ಪುಟ:ಅರಮನೆ.pdf/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೪ ಅರಮನೆ ಮೊನ್ನೆ ವಂದಿವಸ ತನಗ ತಾನ ಮಾನ್ಯರ ಮಸಲವಾಡದಿಂದ ಜುಲುಮಿಯಿಂದ ಪಂಗುಣಿಸಿ ಮರಳಿ ಬಂದಿತ್ತು. ದಿಬ್‌ದೀರಿಯಿಂದ ಆರತಿ ಬೆಳಗಿ ಬರಮಾಡಿಕೊಂಡಿತ್ತು ಸಮಸ್ತ ಪಟ್ಟಣವು. ಅದೇ ಯಿದು ಅವುದೋ.. ಮತ್ತಾವುದೋ ಯಂದು ಅನುಮಾನದಿಂದ ಮಂದಿ ಫಲಾನ ಮನೆಯ ತಾವ ಯಡತಾಕಿ ಕಿವಿಯಾರೆ ಕೇಳೂತ, ಕಣ್ಣಾರೆ ನೋಡೂತ ಖಾತರಿಮಾಡಿಕೊಂಡು ಹೋಗುತಲಿದ್ದರು.. ಸದರಿ ಪಟ್ಟಣಕ ದರುಸನ ಭಾಗ್ಯ ನೀಡೀs ನೀಡಿ ಆ ಸವುಭಾಗ್ಯಕ್ಕೆ ದಣುವು ಬಂದಿತ್ತು.. ತಾನಲ್ಲಿಗೆ ಹೋದರೇನು ಗತಿ? ಹೋಗದಿದ್ದರೇನು ಗತಿ? ಯಂಬ ವುಭಯ ಸಂಕಟದಿಂದ ರಾಯನು ಅಲ್ಲ ದಾರಿಗೆ ಬಂದು ಮರಳಿ ಹೋಗುವುದನ್ನು ಯರಡು ದಿನಗಳಲ್ಲಿ ನಾಲ್ಕಾರುಬಾರಿ ಮಾಡಿದ್ದನು.. ಸವುಭಾಗ್ಯ ಮರಳಿರುವುದರ ಬಗ್ಗೆ ಅಧಿಕ್ರುತವಾಗಿ ಮನವರಿಕೆ ಮಾಡಿಕೊಡಬೇಕೆಂದು ಖದ್ದ ಯಡ್ಡವರನು ಪರಮಾನು ನೀಡಿದ್ದಕ್ಕೆ ಮನ್ನಣೆ ಕೊಟ್ಟು ಫಲತಾಂಬೂಲ, ಪುಷ್ಪಗುಚ್ಚ ರೇಸಿಮೆ ವಸ್ತರಗಳಿದ್ದ ತಳಿಗೆಯೊಂದಿಗೆ, ಯಡ ಬಲಕ ಸಿಪಾಯಿಗಳನ್ನು ಯಿಟ್ಟುಕೊಂಡು ರಾಯನು ಫಲಾನ ಸಮಯದಲ್ಲಿ ಫಲಾನ ಮನೆಯ ತಲಬಾಕಲನ್ನು ದಾಟಿ ತನ್ನ ಪಂಚೇಂದ್ರಿಯಂಗಳನ್ನು ಸಣ್ಣ ಮಾಡಿಕೊಂಡನು. ಆತನನ್ನು ಯೇಸೋ ದಿವಸಗಳ ತರುವಾಯ ನೋಡಿದ ತಾಯಕ್ಕ ಸ್ವಾಗತಿಸದೆ ಯಿರಲಿಲ್ಲ.. ಸಲ್ಲಿಕೆ ಮಾಡೋದು ಸಲ್ಲಿಕೆ ಆಯಿತು. ರಾಯನು ಯಷ್ಟು ಬೇಕೋ ಅಷ್ಟು ಮಾತ್ರಮಾತಾಡಿದನು.. ಯಷ್ಟು ಬೇಕೋ ಅಷ್ಟು ನೋಡಿದನು.. ಹೊನ್ನೇನು ಅಲ್ಲಿಂದ ಬಯಲುದೇರುವಾಗ್ಗೆ ಚಿನ್ನಾಸಾನಿಯನ್ನು 'ಮಗಳೇ' ಯಂದು ಸಂಬೋಧಿಸಿದ್ದೊಂದು ಪರಪಾಟು, ಹೊರತುಪಡಿಸಿದರೆ.... ಹೇಳದೇ ಕೇಳದೆ ಹೋಗಿ ತನ್ನನ್ನು ಪೇಚಿಗೆ ಸಿಕ್ಕಿಸಿದಳೆಂಬ ಕಾರಣಕ್ಕೆ ತಾಯಕ್ಕಳನ್ನು ಕಾಣದೆ ವುಳುದು ನೀಲಕಂಠಪ್ಪನು ತನ್ನ ಧರುಮಪತ್ನಿಯ ಮುಖದಲ್ಲಿ ನಶ್ವರವಾದ ಸಾರಕ ಭಾವನೆಯನ್ನು ಮೂಡಿಸಿದ್ದನ್ನು ಬಿಟ್ಟರೆ..... - ಮನವರಿಕೆ ಮಾಡಿಕೊಡುವ ಕಾರಕ್ಕೆ ತನ್ನನ್ನು ನೇಮಕ ಮಾಡುವುದನ್ನು ಬಿಟ್ಟು ರಾಯನೊಬ್ಬನೇ ಹೋಗಿಬಂದ ಯಂಬ ಕಾರಣಕ್ಕೆ ಮುನುಸುಕೊಂಡಿದ್ದ ಮುರಾರಿರಾವನು ಸವುಭಾಗ್ಯ ಪಡೆಯನ್ನು ಹೊಸರನ ಮಾಡಲಕ ಮೊದ ಮೊದಲು ಬಿಲ್‌ಕುಲ್ ವಪ್ಪಲಿಲ್ಲ.. ತನ್ನ ಹೆಂಡತಿ ಮ್ಯಾಲಣ ಸಿಟ್ಟನ್ನು ಆ ಸೂರ ಸೇನಾನಿಯ ಮ್ಯಾಲ ಪ್ರಯೋಗಿಸಲು ರಾಯನು ಯಿಫಲನಾಗದೆ ಯಿರಲಿಲ್ಲ..