ಪುಟ:ಅರಮನೆ.pdf/೩೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೫೮ ಅರಮನೆ ಮಾದೇವss, ಅತ್ತ ಕುದುರೆಡವು ಪಟ್ಟಣದೊಳಗೋss.. ದಯವಸ್ತರು ಕೊಡೋದು ಕೊಟ್ಟಾದುದನ್ನು ತಗೊಳ್ಳೋದು ತಗೊಂಡಾದ ಮ್ಯಾಲ ಸುಮ್ಮನ ಯಿರಲಕ ಹೆಂಗ ಸಾಧ್ಯ? ಅದ್ಭುತ ಸಬುಧಯಿನ್ಯಾಸಕಾರನಾದ ತಾನು ಬದುಕುವುದು ಮುಖ್ಯ, ತಾನೀಗ ಯಾರನ್ನು ಹೊಗಳಲಿರುವೆನೆಂಬುದು ಮುಖ್ಯವಲ್ಲ... ಯಾವ ನುಡಿ ಜಾಲದಲ್ಲಿ ಹೊಗಳಲಿರುವೆನೆಂಬುದು ಮುಖ್ಯ.. ಯೀ ಕ್ಷಣ ತನ್ನ ಮನದೊಳಗ ಮೂಡಿರುವುದು ಕೋಣವಲ್ಲ.. ಆ ಕೋಣದೊಳಗ ರಾಜಮಹಾರಾಜರಡಗವರೆ. ತನ್ನ ಮಯ್ಯ ಬಣ್ಣವನ್ನು ಭಿತ್ತಿ ಬೆಳೆಯುತ್ತ ವುದಯವಾಗುತಲಿರು ವಂಥಾತನೇ ಮಹಿಷಾಸೂರನು.. ಅವನು ತನ್ನ ಹೊಗಳಿಕೆಯ ಕೇಂದ್ರಪಾತ್ರ. ಕಂದ, ಸೀಸ, ಚಂಪಕ, ವುತ್ತಲ, ಸಗ್ಗರಾ, ಮಾ ಸ್ವಗ್ಗರಾ.. ಭಾಮಿನೀ.. ವಾರಕೇ.. ನೀವೆಲ್ಲೆಲ್ಲಿ ಯಾವ್ಯಾವ ಸ್ಥಿತಿಯಲ್ಲಿರುವಿರೋ ಹಂಗಂಗೆ ಬಂದು ನನ್ನ ನಾಲಗೆ ಮ್ಯಾಲ ಹಾಜರಾಗಿ ಯಂದವಯ್ಯ ಆಗ್ನೆ ಮಾಡಿದೊಡನೆ.... ನೋಡಲಕ ನೂರು ಕಣ್ಣು ಸಾಲದೆಂಬಂತೆ ವಾಚಸ್ಪತಿ ರಾಮರಾಜುವು ದಿರಿಸು ಧಾರಣ ಮಾಡಿದನು. ಆ ರಾಜರಿಂದ ಬಂದಿದ್ದ ಬಳವಳಿಯನ್ನು ಯೀ ಅಂಗದ ಮ್ಯಾಲ.. ಯೀ ರಾಜರಿಂದ ಸಂದಿದ್ದ ಬಳವಳಿಯನ್ನು ಆ ಅಂಗದ ಮಾಲೂ.. ಅಂಗ..ವಂಗ..ಕಳಿಂಗ.. ಕುಂತಳ ದೇಸಗಳ ರಾಜಮಾರಾಜರೆಲ್ಲ ಲಾಂಛನಪ್ರಾಯವಾಗಿ ಅವನ ಸರೀರದ ಮಾಲ ಸವಾರಿ ಮಾಡಲಿರುವರೇನೋ ಯಂಬಂತೆ (ಯಿ ದಿರಿಸುಗಳನ್ನು ನೆಸ್ಥೆಯು ಹೆಚ್ಚಿನ ಬೆಲೆಗೆ ಕೊಳ್ಳುವುದಾಗಿ ತಿರುಪಾಲಯ್ಯ ಸ್ನೇಷಿ«ಯ ಮೂಲಕ...) ಕಲೆಟ್ಟರು ಮನೋಸಾಹೇಬನ ಭೆಟ್ಟಿಗೆಂದೇ ಮೀಸಲಿಟ್ಟಿದ್ದ ಪರಿಕರಗಳು ಅವಾಗಿದ್ದವು.. ಶಾರದಮ್ಮ ಅಲಂಕುತಗೊಂಡ ತನ್ನ ಪತಿದೇವರನ್ನು ಯಿಯಿಧ ಕೋನಗಳಿಂದ ನೋಡಿದಳು.. ಚಕ್ರವರಿಯಿದ್ದಂಗದೀರಿ ಯಂದು ಪ್ರಶಂಸಿಸಿದಳು.. ನೀವಳಿಸಿ ತೆಗೆದು ಗಂಡನ ಗಲ್ಲದ ಮ್ಯಾಲ ಬೊಟ್ಟಿಟ್ಟಳು. ಕೋಣಕ್ಕೆ ಯಷ್ಟು ದೂರದಲ್ಲಿದ್ದು ಹೊಗಳಬೇಕೆಂಬುದರ ಬಗ್ಗೆ ಸೂಕ್ತ ಸಲಹೆ ನೀಡಿ ಬೀಳುಕೊಟ್ಟಳು..... ತಾನು ಮಾಮೂಲು ಮನುಷ್ಯನಲ್ಲಿ ಯಂದು ಭಾವಿಸಿದ್ದ ರಾಜುವು ಬೀದಿಗೆ ಬಂದದ್ದೇ ಅಪರೂಪ, ಮಂದಿಯ ಕಣ್ಣಿಗೆ ಗೋಚರ ಮಾಡಿದ್ದೇ ಅಪರೂಪ. ತಾನು ತನ್ನ ಮೋಣಿಗೆ ಕುತೂಹಲದ, ಗುಟ್ಟಿನ ಕೇಂದ್ರವಾಗಿದ್ದನು.