ಪುಟ:ಅರಮನೆ.pdf/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೬ ಅರಮನೆ ಬಾಯಿಮುಚ್ಚಿಕೊಂಡು ಬಿದ್ದಿರು ಯಂದು ಗದರಿಸುವ ಬಯಕೆ ಮೂಡದೆ ಯಿರಲಿಲ್ಲ. ತಮ್ಮಂಥ ಮೇಧಾವಿಗಳಿಂದ ಹೊಡೆಸಿಕೊಳ್ಳಲಕ, ಬಲ್ಕಿಸಿಕೊಳ್ಳಲಕ ಅಹ್ರತೆ ಬೇಕು.. ಯೀ ಸಂಸ್ಕಾರರಾಹಿತ್ಯನಿಗೆ ಆ ಅಹ್ರತೆಯಿಲ್ಲ.. ಯಂದೆಲ್ಲ ಯೋಚಿಸಿ.... “ನೋಡು ಮುರಾರಿ.. ಅಂಥ ಕಡೆಗೆಲ್ಲ ನಿನ್ನಂಥವರು ಹೋಗಬಾರದಪ್ಪಾ. ತಾಯಕ್ಕಗೆ ರಾಜಮಾರಾಜರಂದರs ಕಾಲ ಕಸ.. ಆ ಮನೆಯೊಳಗ ಆಕೆಯದೇ ಆದಂಥ ಸೊಯಂ ಸರಕಾರವುಂಟು. ನಿನಗ ಅಪಮಾನವಾಗಬಾರದು ಅಂತ? ಯಂದು ರಾಯ ಹೇಳಿದ್ದಕ್ಕೆ.. ರಾವನು. “ನಿಮ್ಮಂಥ ವಯಸ್ಸಾದೋರು.. ಹೋಗಿ ಬರಬೌದೆಂದ ಮಾಲ.. ಬಾರಾಬೂನಿ ಮಾಡಿರೋ ನಾನು ಯಾಕ ಹೋಗಬಾರದೂರಿ” ಯಂದೊಡನೆ.... ರಾಯ ಪಾತಾಳ ತಲುಪಿಬಿಟ್ಟನು. ಕೆಸರಿನಮಾಲ ಕಲ್ಲುಹಾಕುವುದೇಕೆ? ಆಯ್ತಪ್ಪಾ.. ಹೋಗಿ ಬಾರಪ್ಪಾ” ಯಂದು ಬಾಯುಪಚಾರಕ್ಕೆ ಹೇಳಿದನು. ವಾಯುಯೇಗದಲ್ಲಿ ಹೋದ ಮುರಾರಿರಾವ್ ತನ್ನ ಸರೀರಕ್ಕೂ, ಕೋವಿಗೂ ಘಮ್ಮಂದಣ್ಣೆ ಪೂಸಿಕೊಂಡನು. ಭಯೋತ್ಪಾದನೆ ಮಾಡಲಕ ಯಿರಲಿ ಯಂದು ಕೋವಿಗೂ ಘಮ್ಮೆಂದೆಣ್ಣೆ ಪೂಸಿ ಹೆಗಲಿಗಿಳಿಬಿಟ್ಟು ತಾಯಕ್ಕನ ಮನೆಕಡೇಕ ಕುದುರೆಯೇರಿ ಹೊಂಟನು. ಸಂತರಸ್ತಗೊಂಡಿದ್ದವರು ವಾಸಣೆಗೆ ಹೊರ ಬಂದು ಹಿಡಿ ಹಿಡಿ ಸಾಪ ಹಾಕದೆಯಿರಲಿಲ್ಲ.. ರಾಯನು ಯೀ ಮೊದಲೇ ಗುಟ್ಟಾಗಿ ಖಬುರು ಕಳಿಸಿದ್ದರಿಂದ ತಾಯಕ್ಕ ವಂದ್ಯಾಕು ಮಂದಿ ಭರರಿ ಪಯಿಲುವಾನರ ನಡುವೆ ಯಿರಾಜಮಾನಳಾಗಿದ್ದಳು. ಯಾತಕ್ಕೆ ಬಂದಿರುವನೆಂದು ಅವನ ಮಮ್ಮಿಂದ ಹೊರಹೊಂಡುತಲಿದ್ದ ದುರಾತವೇ ಹೇಳುತಲಿತ್ತು. ತನ್ನನ್ನು ಸ್ವಾಗತಿಸುವುದು ಮತ್ತಟ್ಟಿಗಿರಲಿ, ಕೂಡ್ರಲಿಕ್ಕೆ ಆಸನವನ್ನಾದರೂ ತೋರಿಸಬಾರದಿತ್ತೇ..? ತಾನೇ ಜುಲುಮಿಯಿಂದ ಕುಂಡರಬೇಕೆಂದರೆ ಯಾದೇ ವಂದು ಆಸನ ಯಿರಲಿಲ್ಲ.. ಹೇ ವಯಸ್ಸಿನಲ್ಲೇ ಯಿಷ್ಟು ಸುಂದರಿಯಿರುವ ಯೀಕೆ ವಂದು ವಯಸ್ಸಿನಲ್ಲಿ... ಯೀಕೆಯ ಮಗಳು ಯಿನ್ನದೆಷ್ಟು..? ಈ ಮಾತನ್ನು ಆರಂಭಿಸುವುದು ಹೇಗೆ? ತನ್ನ ಪ್ರವರ ಹೇಳುತ್ತ ಹೋದ. ಅದಕ್ಕಿದ್ದು ಆಕೆಯು ನೀನ್ಯಾರಾದರೂ ಆಗಿರು? ಮೊದಲು ನೀನ್ಯಾಕೆ ಬಂದಿ ಅಂಬುದನು ಬೊಗುಳು? ಯಂದು ಮುಖಕ್ಕೆ ರಾಚಿದಳು. ಅದರಿಂದ ಕನಲಿದ