ಪುಟ:ಅರಮನೆ.pdf/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೬೮ ಅರಮನೆ ಪ್ರೋತ್ಸಾಹದಾಯಕ ಮಾತುಗಳಿಂದ ವುತ್ತೇಜಿತನಾದ ಸೂರನು ಶಕ್ತಿಮೀರಿ ಪ್ರಯತ್ನಿಸಿದನಾದರೂ ಬಂಧನದ ಮೀಸೆ ಅಲುಗಿಸಲಾಗಲಿಲ್ಲ... ಸುಸ್ತಾಗಿಬಿಟ್ಟನು. ಹೆಂಗಪ್ಪಾ ಯೀತನನ್ನು ಬಂಧನ ಮುಕ್ತನನ್ನಾಗಿಸುವುದು? ಆ ಶಕ್ತಿ ಯಿರುವುದು ಜಗಲೂರೆವ್ವಗ ಮಾತ್ರ.. ಆಕೆಯನ್ನು ಹೆಂಗ ಸದರಿ ಜಾಗಕ್ಕೆ ಕರೆತರುವುದು? ತಾವು ಹೋಗಿ ಬರಲಕಂದರ ಸೂರಯ್ಯ ವಂಟಿಯಾಗುತಾನ.. ಯೇನು ಮಾಡುವುದು ತಾವೀಗ!?.. ಯಂದು ಯಸನ ಮಾಡ ತೊಡಗಿದರು ಸಿವನೇ........ ಯೋ ಮುಂದಿನ ಪರಸಂಗ ಕುರುತು ತೆಗಾರ ವಂದೊಂದು ಕಥೆಯನ ಹೇಳವನೆ ಸಿವನೇ.... ಆ ವಂದಂದನು ನಂಬಲಕ ಆಗಂಗಿಲ್ಲ, ನಂಬದಿರಲಕ ಆಗಂಗಿಲ್ಲ ಸಿವನೇ... ಸೂರಯ್ಯ ವುಟ್ಟೋ ವುಯ್ದಂಥ ವುಜ್ಜೆ ಪಾದಗಳು, ರುಂಡ, ಮುಂಡವೇ ಮೊದಲಾದ ಅಂಗಾಂಗಳು ಮೂಡಿ ಜಲಗುದುರೆಯಾಕಾರ ಪಡಕೊಂಡಿತಂತೆ ಸಿವನೇ... ಕೆನೆದೂ ಕೆನೆದೂ ಠಣ್ಣಂತ ಮುಗಿಲಿಗೆ ಜಿಗಿಯಿತಂತೆ.. ಬಯಲೊಳಗೆ ಲಯವಾಗಿ.. ಬಯಲೆ ತಾನಾಗಿ ಕುದುರೆಡವ ಪಟ್ಟಣದ ಮ್ಯಾಲೆಲ್ಲ ಹಾರಾಡ ತೊಡಗಿತಂತೆ.. ಘಲ್ಲು ಘಲ್ಲುಯಂಬ ನಾದವನ್ನು ಸಲ್ಲಾಡಲು ಯೇನಿದ್ದೇ ತಪ್ಪಾ ಅದು.. ಯಾತಕ್ಕಿದ್ದೀತಪ್ಪಾಯಿದು.. ಯಾದೋ ದೇವತೆ ಗಸ್ತು ತಿರುಗುತ್ತಿರಬೌದಾ.. ಯಾದಾರ ರಾಚ್ಚಸ ಅಡ್ಡಾಡುತ್ತಿರಬೌದಾ.. ಯಂದು ಅಬಾಲರುದ್ಧರಾದಿ ಯಾಗಿ ದಿಗ್ಭ್ರಾಂತರಾಗಿ ಮುಗುಲ ಕಡೇಕ ಮುಖ ಮಾಡಿದರಂತೆ ಸಿವನೇss.. ಹಾಯ್ ಹಾಯ್ ಜಲಗುದುರೆಯೇ ಯಂದು ವುದ್ದಾರ ಮಾಡಿದರಂತೆ.. ಅಲ್ಲಯಿತೆಂದರದು ಯಿಲ್ಲಿಗೆ ಬಂತಂತೆ. ಯಿಲ್ಲಯಿತೆಂದರದು ಅಲ್ಲಿಗೆ ಹೋಯಿತಂತೆ.. ಲಾಂಗ್ ನೀನೇನು ಅಸ್ವಮೇಧಯಾಗದ ಕುದುರೆಯಾತುಮವಾ.. ನೀನೇನು ಭಯವನ ಸೋದರ ಸಂಬಂಧಿಯಾ.. ಯಂದು ಪ್ರಶ್ನೆಗಳನ್ನು ಕೇಳಾಡಿದರಂತೆ.. ವುತ್ತರ ಕೊಡಲಕದಕೇನು ಬಹಿರಂಗಯಿತ್ತಾ.. ಅಂತರಂಗಯಿತ್ತಾ?.. ಅದು ಹಂಗss ಹಾರಿಕೋತ ಹೋಗಿ ತುಂಬ ತಾಸು ಕೊಡುತಂತೆ.. ಬಂಗಾರದ ಲಾಂಯದಾಸೆ ವಡ್ಡಿದರಂತೆ, ಬೆಳ್ಳಲಾಯದಾಮಿಷ ವಡ್ಡಿದರಂತೆ. ಆದರದು ಆಸೆಗಳಿಗೆ ಬಲಿಯಾಗಲಿಲ್ಲಂತೆ, ಆಮಿಷಗಳಿಗೆ ವಲಿಯಲಿಲ್ಲವಂತೆ.. ಹಂಗs ಸತಾಯಿಸಿ ಸತಾಯಿಸಿ ಗಿಡದಿಂದ