ಪುಟ:ಅರಮನೆ.pdf/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೫೫ ನೀನು ನಿನ್ನ ಫವುಜಿನೊಡನೆ ಕಕ್ಕುಪ್ಪಿಗೆ ಹೋಗಿ ಬುಡುಬುಡುಕೆಂಯವರಿಂದ ಮಂಗಗಳ ರಕ್ಷಣೆ ಮಾಡಯ್ಯ... ಖುದ್ದ ಜೆನ್ನಿಫರಮ್ಮನೇ ಆಗ್ಲೆ ಮಾಡಿದ್ದಾಳೆ ಯಂದು ರಾಯನು ಅಂಗಲಾಚುವ ದ್ವನಿಯಲ್ಲಿ ಹೇಳಿದ್ದಕ್ಕೆ ಮುರಾರಿರಾವನು “ದೇಖೋಜಿ.. ಸವುಭಾಗ್ಯ ಆಗಮಿಸಿರುವುದು, ಬಿಟ್ಟಿರುವುದು.. ಯಿದು ನಮಗೆ ಸೇರಿದ್ದು... ಯೀ ಕುರಿತು ನೀವು ಸೊಯಂ ನಿಲ್ಲಯ ಕಳ್ಕೊಂಡು ನನಗೆ ಅಪಮಾನ ಮಾಡಿರುವಿರಿ.. ಮಾನಸಿಕವಾಗಿ ನಮ್ಮ ಫವುಜಿಗೆ ಆಗಿರುವ ನಷ್ಟವನ್ನು ನೀವಾಗಲೀ, ಸರಕಾರವಾಗಲೀ ತುಂಬಿಕೊಡುವುದೇನು” ಯಂದು ಜಬರದಸ್ತೀಲೆ ಕೇಳಿದನು. ಆತನ ವಾದದ ತಳಬುಡ ಅಗ್ಗವಾಗದೆ ರಾಯ ಕಕ್ಕಾವಿಕ್ಕಿಗೊಂಡನು. ಯಾರೆದುರಿಗೆ ತಾನು ಯಿರುವುದು ಯಂದು ತಿಳಿದುಕೊಳ್ಳುತ್ತಿಲ್ಲವಲ್ಲ ಯಿವನು. ಸಿರಾದ ಯುದ್ಧದಲ್ಲಿ ಮಾಮೂಲಿ ಸಿಪಾಯಿಯಾಗಿ ಕಾದಾಡಿದ ಯಿವನನ್ನು ತಾನೇ ಸಿಫಾರಸು ಮಾಡಿ ಸೇರಿಸಿಕೊಂಡಿರುವುದು. ಅಂಥ ತನಗೇ ಯದುರಾಡುತ್ತಿರುವುದೆಂದರೇನು? ತಾನೇ ಯಿವನನ್ನು ತಾಯಕ್ಕಳ ಮನೆಗೆ ಸರಕಾರದ ಪ್ರತಿನಿಧಿಯಾಗಿ ಕಳಿಸುವ ಮಿರಾದೆಯಿತ್ತು.. ಅದು ರೀತಿ ರಿವಾಜು ಕೂಡ... ಆದರೆ ಯಿ ಚಪಲ ಚೆನ್ನಿಗರಾಯನು ತನ್ನ ಮಗಳ ಸಮಾನಳಾದ ಚಿನ್ನಾಸಾನಿಂರು ಮಾಲ ಕಣ್ಣು ಕಿಸುರು ಮಾಡಿಕೊಂಡರೆ ಯಂಬ ಅನುಮಾನದಿಂದಾಗಿ.. ಅದೂ ಅಲ್ಲದೆ ತಾನು ಯೀ ನೆಪದಲ್ಲಿ ತಾಯಕ್ಕಳನ್ನು ಯೇಸೋ ದಿನಗಳ ನಂತರ ನೋಡಬೇಕೆಂಬ ಮಹದೇಚ್ಛೆಯಿಂದಾಗಿ ತಾನೇ ಅಲ್ಲಿಗೆ ದಯಮಾಡಿದ್ದು. ಮೇಲಾಧಿಕಾರಿ ಯಾಗಿರುವ ತಾನು ನಿಯಮಾವಳಿಗಳನ್ನು ವುಲ್ಲಂಘಿಸಿದ್ದರಲ್ಲಿ ತಪ್ಪೇನುಂಟು? ಯಿದಕ್ಕೆ ಯೀ ವಾನುಭಾವ ತನ್ನ ನಾಲಗೆಯನ್ನು ಅಗತ್ಯಕ್ಕಿಂತ ಹೆಚ್ಚುವುದಕ್ಕೆ ಚಾಚುವುದೆಂದರೇನು? ರಾಯ ರಾವನನ್ನು ಅಪಾದಮಸ್ತಕ ನೋಡಿದ. ಕಸರತ್ತಿನಿಂದ ಕಟ್ಟು ಮಸ್ತಾಗಿರುವ ದೇಹದಾಡ್ಯವು.. ವಂದೇ ವಂದು ನೋಟದಿಂದ ಚಿತ್ ಮಾಡುವಂಥ ಚುರುಕು ಕಣ್ಣುಗಳು, ಮೇಲ್ದುಟಿ ಮ್ಯಾಲ ಚಾಚಿರುವ ಗಿಣಿ ಮೂಗು.. ಅದರಡಿ ಚೂರಿಯಂಥ ಮೀಸೆ... ಯಿವೆಲ್ಲಕ್ಕೆ ಕಳಸವಿಟ್ಟಂತೆ ಕೇಸರಿವಲ್ಲದ ಚರ ಕವಚ ಬೇರೆ! ಛದ್ಮ ಯೇಷಧಾರಿ ಅರುನನಂತಿರುವ ಯಿವನು ಸಾಮಾನ್ಯನಲ್ಲ... ಯಿವನನ್ನು ಕಳಿಸಿದರೊಂದು ಕಷ್ಟ ಕಳಿಸದಿದ್ದ ರೊಂದು ಕಷ್ಟ ಯೇನು ಮಾಡುವುದು? ಛಟೀರಂತ ವಂದು ಯೇಟು ಕೊಟ್ಟು