ಪುಟ:ಅರಮನೆ.pdf/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೬ ಅರಮನೆ ಯಿವತ್ತಾರ ಲಗೂನ ಮುಳುಗೋದು ಬ್ಯಾಡವೇನು? ಅವ ಲಗುಲಗೂನ ಮುಳುಗಿದರ ತಾನು ತನ್ನ ಸಖೀಮಣಿ ತಾರಾ ನಿಹಾರಿಕೆಗಳ ಸಂಗಾಟ ಮೂಡಿ ಸದರಿ ಪಟ್ಟಣದ ಸಂಭರದೊಳಗೆ ಭಾಗಿಯಾಗಬವುದು ಯಂದು ಚಂದ್ರಾಮ ಲೆಕ್ಕ ಹಾಕುತಲಿದ್ದ. ಆದರ ಸೂರಾಮ ಚಂದ್ರಾಮನ ಲೆಕ್ಕಾಚಾರವನ್ನು ತಲೆಕೆಳಗ ಮಾಡಿರದೆ ಯಿರಲಿಲ್ಲ. ಅವನು ತನ್ನ ವಂದೊಂದು ಕಿರಣಕ್ಕೆ ವಂದೊಂದು ಕಣ್ಣು ಮುಡಿಸಿ ನೋಡುತಲಿದ್ದ. ತಾಯಿ ಹೊಳೆಗೆ ಹೊಂಡುವ ಪ್ರತಿ ಕಾರೈವನ್ನು ನುಣ್ಣಗೆ ಗಮನಿಸುತಲಿದ್ದ... ಅಗೋ ಅಲ್ಲಿ ಅದನ್ನು ಮಾಡುತ್ತಾರೆ, ಯಗೋ ಯಿಲ್ಲಿ ಯಿದನು ಮಾಡುತ್ತಾರೆ ಯಂದು ಮುಂತಾಗಿ ತನ್ನ ಕಿರಣಗಳು ಮಾಡುತಲಿದ್ದ ಯೀಕ್ಷಕಾ ಯಿವರಣೆಯನ್ನು ಶ್ರದ್ಧಾ ಭಕುತಿಯಿಂದ ಆಲಿಕೆ ಮಾಡುತಲಿದ್ದ.. ಬಿಸಿಲ ತಾಪ ಪಡೆಯಲಕೆಂದು ತಮ್ಮ ತಮ್ಮ ತಲೆಗಳ ಮ್ಯಾಲ ಪಟಗವ ಯಳಕೊಳ್ಳುತಲಿದ್ದರು.. ಜಾವ ಜಾವಕ್ಕೆ ನೀರೂ ನೀರು... ಯಂದು ಕನವರಿಕೆ ಮಾಡುತಲಿದ್ದರು.. ಯಿವನೇನಪ್ಪಾ ಯಿನ್ನೂ ಮುಳುಗುವಲ್ಲನು ಯಂದು ಸೂಯ್ಯಾಮನನ್ನೂ, ಯಿವನೇನಪ್ಪಾ ಯಿನ್ನೂ ಮೂಡುವಲ್ಲನು ಯಂದು ಚಂದ್ರಾಮನನ್ನೂ ತರಾಟೆಗೆ ತೆಗೆದುಕೊಳ್ಳುತಲಿದ್ದರು. ಯೀ ಕಾರಣದಲ್ಲಿ ಸದರಿ ಪಟ್ಟಣದೊಳಗ ನೆರಳಿನ ಬೇಡಿಕೆ ಹೆಚ್ಚಿತ್ತು.... ಯಲ್ಲಿ ನೋಡಿದರೂ ಮೂಕಪ್ರಾಣಿಗಳ ಮೆಹೆಹೆಹೇ ರಾಗಗಳ ಡಪ್ಪಿನಾಟವು.. ನಲ್ಲಿ ನೋಡಿದರೂ ಹರಕೆ ತೀರಿಸಲೋಸುಗ ಬತ್ತಲಾಗುತಲಿದ್ದವರೆಷ್ಟೋ? ತಮ್ಮ ತಮ್ಮ ಬತ್ತಲು ಮಯ್ಯಗಳನ್ನು ಬೇಯಿನ ತೊಪ್ಪಲಿಂದ ಮರೆಮಾಚುತಲಿದ್ದವರೆಷ್ಟೋ? ತಮ ಸರೀರ ಬರುವಾಗ ಹೆಂಗಿತ್ತೋ ಹಂಗೇ ಯಿರಲಿ ಯಂದು ಮರೆಯ ಹಂಗನ್ನು ತೊರೆದಿದ್ದವರೆಷ್ಟೋ. ವುಧೋ ವುದೋ ಅಂಬುವ ಯರಡಕ್ಷರದ ಪದಗಳನ್ನು ಬಿತ್ತಿ ಬೆಳಕಂಬುತ್ತಿದ್ದವರೆಷ್ಟೋ? ಹಿಂಗss ಯಲ್ಲಿ ನೋಡಿದಡಲ್ಲಿ ಆ ರೂಪದಲ್ಲಿ ತಾಯಿಯಿದ್ದಳು.. ಯೀ ರೂಪದಲ್ಲಿ ತಾಯಿಯಿದ್ದಳು. ಸಾಧು ಸಂತಾವಧೂತರು ಜಗದಂಬಾ.. ಜಗದಂಬಾ ಯಂದನಕಂತ ಸೇದುತಲಿದ್ದುದಂತೂ ಯಾಗ ಯಗ್ನಗಳ ಭ್ರಮಾ ವುಂಟುಮಾಡುತಲಿತ್ತು.. ಭಕುತಿಯ ಅಮಲೇರಿಸುವ ಹೊಗೆಯು ಮೋಡದೋಪಾದಿಯಲ್ಲಿ ಸದರಿ ಪಟ್ಟವನ್ನಾವರಿಸಿ ಸುಳುದಾಡುತಲಿತ್ತು. ಯಲ್ಲಿ ನೋಡಿದಡಲ್ಲಿ ಹಸುರು ಚಪ್ಪರಗಳು, ಮೇಲ್ಕಟ್ಟಿನ ಚಪ್ಪರಗಳು, ರಾವುಳ ಚಡಿಗಳು, ರತುನದ ಗದಿಗಳು, ಭೂಚಕ್ರದ ಕೊಡೆಗಳು, ಅರುಶಣ ಕುಂಕುಮದ ರಾಶಿಗಳು