ಪುಟ:ಅರಮನೆ.pdf/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೬೧ ಯಾರೆಂದರ ಹಿರಣ್ಯಕಶಿಪು, ಹಿರಣ್ಯಾಕ್ಷರೇ ಮೊದಲಾದ ಅಸುರರು ಅವರನ್ನೆಲ್ಲ ಯಿಂದ್ರನು ನಯನಾಜೂಕಿನಿಂದ ಕೊಲೆ ಮಾಡಿದನು. ಯಿಂದ್ರನನ್ನು ಜಯಿಸುವಂಥ ಮಗನು ನಿನ್ನ ಗರದಲ್ಲಿ ಜನಿಸುತ್ತಾನೆ ಯಂದು ಆಕೆಯ ಗಂಡ ಕಶ್ಯಪ ಹೇಳಿದಂತೆ ಆಕೆ ಮತ್ತೆ ಗದ್ಭವತಿಯಾದಳು... (ಕಾಡುಗೊಲ್ಲರೀರಯ್ಯನ ಸಲಹೆಯಂತೆ ರಾಮರಾಜುವು ಹಿಂದಹಿಂದಕ ಹೆಜ್ಜೆಯನಿಕ್ಕುತ ಹೊಗಳುತ್ತಿರಲು ಪ್ಲಾ... ಹಾ... ಯಂದು ವುದ್ದಾರ ತೆಗೆಯುತ್ತ.. ಹೊಗಳಿಕೆಯ ವಂದೊಂದು ಮಾತುಗಳಿಗೆ ಮಯ್ಯ ಮರೆಯುತ್ತ ಸೂರನು ಮುಂದ ಮುಂದಕ ಹೆಜ್ಜೆಯನಿಕ್ಕುತಲಿದ್ದನು.. ಯಿದರ ಪರಿಣಾಮವಾಗಿ ಪಟ್ಟಣಕ್ಕೆ ಅನತಿ ದೂರದಲ್ಲಿದ್ದರು.. ಅಗೋ ಅಲ್ಲಿ ಜನರು... ಯಗೋ ಯಲ್ಲಿ ಜನರು..) ದಿತಿಯ ಗಡ್ಡ ಯಂಟು ತಿಂಗಳಲ್ಲಿ ಬಿತ್ತು. ಆಕೆ ಹಗಲು ಹೊತ್ತಿನಲ್ಲಿ ತಲೆದಿಂಬೊಂದರ ಮ್ಯಾಲ ಕಾಲು ಚಾಚಿ ಶಾಸ್ತ್ರಕ್ಕೆ ಯಿರುದ್ಧವಾಗಿ ಮಲಗಿದ್ದುದನ್ನು ಯಿಂದ್ರನು ಗಮನಿಸಿದ. ವುಪಾಯಾಂತರದಿಂದ ಆಕೆಯ ಗರವನ್ನು ಪ್ರವೇಶ ಮಾಡಿ. ವಯುಧದ ಸಾಯದಿಂದ ಭ್ರೂಣವನ್ನು ಯೇಳು ತುಂಡುಗಳನ್ನಾಗಿ ಕತ್ತರಿಸಿ ಹೊರಬಂದು ಕಯ್ಯ ಮುಗುದು 'ಯಲಾಯ್ ತಾಯೇ.. ನನ್ನ ಅಪರಾಧವನ್ನು ಮನ್ನಿಸು....' (ಸರೀರಿ.. ಸರಕೊಳ್ಳಿರಿ.. ಹಿಂದ ಹಿಂದಕ.. ಅಗೋ ಅಲ್ಲಿ ಅವನು ರೆಟ್ಟೆಗಡುತರದ ರ್ಮಿಣಿ ತಂದಾನೆ, ಯಗೋ ಯಿಲ್ಲಿ ಯಿವನು ಗಾಂಜಾತೊಪ್ಪಲನು ಹಿಂಡಕೊಂಡವನೆ ಸದುವು ನೋಡಿ ತಿಂಬಲಕ ಯಿಡುವುದಕ.. ಪ್ಲಾ! ರಾಮರಾಜು.. ಸೂರನ ಚೂರುವಾಪರವನ್ನೆಲ್ಲ ಯಿನ್ನೂ ರಸವತ್ತಾಗಿ ವರಣನ ಮಾಡಬೇಕಪ್ಪಾ ಮತ್ತೆ.. ಯಿನ್ನೊಂದು ಸೋಲುಪದೂರ ಅಯ್ದೆ ಅಷ್ಟೆ. . ತಾಯಿ ದಿತಿ ತನ್ನನ್ನು ತಾನು ನತದ್ರುಷ್ಟೆಯಂದು ತೆಗಳಿಕೊಂಡಳು.. ಪಿಂಡದ ತುಂಡುಗಳ ಪಯ್ಕೆ ವಂದನ್ನು ಬ್ರಮ್ಮಲೋಕದ ಕಡೆಗೂ, ಯಿನ್ನೊಂದನ್ನು ಯಿಂದ್ರಲೋಕದ ಕಡೆಗೂ, ಮೂರನೇದನ್ನು ದೇವಲೋಕದ ಕಡೆಗೂ ಯಸೆದಳು.. ವುಳಿದ ನಾಲ್ಕು ತುಂಡುಗಳನ್ನು ನಾಲ್ಕು ದಿಕ್ಕಿನ ಕಡೆಗೂ ಯಸೆದಳು.. (ಕೇಳುತ್ತಿರುವ ಸೂರನಿಗೆ ದುಕ್ತ ತಡೆಯಲಾಗಲಿಲ್ಲ.. ಕೋಪ ತಡೆಯಲಕ ಆಗಲಿಲ್ಲ... ಅಯ್ಯೋ ಯಿಂದ್ರಾನೀನೆಂಥಾ ಕಟುಕ.. ನಾನಿರಬೇಕಿತ್ತಾಗ. ಅದರ ಚಿತ್ತ ಕಲಕುವಲ್ಲಿ ಯಶಸ್ವಿಯಾಗಿದ್ದ ರಾಮರಾಜುವು ಅದರಿಂದ