ಪುಟ:ಅರಮನೆ.pdf/೩೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೪ ಅರಮನೆ ಆ ಮೂಕ ಪ್ರಾಣಿಗಳ ಮೇಕರಿಕೆ ದೇಕರಿಕೆ ನಿಂಗೆ ಸೇರಿದ್ದು. ಯಲ್ಲೋ ಡೊಳ್ಳು ಬಡಿಯುತ್ತಿರುವ ನಾದವು.. ಯಲ್ಲೋ ರುಮ್ಮಿ ತೀಡುತ್ತಿರುವ ನಿನಾದವು.. ಯೇನೋ ಅರಕೆ ಮಾಡುವ ಪ್ರಯತ್ನದಲ್ಲಿದ್ದ ಬೇಯಿನ ಮರವು ಮಿಸುಕಾಡುತ ಕೊಂಬೆ ರೆಂಬೆ ಮಸೆದು ಸಬುಧ ಮಾಡುತಲಿತ್ತು ಬಾಯಿ ಯಿರದ ಕಾರಣಕ್ಕೆ... ಅದೇ ಆಗ ಹೊರಕಡೀಕೆ ಯಂದು ಹೋಗಿದ್ದ ಅಂತಾಡೆಪ್ಪ ಬಂದ. “ಯಪ್ಪಾ ನನ್ನ ಸೂರ ಕಾಣುತಾಯಿಲ್ಲ... ನನ್ನ ನಾಯಿಗಳು ಕಾಣುತಾಯಿಲ್ಲ..” ಯಂದು ಕೇಳಿದಳು. ಅದಕ್ಕಿದ್ದು ಆತನು.” ಯಲ್ಲಿಗೋ ಹೋದಂಗದಾವ ತಾಯಿ.. ಬರತಾವ ಬಿಡು.. ಅದಕ್ಯಾಕ ಸಪ್ಪಗಾತೀ...” ಯಂದ ಸಮಾಧಾನ ಹೇಳಿದನು.. ಆಗ ಆಕೆ ಬಿಟ್ಟ ನಿಟ್ಟುಸಿರು.... ಅದೇ ಸಮಯಕ್ಕೆ ಸರಿಯಾಗಿ ತಿಂಡೀರ ಯಂಬ ಗುಂಡುಮುಣುಗು ದೇಸದ ಭಕುತನು ವಸ್ತಿಯ ತೂರುವಾಸ್ತಮದ ಯದುರು ನಿಂತು 'ಅಹಹಹಾ ರುದ್ರೇ.. ಅಹಹಹಾ ಸಾಂಬವೀ..” ಯಂದು ಮುಂತಾಗಿ ಹೇಳುತಲಿದ್ದ.. ಅವನೊಟ್ಟಿಗಿದ್ದ ಕೆಲಮಂದಿ ಸಿವನ್ನಾಮ.. ಯಂದು ಕೂಗಲಕ ತಮ ತಮ್ಮ ಗಂಟಲುಗಳ ಸ್ತುತಿ ಸರಿಪಡಿಸಿಕೊಳ್ಳುತಲಿದ್ದರು.. ಮತ್ತೊಂದು ಕಡೇಕ ಯಂಟಾಳು ತೂಕದ ಗಂಟಲಯ್ಯನು “ಪರಸಿವನ ಪಾಲನೇತ್ರದಿಂದ ಮುಟ್ಟಿಸಿದಂಥವಳೇss. ರುದ್ರನ ಯೀರಕಾಂತಿಯಿಂದ ವಡಮೂಡಿರುವಂಥವಳೇss..” ಯಂದು ಕೂಗುತ ತನ್ನ ಪ್ರತಿಸ್ಪರಿ ತಿಂಡೀರಯ್ಯ ನತ್ತ ದಾಪುಗಾಲು ಯಿಡುತಲಿದ್ದನು. ಅದನ್ನೆಲ್ಲ ಕೇಳಿ ಕೇಳಿ ರೋಸಿ ಹೋದ ಜಗಲೂರೆವ್ವ.. 'ಹ್ಲಾ..' ಯಂದು ತನ್ನ ಪರಣಕುಟಿಯಿಂದ ಹೊರ ಜಿಗಿದು ಕುಪ್ಪಳಿಸಿ ನಿಂತೊಡನೆ ಅವರೆಲ್ಲ ಅಂಡಾವರನಗೊಳ್ಳದೆ ಯಿರಲಿಲ್ಲ...ಯೀ ಪ್ರಕಾರವಾಗಿ ನಿರಜನಗೊಂಡ ಕಡೆ ತಾನು ಯ್ಯೋಮ್ ಚನ್ನಮೈss ಯ್ಯೋಮ್ ಧರುಮವೋ.. ಯಂದು ಮತ ಮತ್ತ ಕೂಗಲಾರಂಭಿಸಿದಳು.. ಆದರೆ ಯಲ್ಲಲ್ಲಿ ಅಂದರ ಅಲ್ಲಲ್ಲಿ ಯಿದ್ದ ಅವುಗಳ ರುದಯಕ್ಕೆ ಆಕೆಯ ಕಂಠೀರವ ನಾಟುತಲಿತ್ತಾದರೂ 'ಬೊವ್ವಮ್ಮೊ' ಯಂದು ಬೊಗಳುವ ದುಸ್ಸಾಹಸಕ್ಕೆ ಮಾತ್ರಯಿಳಿಯಲಿಲ್ಲ..... ಬರುತಾವ ತಾಯಿ.. ಬಂದೇ ಬರುತಾವ ಬಿಡಪ್ಪಾ ಯಂದು ಅಂತಾತಡೆಪ್ಪನೂss... ಯಲ್ಲಪ್ಪಾ.. ನನ್ನೆದೆಯೊಳಗ ಸಂಕಟ ಮೂಡಯ್ಕೆ. ಅವಕ ಅಪಾಯ ತಗಲಯ್ಕೆ ಯಂದನಿಸಲಕ ಹತ್ತಯ್ಕೆ.. ನಿಂಗೆ ಗೊತ್ತಿಲ್ಲ ಯೀ ದೂರ ಸಮಾಚಾರ ಯಂದು ಜಗಲೂರೆವ್ವನೂ.. ಯಲ್ಲೋದವಿವು.. ತನ್ನ