೩ ವುಸುರು ಬಿಗಿ ಹಿಡಿದರು. ಅಷ್ಟೊತ್ತಿಗೆ ಸರಿಯಾಗಿ ರಥ ಮುಂದಕ್ಕೆ ಮೂರುರುಳಿಕೆ ವುರುಳಿಬಿಟ್ಟಿತು. ಯೇನಿದ್ದೀತು ಅಗಾಧವು ಯಂದು ಭಕುತಾದಿ ಮಂದಿ ತಮ್ಮ ತಮ್ಮ ಕಣ್ಣುಗಳನ್ನು ಯಿಷ್ಟಗಲ ಹಿಗ್ಗಲಿಸಿ ನೋಡುತ್ತಾರೆ.. ಅರೆ! ನಾಗಿರೆಡ್ಡಿಯು ತಾನೋವ್ವನೆ ಮಿಣಿಗೆ ಕನ್ನ ಹಚ್ಚಿರುವನು... ಜಯಹೋ ಭೀಮಲಿಂಗೇಶ್ವರನೇ.... ರಥೋತ್ಸವ ಸಾಂಗೋಪಾಂಗವಾಗಿ ಬನ್ನಿಕಟ್ಟೆವರೆಗೆ ಹೋಗಿ ಮರಳಿತು. ದೇವರು ದೊಡ್ಡವನು. ಅವನು ಯಿನ್ನೂ ಯಿದ್ದಾನೆ.. ಯಂಬುದು ಸತ್ವಯಿಧಿತವು. ಮಘ ನಕ್ಷತ್ರದಲ್ಲಿ ಮರಣಹೊಂದಿ ಮೂಲಾನಕ್ಷತ್ರದಲ್ಲಿ ಮರಳಿ ಬಂದು ತನ್ನ ಯಿಷ್ಟದಯ್ದದ ಸೇವೆಯನ್ನು ಮಾಡಿ ಪುನೀತನಾದ ಬೊಬ್ಬಿಲಿ ನಾಗಿರೆಡ್ಡಿಯು ಗಡೇಕಲ್ಲ ಪ್ರಮುಖರನ್ನುದ್ದೇಶಿಸಿ... ತರುವಾಯ... ಅತ್ತ ಹರಪನಹಳ್ಳಿ ಪಟ್ಟಣದೊಳಗ ಸ್ಕೂವರು ಕುಂಪಣಿ ಸರಕಾರದ ಯಿರುದ್ದ ಯತ್ತುತಲಿದ್ದ ಸೊಲ್ಲುಗಳನ್ನು ವಂದೊಂದಾಗಿ ಅಡಗಿಸುವುದರಲ್ಲಿ ತಲ್ಲೀನನಾಗಿದ್ದ ಸಮಯದಲ್ಲಿ ಕೀ.ಶೇ.ಯಿಡಿ ಸೋಮಶೇಖರನಾಯಕನ ಪವುಜು ಮಾರು ಯಾಸದಲ್ಲಿ ಕುಂಚೂರು ಗ್ರಾಮವನ್ನು ಮುತ್ತಿ ಸರಕಾರೀ ಸಿಪಾಯಿಗಳನ್ನು ಕೊಲೆಮಾಡಿ ಬಂಧನದಲ್ಲಿದ್ದ ರಣಭಯಂಕರ ಭರಮನ ಗವುಡನನ್ನು ಬಿಡಿಸಿಕೊಂಡು ಅರಸನಾಳು ಕಾಡಡವಿಯನ್ನು ಪ್ರವೇಸ ಮಾಡಿದರೆಂಬಲ್ಲಿಗೆ.. ಸ್ಕೂವರನು ಕನಲಿ ಅವನನ್ನು ಹಿಡಿಕೊಟ್ಟವರಿಗೆ ಯಿಷ್ಟು ಸುಳುವು ನೀಡಿದವರಿಗೆ ಯಷ್ಟು ರುಂಡ ತಂದವರಿಗೆ ಯಷ್ಟು ನಗದು ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದನೆಂಬಲ್ಲಿಗೆ.. ಟಿಪ್ಪು ಸುಲ್ತಾನನಲ್ಲಿದ್ದ ದಿವಾನ ಪೂರಯ್ಯನವರೇ ಕುಂಪಣಿ ಸರಕಾರದ ಸೇವೆಯನ್ನು ಸೇರಿಕೊಂಡಿರುವರೆಂದ ಮ್ಯಾಲ ತಾನ್ಯಾಕೆ ಸೇರಿಕೊಂಡಿರುವುದು ತಪ್ಪು ಯಂದು ಮುಂತಾಗಿ ಹಂಪರಸಪ್ಪಯ್ಯ ಅವರಿವರ ಬಳಿ ತನ್ನನ್ನು ತಾನು ಸಮಗ್ಗಿಸಿ ಕೊಳ್ಳುತ್ತಿರುವಾಗ್ಗೆ.. ಯಲ್ಲಾಪ್ರಕೊರಚರಟ್ಟಿಯ ಚೋರ ಕಲಿ ಆಕಾಸರಾಮಣ್ಣನು ತಾನು ಕಳುವಿನಿಂದ ಸಂಪಾದಿಸಿದ ಸಂಪತ್ತಿನ ವಂದು ಭಾಗವನ್ನು ಕುಂಪಣಿ ಸರಕಾರದ ಯಿರುದ್ಧ ಹೋರಾಡುತ್ತಿದ್ದವರಿಗೆ ಧನ ಸಾಂತು ಮಾಡತೊಡಗಿದನೆಂಬಲ್ಲಿಗೆ..... ಅತ್ತ ಕೂಡ್ಲಿಗಿ ಪಟ್ಟಣದೊಳಗ ವಾರಗಟ್ಟಲೆ ನಾಪತ್ತೆಯಾಗಿದ್ದ ಸವುಭಾಗ್ಯ