ಪುಟ:ಅರಮನೆ.pdf/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೮೭ ಗೋಚರಾತಿ ಗೋಚರವಾಗುತ್ತಿರಲು.. ತರಾವರಿ ಮಂದಿ ತಲಾಕೊಂದೊಂದು ಸಳಿಜ್ವರದ ಮಾರಿ, ಸೀತಾಳಮಾರಿ, ಸಿಡುಬಿನ ಮಾರಿ, ಗದ್ದಕಟ್ಟಿನ ಮಾರಿ, ಫಳಕ್ಕನ ಮಾರಿಯೇ ಮೊದಲಾದ ಮಾರಮ್ಮಗಳ ಮುಖವಾಡ ಧಾರಣ ಮಾಡಿ ಮೂರು ದೂರುಗಳ ಬಿಡಿಸುತಾಳ.. ಗುಡುಲು ಗುಡುಸುಲುಗಳ ಬಿಡಿಸುತಾಳ.. ನರ ಕಲಿಗಳ ವಳಗ ಪಳಗಿನ ಮಾರಿ ಬರುತಾಳSSS.. ಯಂದು ಕೂಗುತ ತಮ್ಮ ತಮ್ಮ ಮಯ್ಯ ಯಿಂಚಿಂಚೋಳರ ಆವೇಸ ರವುಸ ತುಂಬಿಕೊಂಡು ಬಿರುಗಾಳಿ ಸುಂಟರಗಾಳಿಯೋಪಾದಿಯಲ್ಲಿ ಬೀದಿ ಬೀದಿಗಳ ತುಂಬೆಲ್ಲ ಸುಳುದಾಡುತಿರುವ ಕಾಲಕ್ಕೆ ತಾಯಂದಿರು ತಮ್ಮ ತಮ್ಮ ಬೀದಿ ಬೀದಿಗಳ ತುಂಬೆಲ್ಲ ಸುಳುದಾಡುತ್ತಿರುವ ಕಾಲಕ್ಕೆ ತಾಯಿಂದಿರು ತಮ್ಮ ತಮ್ಮ ಕಜ್ಜಿ ಪುಳ್ಳೆ ಕಂದಮ್ಮನಗಳನ್ನವುಚಿ ಕೊಂಡು ಬಚ್ಚಿಟ್ಟುಕೊಳ್ಳುತ್ತಿರೋ ಕಾಲಕ್ಕೆ ಪಡುವಣ ದಿಕ್ಕಲ್ಲಿದ್ದ ಯೇಕಾಸೂರಿಯ ಗುಡ್ಡವು ಕಸುವು ಕಿತ್ತು ಸೂರಪರಮಾತುಮನನ್ನು ಜಗ್ಗಿ ಯಳೆಯುತ್ತಿರುವ ಕಾಲಕ್ಕ... ಮೂಡಣದಲ್ಲಿದ್ದ ಕುರುಗುಡ್ಡವು ಕೆಸರ ಬುರುದಿಯಿಂದ ಚಂದ್ರಾಮನನ್ನು ಕಸುವು ಕಿತ್ತು ಮ್ಯಾಲಕ ಯತ್ತುತಿರುವ ಕಾಲಕ್ಕೆ ದಿವಟೋರ ಚಿನ್ನೂರಪ್ಪನ ಮಕ್ಕಳಾದ ಹಲಕುಂದಿ, ಸಾಲಗುಂದಿ, ಅಲಸಂದಿ, ಕಾಳಂದಿ, ಮುಕ್ಕುಂದಿ, ನಾಗಂದೀರು ದೀವಟಿಗೆಗಳಿಗೆ ಹಳೆಣ್ಣೆ ಕುಸುಬೆಣ್ಣೆ ೦ತರ೦ುತ್ತಿರುವ ಕಾಲಕ್ಕೆ, ವ೦ಥ ಟಗಾದರೂ ದಳು ಮ್ಯಾಲಕೇಳುತ್ತಿಲ್ಲವಲ್ಲಾಯಂದು ತಮ ಖರಗಳ ಬಗ್ಗೆ ಅಯ್ಯಾತಿ ಕುದುರೆಗಳು ಯಸನ ಮಾಡುತ್ತಿರುವ ಕಾಲಕ್ಕ..... ರಣಮಾರೆವ್ವನ ಪವುಳಿ ಬಳಿ ಭೂತ ಬಿಲ್ಲೆ ದ್ಯಾಮಯ್ಯನು ವಂದೊಂದಾಗಿ ತನ್ನ ಸರೀರದ ಮ್ಯಾಲಿದ್ದ ಅರುವೆಗಳನ್ನು ವುತಾರ ಮಾಡುತಲಿದ್ದನು.. ಅಲ್ಲೇ ಯಿದ್ದ ಬನ್ನಿಮರಕ್ಕೆ ಆತನ ಕ್ರಿಯಾ ಪತ್ನಿಯು ತನ್ನ ಕೊರಳೊಳಗಿದ್ದ ಮಾಂಗಲ್ಯದ ಸರವನ್ನು ತೆಗೆದು ನೇತುಹಾಕುತಲಿದ್ದಳು.. ಅವರ ಮಕ್ಕಳು ಬೆಕ್ಕಸಬೆರಗಾಗಿ ವಂದೊಂದು ದುಸ್ಯವನ್ನು ಕಣ್ಣಿಂದ ತಿಂಬುತಲಿದ್ದವು. ಸೂರೆ ಪರಮಾತುಮನ ಕಯ್ದೆ ಪಡುವಣ ದಿಕ್ಕು ಕೊಲೆಯಾಗಿ.. ಯಲ್ಲಿ ನೋಡಿದಡದಲ್ಲಿ ರಾಮಾರಗುತ ವರಕೊಂಡುಬಿಟ್ಟಿತ್ತು. ಸದರೀ ಕಗ್ಗೋಲೆಯನ್ನು ಮುಚ್ಚಿಹಾಕುವ ಹುನ್ನಾರಿನಿಂದಾಗಿ ಕರಿಗಂಬಳಿಯೊಂದು ಪಡುವಣದ ಕಳೇಬರದ ಮ್ಯಾಲ ಕವುಚಿಕೊಳ್ಳುತ್ತಿರುವುದನ್ನು ಗಮನಿಸಿದವನಾದ ಗಂಜಲನು ತಾನಿದ್ದ ಪ್ರಹರಿ ಗೋಡೆ ಮ್ಯಾಲಿಂದ ಘೋಷಿಸುತ್ತಲೇ ಯಿಬ್ಬಂದಿ, ಚಕ್ಕುಬಂದಿಯರು ತಮ್ಮ ತಮ್ಮ ಕಯ್ದಿದ್ದ