ಪುಟ:ಅರಮನೆ.pdf/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೦ ಅರಮನೆ ಧೂಳೆಬ್ಬಿಸಿತು. ಅದು ಅಪಾಯದ ಮನ್ಸೂಚನೆ ಯಂದರ ಮಾಡಿಕೊಂಡ ಭಟ್ರಾಜುವು “ಸೀಮನ್ ಮಹಾರಾಜಧಿರಾಜ.. ರಾಜಪರಮೇಶ್ವರಾ........ ಭಾಷೆಗೆ ತಪ್ಪುವ ರಾಯರ ಗಂಡss ಪರರಾಜ ಭಯಂಕರಾss ದುಷ್ಟ ಶಾರೂಲ ಮದ್ದನss ಗಂಡಭೇರುಂಡಾss.. ಕುದುರೆಡವು ರಾಜ್ಯ ರಮಾರಮಣss” ಯಂದು ಮುಂತಾಗಿ ದ್ವನಿಯನ್ನು ಯೇರಿಸುತ್ತೇರಿಸುತ್ತ ಹೋಗಲು ಆ ದೊನಿಯ ತರಂಗಗಳು ಬಯಲು ತುಂಬಿ ಜೀಕರಿಸಲು.. ಅದರಿಂದ ಪುಳಕಗೊಂಡ ಸೂರನು ಗ್ರುತ್ಯ ಗತಿಯಲ್ಲಿ ಥೋಂ ತನನನ ಹೆಜ್ಜೆ ಹಾಕುತ ತನ್ನ ಪ್ರಿಯತಮೆಯರ ಕಡೇಕ ವಾರೆ ನೋಟ ಬೀರಿದನು.. ಅವರಾದರೋ ಆನಂದಾತಿಶಯದಿಂದ ತುಂಬಿತುಳುಕಾಡುತಲಿದ್ದರು.... ಹೊಗಳು ಪದಗಳ ಸಲುವಾಗಿ ತಡಕಾಡಿದರಲ್ಲದು ತನ್ನನ್ನು ಕೋಡುಗಳಿಂದ ಯತಿ ವಗೆವುದೋ ಯಂದು ಹೆದರಿದ ರಾಜುವು ಛಟ್ ಛಟೀಲ್ ಯಂಬ ಸೀಸಪದ್ಯವನ್ನೂ, ಗುಡ್ ಗುಡಿಲ್ ಯಂಬ ಕಂದ ಪದ್ಯವನ್ನೂ ಸುಶ್ರಾವ್ಯದಿಂದ ಹಾಡಿದನು. ತದನಂತರ ಮತ್ತೇಭಯಿಕ್ರೀಡಿತದಲ್ಲಿ ನೀನು ಕ್ರುತಯುಗದಲ್ಲಿ ಯಿಶ್ವಾಮಿತ್ರಮುನಿವರೇಣ್ಯನ ನೇತ್ರಗಳೊಳಗಡಗಿದ್ದೀ.. ತ್ರೇತಾಯುಗದಲ್ಲಿ ದಶಾನನ ಹತ್ತೂ ತಲೆಗಳೊಳಗೆ ಅಡಗಿದ್ದೀ...ದ್ವಾಪರದಲ್ಲಿ ದುರೊಧನನ ತೊಡೆಯೊಳಗಡಗಿದ್ದೀSS.. ಮನುವ೦ತರಗಳನು ಲೀಲಾಜಾಲವಾಗಿ ದಾಟುತ್ತ ಕಲಿಯುಗ ಪ್ರವೇಶ ಮಾಡಿರೋ ನೀನು ಅಸಾಮಾನ್ಯ ಪರಾಕ್ರಮಿಯು.. ಕವುರವಾsss.. ಮಹಾ ಕವುರವಾsss... ಕಾಲಸೂತ್ರಾsss.. ಅಸಿ ಪತ್ರವನಾSSS .. ಸೂಕರ ಮುಖಾsss.. ಅಂಧ ಕೂಪಾsss.. ಕ್ರಿಮಿ ಭೋಜನಾsss.. ತಪ್ತ ಸೂರೀSSS.. ವಜ್ರಕಂಟಿಕಾSSSS. ಯವೇ ಮೊದಲಾದ ಯಿಪ್ಪತ್ತೊಂದು ನರಕಗಳನ್ನು ಲೀಲಾಜಾಲವಾಗಿ ದಾಟಿ, ಸುಖಸಂಪತ್ತುಗಳಿಗಾಗರಮಾದ ಸೊರಲೋಕದ ಮೂಲಕ ಹಾದು ಕಲಿಯುಗವನ್ನು ಪ್ರವೇಶ ಮಾಡಿರುವಂಥಾ ನೀನು... ಮಹಾಸಡ್ಡರಾದಲ್ಲಿ... ಯಲಯ್ ಸೂರ ಮಹಾಶಯನೇ.. ನಿನ್ನ ಪವುರಾಣಿಕ ಹಿನ್ನಲೆಯನ್ನು ಯೀ ಪ್ರಕಾರವಾಗಿ ಯಿವರಿಸುತ್ತೇನೆ. ಚಿತ್ತವಿಟ್ಟು ಆಲಿಸುವಂಥವನಾಗು. ದಕ್ಷಬ್ರಮ್ಮನಿಂದ ಧರಣಿಯಲ್ಲಿ ಜನಿಸಿದಾಕೆಂರಾದ ದಿತಿಯೇ ನಿನ್ನ ಆದಿಮಾತ್ತುಮೂರಿಯು, ಆಕೆಯ ಪುಣ್ಯವುದರದಿಂದ ಜನಿಸಿದವರು ಯಾರು