ಪುಟ:ಅರಮನೆ.pdf/೪೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೨ ಅರಮನೆ ಕೇಳಿಕೊಂಡನು. ಯೇನಪ್ಪಾ.. ಯಂತಪ್ಪಾ ಯಂದಿವರು ಪ್ರಶ್ನೆ ಹಾಕಿದ್ದಕ್ಕೆ ಆತನು ಸಾದ್ಯಂತ ಯಿವರಿಸಿದನು. ಆಗ ಯಾಕುಂದನು ಕುದುರೆಡಮೊಳಗ ತಾಯಿ ಸಾಂಬವಿ ತೋರುತಲಿರುವ ಪವಾಡ ಮಯ್ಕೆಗಳನ್ನು ವರಣನ ಮಾಡೀ ಮಾಡೀ ನೀವೂನಿಮ್ಮ ಕೋಣವನ್ನು ತಾಯಿಗರುಪಣ ಮಾಡಿ ಮೊರೆ ಹೋಗಿರಿ ಯಂದನು. ಆಗಿದ್ದು ಆ ತಂದೆಯು ಕುದುರೆಡವಿದ್ದ ದಿಕ್ಕಿಗೆ ಕಯ್ಕ ಮುಗುದು ಹಂಗೇ ಕೇಳಿಕೊಂಡನು. ಆ ದಿಕ್ಕಿಗಿದ್ದ ಎಂದು ಹಿಡಿ ಮಣ್ಣನ್ನು ಆದಾರ ಯಂದು ಭಾವಿಸಿ ತನ್ನ ಮಗಳ ಮ್ಯಾಲ ಪ್ರೋಕ್ಷಿಸಿದನು. ವಂದರಗಳಿಗೆ ಕಳೆವಷ್ಟರಲ್ಲಿ ಕಂಕಾಳವ್ವ ಆಶ್ಚಯ್ಯಕರ ರೀತಿಯಲ್ಲಿ ಯದ್ದು ಕುಳಿತು “ಯಪ್ಪಾ.. ನಾನೀಗ ಪಾಡಾದೆ... ನನ್ನನ್ನು ಗಂಡನ ಮನೆಗೆ ಕಳುವಪ್ಪಾ' ಯಂದು ಹೇಳಿದೊಡನೆ ಅದರಿಂದ ಸಂತುಷ್ಟಗೊಂಡ ಆತನು ಕೂಗಳತೆ ದೂರದೂರೊಳಗೆ ನೆಲಗೊಂಡಿರುವ ತಾಯಿಯ ಧ್ಯಾನ ಮಾಡದೆ ತಾನು ಮಾಪರಾಧ ಮಾಡಿದೆನು. 'ತಾಯೇ ತನ್ನನ್ನು ಕ್ಷಮಾ ಮಾಡು' ಯಂದು ಹೇಳಿದ ತರುವಾಯ “ನೋಡಿರಯ್ಯಾ, ನಾಳೀಕೆ ನಾನೇ ಆ ಸೀಕ್ಷೇತ್ರಕ್ಕೆ ಕಾಲ್ನಡಗೀಲೆ ಬರುತೀನಿ, ತಾಯಿ ದರುಸನ ಪಡಕೊಂಡು ಆಕೆಯ ಪಾದದ ಬುಡಕ ಹರಕೇನ ವಪ್ತಿಗೆ ಮಾಡತೇನಿ...” ಯಂದು ಭಲೆ ಸಂತೋಷದಿಂದ ನುಡಿದನು.. ಅದಕ್ಕಿದ್ದು ಅವರು ಹಂಗೇ ಮಾಡಪ್ಪಾ ಯಂದು ಅಲ್ಲಿಂದ ಹಿಂದಕ ಹೊಳ್ಳಿದರು..... ನಾದದರವಾಗಿದ್ದ ಕುದುರೆಡಮೊಳಗ ದ್ಯಾನಸ್ಥ ಮುದ್ರೆಯಲ್ಲಿದ್ದ ಪೂರುವಿಕನು ಫಲಾನ ಯಂಥ ಕಡೇಕ ಹೋಗಿ ಮಾಬಲೀನ ಯದುರುಗೊಳ್ಳಲಕಬೇಕೆಂದು ಆಗ್ನೆ ಮಾಡಿದನು. ಅದನ್ನು ಆಗ್ರಾರಾಧಕರು ತಮ್ಮ ತಮ್ಮ ಬಾಯಿಗಳೆಂಬ ಕವಣೆಗಳೊಳಗ ಅಜ್ಜನ ಮಾತೆಂಬುವ ಕಲ್ಲುಸಕ್ಕರೆಯನಿಟ್ಟು ಸುತ್ತನ್ನಾಕಡೆ ತೂರಲು ಕಸಕ್ಕಲ ಪಾಲಾಚವ್ವನ ನೇತ್ರುತ್ವದಲ್ಲಿ ನಿತ್ರೆರೂ, ಗವುಡರ ಲೋಲಾಚಮ್ಮನ ನೇತ್ರುತ್ವದಲ್ಲಿ ಮಿತ್ರೆರೂ, ಮದೋರೂ, ಭಾರಿಸೋರೂ ನಾನಾ ಕಡೇಲಿಂದ ಬಂದು ಫಲಾನ ಜೆಗೇವನ್ನು ಸೇರಲಕ ಮಂದರಗಳಿಗೆ ಮಾತ್ರಹಿಡಿಯಿತು. ಗೊಲ್ಲರೀರಯ್ಯನ ನೇತುತ್ವದಲ್ಲಿ ಆ ದಿಬ್ಬಣವು ನಾದದ ನದಿಯೋಪಾದಿಯಲ್ಲಿ ಹರಕೋತ, ಹರಕೋತ ಕಾಸರಕದ ಹಾದಿಯ ಮುಂಗಟ್ಟಿಗೆ ಸೇರುದಕೂ ಮಗಳು, ಮಗಳ ಗಂಡ ಮತ್ತ ಮಾಬಲಿಯೊಡನೆ ಅಳ್ಳಾಡೆಪ್ಪನು ಬರುವುದಕ್ಕೂ ಸರಿಹೋಯಿತು. ಸಿವನ್ನಾಮ.. ಮುಗುಲಿಗೆ ಮುಟ್ಟಿತು. ನಿತೇರು ಮಾಬಲಿಯನ್ನು ಕಣಗಿಲೆ, ದಾಸವಾಳ ಹೂಮಾಲೆಗಳಿಂದಲಂಕರಿಸಿ