ಪುಟ:ಅರಮನೆ.pdf/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೮೩ ಆರತಿ ಯ ತಿಲಕ ಯಿಟ್ಟರು. ಜಯ ಮಂಗಳಂ, ನಿತ್ಯ ಸುಭ ಮಂಗಳಂ ಪಾಡಿದರು.. ಗೊಲ್ಲರೀರಯ್ಯನು ಕೋಣದ ಮಯ್ಯಗೆ ತಾಯಿಯ ಪಾದೋದಕವನ್ನು ಪ್ರೋಕ್ಷಣೆ ಮಾಡಿ ಅದಕ್ಕೆ 'ಚಂಡ' ಯಂದು ನಾಮಕರಣ ಮಾಡಿದನು ಯಿದ್ಯುಕ್ತವಾಗಿ.. ಚಂಡ ಡುರುಕಿ ಹೊಡೆದು ಸಮ್ಮತಿ ನೀಡಿ ತಾನು ಸದರಿ ಪಟ್ಟಣದ ಸೂರಯ್ಯನ ಬೀಜೋತ್ಪಾದನೆಯಿಂದಾದಾತನೆಂದಿತು.... - ಚಂಡನ ಮೆರವಣಿಗೆಯು ಆಮೆ ಯೇಗದಲ್ಲಿ ಸಾಗಿತು. ವಂದೊಂದು ಮನೆಯವರು ಅದನು ತರುಬುತ್ತಿದ್ದುದೇನು? ಆರತಿ ಯತ್ತುತ್ತಿದ್ದುದೇನು? ಹಣ್ಣುಹಂಪಲವನ್ನು ತಿನ್ನಲಕ ಕೊಡುತ್ತಿದ್ದುದೇನು? ಅದರ ಮಯ್ಯ ಸವರಿ ಪುನೀತರಾಗುತ್ತಿದ್ದುದೇನು? ಅದರ ಪಾದದ ಬುಡಕ್ಕೆ ಸೆಳುಹಾಕಿ ಬೀಳುಕೊಡುತ್ತಿದ್ದುದೇನು ಯಲ್ಲಿ ನೋಡಿದರೂ? ಯಾರ ಕಣ್ಣಲ್ಲಿಣುಕಿದರೂ... ಯಾರ ಕಿವಿಯಲ್ಲಿಣುಕಿದರೂ.. ಯಾರ ಬಾಯಿಯನ್ನು ತೆಗೆದು ನೋಡಿದರೂ.... ಆ ದಿಬ್ಬಣವು ಸಾಗೀ ತಿರುಗೀ, ತಿರುಗೀ ಸಾಗಿ ವಸ್ತಿ ತಲುಪಲು ಖುದ್ದ ಪೂರುವಿಕನೇ ಸ್ವಾಗತಿಸಿ ಮಾಬಲಿ ಪಟ್ಟಕಟ್ಟಿದನು. ಸಾವುರಾರು ಭಕುತಾದಿ ಮಂದಿ ತಮ್ಮತಂಡಕ್ಕೆ ಜಯಕಾರ ಹಾಕುತ್ತಿದ್ದುದನ್ನು ನೋಡಿದ ಅಳ್ಳಾಡೆ ಪ್ಪ ಹಿರಿ ಹಿರಿ ಹಿಗ್ಗಿದ. ಅಮಾಯಕತೆಯಿಂದದು ಭಕುತಾದಿ ಮಂದಿ ಕೊಡುತ್ತಿದ್ದುದಕ್ಕೆಲ್ಲಾ ತನ್ನ ಬಾಯನ ಚಾಚುತ್ತಿದ್ದುದನ್ನು ನೋಡಿ ಕಣ್ಣಲ್ಲಿ ಯರಡು ಹನಿ ವುದುಕವ ತಂದುಕೊಂಡ. ಚಂಡನನ್ನು ಅಪ್ಪಿಕೊಂಡು ನಗು ನಗುತ ಬಲಿಯಾಗೆಂದೂ.. ಸಾಂಬವಿಯ ದಯೆಯಿಂದ ನಿನಗೆ ಸರಮೋಚ್ಚ ಪದವಿ ಲಭಿಸುತ್ತದೆಯೆಂದೂ ಬುದ್ದಿ ಹೇಳಿದ. ವಸ್ತಿ ಪಾದಕ್ಕೆ ಹಣೆ ಮುಟ್ಟಿಸಿ ಸಣಮಾಡಿ ಯದ್ದ. ತನಗೆ ಭಕುತಿ ಪೂರೈಕವಾಗಿ ಸಣುಮಾಡಿದ ಬತೇರಪ್ಪ ದಂಪತಿಗಳಿಗೆ ಪೂರುವಿಕನು 'ಯಿತೆಂಭೋ ದಿವಸಕ್ಕೆ ಹೆಣುಮಗುವನ್ನು ಹಡಕೊಂಡು ಬನ್ನಿರಿ' ಯಂದು ಆಸೀರುವಾದ ಮಾಡಿದ. ತಮ್ಮ ಆಸೀರುವಾದ ಯಂದ ಆ ದಂಪತಿಗಳು ಚಂಡನನ್ನವುಚಿಕೊಂಡು ಲೊಚಲೊಚ ಮುದ್ದು ಕೊಟ್ಟರೆಂಬಲ್ಲಿಗೆ ಸಿವಸಿವಾ... ಹೇಳುವುದ ಹೇಳಿ, ಕೇಳುವುದ ಕೇಳಿ ಅವರೆಲ್ಲ ಅವರಿಂದ ಬೀಳುಕೊಂಡು ಅಲ್ಲಿಂದ ತಮ್ಮ ಸೊಗ್ರಾಮವಾದ ಕಾಸರಕದ ಕಡೇಕ ಮುಖ ಮಾಡಿದರೆಂಬಲ್ಲಿಗೆ ಸಿವ.. ಸಿವಾ.... ಆ ಕಡೇಲಿಂದ ಕುರಿ, ಆಡು, ಮಾಕೆಗಳನ್ನು ಅವುಚಿಕೊಂಡು ಸದರಿ ಪಟ್ಟಣವನ್ನು ತುಂಬುತಲಿದ್ದುದು ಲೆಕ್ಕಯಿಲ್ಲದಷ್ಟು ಮಂದಿ, ಬಲಿಕೊಡಲುತಿದ್ದಂಥ