ಪುಟ:ಅರಮನೆ.pdf/೪೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೭೫ ಕಳಿಸಲಾಯಿತೆಂಬಲ್ಲಿಗೆ ಸಿವಸಂಕರ ಮಾದೇವss.. ಅತ್ತ ಕುಂಚೂರು ಬಂಧೀಖಾನೆಯಲ್ಲಿದ್ದ ಭರಮನಗವುಡನನ್ನು ಕೀ. ಶೇ. ಯಿಮ್ಮಡಿ ಸೋಮಶೇಖರ ನಾಯಕನ ಫವುಜು ಅಪಹರಣ ಮಾಡಿಕೊಂಡ ಹೋದಲಾಗಾಯ್ತು ಕುಂಪಣಿ ಸರಕಾರದ ಅಧಿಕಾರಿ ಸ್ಕೂವರ ದಿನವಂದಕ್ಕೆ ಮೂರು ತಾಸು ನಿದ್ದೆ ಮಾಡಿದರೆ ಹೆಚ್ಚು.. ಯರಡು ತಾಸು ಮಾಡಿದರ ಕಡಿಮೆ.. ಹಂಪರಸಪ್ಪಯ್ಯ 'ಯುವರ್ ಮ್ಯಾಜೆಸ್ಟಿss” ಯಂಬ ಅಮೂಲ್ಯ ಯಿಶೇಷಣದೊಂದಿಗೆ ಗವುಡನನ್ನು ಗುಟ್ಟಾಗಿ ಕಲೆ ಮಾಡಿಸಬೇಕೆಂಬ ದುಬಾರಿ ಸಲಹೆಯನ್ನು ನೀಡಿರದೆಯಿರಲಿಲ್ಲ... ವಂದು ಕಾಲದಲ್ಲಿ ತನ್ನ ದಿವಾನಗಿರಿ ಪತನವಾಗಲು ಗವುಡ ಪ್ರಮುಖ ಪಾತ್ರವಹಿಸಿದ್ದ ಸಂಗತಿಯನ್ನು ತಾನು ಮರೆತಿರದಿದ್ದುದೇ ಅಂಥ ಕಠೋರ ಸಲಹೆ ನೀಡಲು ಕಾರಣ. ತಾಯ್ತಾಡನ್ನು ಅಪಾರವಾಗಿ ಪ್ರೀತಿಸುತ್ತಿರುವವನೂ.. ಅಭಿಮಾನ ಧನನೂ. ಬ್ರಹ್ಮಹತ್ಯಾದೋಷವನ್ನು ಸಹಿಸಬಲ್ಲಂಥವನೂ ಆದ ಭರಮನಗವುಡ ಬದುಕಿದ್ದಲ್ಲಿ ವಂದಲ್ಲಾ ಎಂದು ದಿವಸ ತನ್ನ ಪ್ರಾಣಕ್ಕೆ ಸಂಚಕಾರ ತರುವನೆಂಬ ಜೀವಭಯಮಯಿನ್ನೊಂದು ಕಾರಣ.. ಮೂರನೆ ಕಾರಣ ಯಂದರೆ ತನ್ನ ಜಾತಕದಲ್ಲಿ ದುರರಣ ಯಂಬ ದಾಖಲೆಯಿರುವುದು.. ಸ್ಕೂವರನಿಗೂ ಆ ಸಲಹೆ ಪಸಂದೆನ್ನಿಸದೆಯಿರಲಿಲ್ಲ.. ಮೀನುಗಳನ್ನು ಹಿಡಿಯಲು ಮಳೆ ಹುಳುಗಳ ಸಹಾಯ ಬೇಕಿರುವಂತೆ ಸರಕಾರೀ ಯಿರೋಧಿಗಳ ಹುಟ್ಟಡಗಿಸಲು ಗವುಡ ಕೆಲಕಾಲ ಜೀವಂತವಾಗಿರಬೇಕೆಂದು ತಾನು ಬಯಸಿದ್ದ. ಆದರೆ!..... ತಿಂಗಳು ತಿಂಗಳಿಗೆ ಪಗಾರ ಯಣಿಸಿಕೊಳ್ಳುವ ಸಿಪಾಯಿಗಳಿಗೆ ಬದಲಾಗಿ ಬಿಜಾಪುರ ಸೀಮೆ ಝಳಕಿ ಕಡೇಲಿಂದ ನೂರಾರು ಮಂದಿ ನುರಿತ ಪಿಂಡಾರಿ ಕೊಲೆಗಾರರನ್ನು ಗುಟ್ಟಾಗಿ ಕರೆಯಿಸಿಕೊಂಡ.. ಅವರಿಗೆ ಸದರಿ ಸೀಮೆಯೊಳಗ ನೀವೇನು ಮಾಡಿದರೂ ಮಾಫಿ ಯಂದು ಹೇಳಿದ.. ತನಗೆ ಬೇಕಾಗಿರುವುದೇನಪಾ ಅಂದರ ಭರಮನಗವುಡ ತಲೆ ಮಾತ್ರಯಂದು ಹೇಳಿದ.. ತಿಂಗಳೊಪ್ಪತ್ತೊಳಗ ಗವುಡನ ರುಂಡವನ್ನು ತಾವು ತರತೀವಂತ ಹೇಳಿ ಹೊಂಟ ಅವರು ಅಮರದೇವರ ಗುಡ್ಡದ ಮ್ಯಾಲ ಸಭೆ ಸೇರಿದರು. ನೂರಾರು ಕೊಲೆಗಳ ಅನುಭವ ಯಿದ್ದ ಪುಳೆಯು “ನೋಡಿರಯ್ಯಾ. ಸಾಹೇಬನ ಹುಕುಮನ್ನು ಯೀ ಕೂಡಲೆ ಜಾರಿ ತರೋದು ಬ್ಯಾಡ.. ಮೊದಲು ಹಳ್ಳಿಹಳ್ಳಿಗಳನ್ನು ಸುಲಿಗೆ ಮಾಡೋಣ.. ಸುಖ ಅನುಭೋಸೋಣ.. ಆಮ್ಯಾಲ ಗವುಡನನ್ನು ಹುಡುಕುವ