ಪುಟ:ಅರಮನೆ.pdf/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೭೪ ಅರಮನೆ ಯೇನೇನು ಹೇಳಲ್ಪಟ್ಟಿರುವುದೋ ಅದರಂತೆ ಚಾಚೂ ತಪ್ಪದೆ ಜೀವನವನ್ನು ನಡೆಸುತ್ತಿರುವಂಥವರು.. ಪ್ರತಿವಂದಕು ನಕ್ಷತ್ರಗಳನ್ನವಲಂಬಿಸಿ ರುವಂಥವರು. ಗುಹಸ್ಥಾಶ್ರಮ, ವಾನಪ್ರಸ್ಥಾಶ್ರಮದ ಯಿಧಿ ಯಿಧಾನಗಳನ್ನು ತೂಚಾ ತಪ್ಪದೆ ಪಾಲಿಸುತ್ತಿರುವಂಥವರು.. ಅಂಥವರೆಲ್ಲ ತಮ್ಮ ಮುಖಂಡರನ್ನಾಗಿ ಆಯ್ಕೆ ಮಾಡಿರುವ ಅಣಿಮಾಂಡವ್ಯಮಾಚಾರರರು ಸಾಮಾನ್ಯರಲ್ಲ.. ಪವುರಾಣಿಕ ಕಾಲದಲ್ಲಿ ವಸಿಷ« ಯಿಸುವಾಮಿತ್ರರಿಗೆ ಕುತಯುಗದಲ್ಲಿ ಯಾವ ಸ್ಥಾನಮಾನ ಯಿದ್ದುಮೋ, ಯೇ ಕಲಿಯುಗದಲ್ಲೂ ಅವರಿಗೆ ಅವೇ ಸ್ಥಾನಮಾನಗಳಿರುವವು.. ಅವರ ದೂರುವಿಕರು ಕದಂಬ ಸಾಮ್ರಾಜ್ಯ ಪ್ರತಿಷಾಪನಾ ಯಿಷಯದಲ್ಲಿ ಮಯೂರವರನಿಗೆ ಸಲಹೆಗಾರರಾಗಿದ್ದರಂತೆ. ಯಿಜಯನಗರ ಸಂಸ್ಥಾಪನಾಚಾರ ಶ್ರೀಮದ್ ಯಿದ್ಯಾರಣ್ಯ ಮಹಾಮುನಿಗಳಿಗೂ ಅತ್ಯಂತ ನಿಕಟರಾಗಿದ್ದರಂತೆ... ಚತುರ್‌ಯೇದಗಳನ್ನೂ, ತ್ರಯೋದಶ ವುಪನಿಷತ್ತುಗಳನ್ನೂ, ಅಷ್ಟಾದಶ ಪುರಾಣಗಳನ್ನೂ, ಮನುಸೃತಿ, ಯಾಗ್ರಾವಲ್ಕ ಕೃತಿಗಳನ್ನೂ ಜೀರ ಮಾಡಿಕೊಂಡಿರುವಂತೆ, ಚಾಣಕ್ಯನ ರಾಜನೀತಿಶಾಸ್ತ್ರವು ಅವರಿಗೆ ಬಾಯಿಪಾಠವಂತೆ. ಜೋತಿಷ್ಯ ಶಾಸ್ತ್ರವನ್ನು ಕರಗತ ಮಾಡಿಕೊಂಡಿರುವರಂತೆ, ವುಪಾಸಕರಾದ ಅವರು ತಮ್ಮ ಭೂಮಧ್ಯೆ ಅಗ್ನಿನೇತ್ರವನ್ನು ಜೋಪಾನದಿಂದ ಯಿಟ್ಟುಕೊಂಡಿರುವರಂತೆ.. ಅವರು ಶಾಪಕೊಡಬಲ್ಲರಂತೆ, ವರಗಳನ್ನೂ ಕರುಣಿಸಬಲ್ಲರಂತೆ.. ಅಂಥವರು ಅಗ್ರಹಾರಗಳ ಮೂಲ ಸ್ವರೂಪದ ರಕ್ಷಣೆಗೆ ಕಂಕಣಬದ್ಧರಾಗಿರುವರೆಂದರೆ ಸಾಮಾನ್ಯ ಸಂಗತಿಯೇ? - ಸದರಿ ಸೀಮೆಯ ಫಲಾನ ಅಗ್ರಹಾರ ಗಳೊಂದೇ ಅಲ್ಲದೆ, ಶ್ರೀಶಯ್ದ, ತಿರುಪತಿ, ಚಂದ್ರಗಿರಿ ಪ್ರಾಂತ್ಯದ ಅಗ್ರಹಾರಗಳನ್ನೂ ಸಂಘಟನೆಯ ತೆಕ್ಕೆಗೆ ತೆಗೆದುಕೊಳ್ಳಲಾಯಿತು. ಕೇವಲ ವಾಕ್ ಶಕ್ತಿಯಿಂದ ಸಾಮ್ರಾಜ್ಯಗಳನ್ನೇ ಬದಲಿಸಿರುವ ಪತನಗೊಳಿಸಿರುವ ತಮಗೆ ಯೇ ಯಕಃಶ್ಚಿತ್ ಮನೋನನ್ನು ನಿರೂಲನ ಮಾಡುವುದು ಯಾವ ಮಹಾ!.. ಆದರೆ ತಮ್ಮ ಯೀ ಸಂಘಟನೆಯ ಸಂಗತಿ ಮುಖ್ಯವಾಗಿ ತಮ್ಮ ಅಗ್ರಹಾರಗಳ ಸ್ತ್ರೀಯರಿಗಾಲೀ, ಬ್ರಾಹ್ಮಣೇತರ ರಿಗಾಲೀ ತಿಳಿಯದಂತೆ ಯಚ್ಚರ ವಹಿಸಬೇಕು. ಗೋಪ್ಯಾತಿಗೋಪ್ಯವಾಗಿ ಫಲಾನ ಯಿಂಥಿಂಥ ಅಗ್ರಹಾರಗಳ, ಫಲಾನ ಯಿಂಥಿಂಥ ಮುಖಂಡರು ಫಲಾನ ಯಂಥ ಕಡೆ ಅಣಿ ಮಾಂಡವ್ಯಾಚಾರೈರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಮಂತ್ರಾಲೋಚನೆ ಸಭೆಗೆ ಹಾಜರಾಗಬೇಕು ಯಂಬ ಸಂಸ್ಕೃತ ವಕ್ಕಣಿಕೆಯ ಸುತ್ತೋಲೆಯನ್ನು