ಪುಟ:ಅರಮನೆ.pdf/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೬೭ ಪಿಳಿ ನೋಡುತ್ತ ಕೂಕಂಡರು.. ಯವತ್ತಿಗೆ ಯಿದನು ತಡವೋದು ಪಾಡಲ್ಲ.. ಹೊತ್ತು ಮರುಹುಟ್ಟು ಪಡಕೊಂಡನಂತರ ಮಾಡಬೇಕೆಂದಿರುವುದನು ಮಾಡಿದರಾಯಿತು. ನಾಳೆ ದಿವಸ ತಾಯಿ ಸಾಂಬವಿ ತಮಗೆ ಯಾವ ಬುದ್ದಿಕೊಡುವಳೋ? ಯೇನೋ? ನಾಳೆಗಂಟ ಯೀ ನಿರನ ಪ್ರಾಂತದೊಳಗ ಯಿದ್ದು ಯೇನು ಮಾಡುವುದು? ಅಲ್ಲಿಂದ ವಂದು ಧಮ್ಮು ಹಾದಿ ದೂರದಲ್ಲಿ ಕಾಳಾವ್ರಯಂಬ ಮೂರು ಯಿತ್ತು. ಅಲ್ಲಿ ಸುಂದೋಸುಂದರ ವಧೆ' ಯಂಬ ದೊಡ್ಡಾಟ ಅವತ್ತೇ ನಡೆಯಲಿತ್ತು. ಬಡೇಲಡಕಿನ ಭಾನುಮತಿ, ಕಾನಾಮಡುಗಿನ ಕಳಾವತಿ, ಕುಮತಿಯ ಕುಮಾರಿಯೇ ಮೊದಲಾದ ಸುಂದರಿಯರು ಅದರೊಳಗ ವಟ್ಟಿಗೆ ನಟಿಸಿರುವುದು ಅಪರೂಪದ ಸಂಗತಿಯು.. ಅದನ್ನು ನೋಡಲಕ ಪುಣ್ಯ ಮಾಡಿರಬೇಕು.. ಹರೇದ ಹುಡುಗರಾದ ತಾವು ಯಂಥ ಸುವಣ್ಣಾವಕಾಶವನ್ನು ಯಾಕ ಕಳಕೋಬೇಕು? ವಬ್ಬರ ಮುಖ ವಬ್ಬರು ನೋಡಿಕೊಂಡರು. ಸದರಿ ಪ್ರಾಂತದಿಂದ ಸೂರ ತಪ್ಪಿಸಿಕೊಂಡು ಹೋಗುವುದು ಕಣಸಿನ ಮಾತು. ಆದರೆ ಕೊಟ್ಟಿಗೆ ಕಾಲಿಗೆ ಬಿಗಿದಿರೋ ಸರಪಳಿಗಳಾದರು ಯಂಥವು? ಯೇನು ಕಥೆ? ಮಹಿಷ ಆನೆಗಾತುರದ್ದೇನಲ್ಲ.. ಅದೂ ಅಲ್ಲದೆ ಕುದುರೆಡವು ಯಿರುವುದು ಕೂಗಳತೆ ದೂರದಲ್ಲಿ.. ಯೀ ಹೊತ್ತಿನಲ್ಲಿ ನರಹುಳ ಯಿಲ್ಲಿಗೆ ಬರಲಾರದು.. ಸರನೆ ಹೋಗಿ ನೋಡಿಕೊಂಡು.. ಬೆಳ್ಳಿ ಮೂಡುವುದಕು ಮುಂಚೇನ ಭyಂತ ಬಂದು ಸೇರಿಕೊಂಡು ಬಿಡುವುದು. ಪರಸ್ಪರ ವಪ್ಪಿಕೊಂಡರು.. ತೀರ ಹತ್ತಿರದಲ್ಲಿದ್ದ ಸೂರನಿಗೆ ಸಣುಮಾಡುತ ಬಿಟ್ಟು ಹೋಗುತ್ತಿರುವ ತಮ್ಮನ್ನು ಮಾಫ್ ಮಾಡೆಂದು ಕೇಳಿಕೊಂಡರು. ಅಲ್ಲಿಂದ ಅವರು ಕಾಳಾಪ್ರದ ಕಡೇಕ... ಅಕ್ಕತಂಗೇರ ಕಲ್ಲುಗುಂಡುಗಳ ಬುಡದಲ್ಲಿ ವುಸುರು ಬಿಗಿಹಿಡಿದು ಅಡಗಿದ್ದ ಚನ್ನವ್ವ ಧರುಮವರು ಅಂತೂ ತಮ್ಮ ಯೋಜನೆ ಫಲನೀಡಿತಲ್ಲಾ ಯಂದು ಸಮಾಧಾನದ ವುಸುರುಬಿಟ್ಟರು. ಆ ಕೂಡಲೆ ಸೂರನಿದ್ದ ಜೆಗೇವನ್ನು ತಲುಪಿದರು. ಅವನ ದುಸ್ಥಿತೀನ ನೋಡಿ ಮರುಗಿದರು. ಬಂಧನಕ್ಕೆ ಬಳಸಿರುವುದು ರೆಟ್ಟೆ ಗಡುತರ ಕಬ್ಬುಣದ ಸರಪಣಿಯು.. ಅದನ್ನು ಕಡಿದು ತುಂಡು ಮಾಡುವುದು ತಮ್ಮ ಅಳತೆ ಮೀರಿದ್ದು. ವುಳಿದಿರುವುದೆಂದರೆ ಸೂರನೇ ಪರಾಕ್ರಮ ಮೆರೆದು ಸರಪಣಿಯನ್ನು ತುಂಡು ತುಂಡು ಮಾಡಬೇಕು. ಮೋಡಿ ಹೋಗಿ ಜಗಲೂರವ್ವನ ಸರೀರದೊಳಗೆ ಜೀವ ತುಂಬಬೇಕು. ಸುನಕ ದ್ವಯರ