ಪುಟ:ಅರಮನೆ.pdf/೪೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೮೮ ಅರಮನೆ ಮಚ್ಚುಗಳಿಂದ ಟಗರುಗಳ ತಲೆಗಳನ್ನು ಕತ್ತರಿಸಿದೊಡನೆ 'ಜೀss' ಯಂದು ಹರಿಯ ತೊಡಗಿದ ರಕುತವನ್ನು ತಪಾಲೆಯಲ್ಲಿ ಸಂಗ್ರಹಿಸಿದ್ದು ಯಾರೆಂದರೆ ರಣಗೋಪನು. “ಅಗೋ.. ಮುಡು ಮುಡುನೆ ಮೂಡುತಾಯಿರೋ ಚಂದ್ರಾಮನ ಕಿರಣಗಳು ಬಂದಮೋ ಬಂದವು' ಯಂದು ಆತುಮಾಹುತಿ ದಿಬ್ಬದ ಮ್ಯಾಲ ನಿಂತಿದ್ದ ಸೆಂಡ್ರನು ಘೋಷಿಸುತ್ತಲೇ ಥಳ ಥಳ ಹೊಳೆಯತೊಡಗಿದ ರಾಶಿ ರಾಶಿ ಜೋಳದ ಅನ್ನದ ಮ್ಯಾಲ ಕರಯ್ಯ ರಗುತ ಸುರಿದು ವಂದೇ ಸಮಕ ತಾಳಿಸತೊಡಗಿದಾಗ ಸವಾರೆವ್ವ ಮತ್ತಾಕೆಯ ಸಂಗಡಗಿತ್ತೇರು “ಮಾತಾಯಿ ಕಿವಿಗೋಳು ಜೋತುಬಿದ್ದಾವೆ.. ಕಯ್ಲಿ ಗಗ್ಗರ ಹಿಡಿದು ಜಗದಂಬೆ ಮಾಯದವತಾರ ಯತ್ಯಾಳೇsss.” ಯಂದು ಯದೆ ವುಬ್ಬಿಸಿ ಹಾಡಲಾರಂಭಿಸಿದರು ಸಿವನೇ.. ಆ ಅವರ ಬಾಯಿಂದ ಹೊರಟ ಆ ಹಾಡು ಅಲೆ ಅಲೆಯಾಗಿ ಪಟ್ಟಣದ ತುಂಬೆಲ್ಲ ಹಬ್ಬಲು.... ಹತ್ತಾರು ಮಂದಿ.. ನೂರಾರು ಮಂದಿ ಆ ನಾದದ ಹಾದಿಗುಂಟ ನಡೆದು ಬಂದರು. ಅದನ್ನು ನಾನು ತಗಂಬುತೀನಿ, ಯಿದನು ನೀನು ತಗಾss ಅಂತ ತಲಾಕೊಂದೊಂದು ಕವಂಗವ ತೆಗೆದುಕೊಂಡರು.. ಸರಗದ ಕೆಂಗಳೂ ತುಂಬಿಕೊಂಡರು. ಮಾಯಾದ ರೂಪವನೆ ತಾಳ್ಯಾಳ ತಾಯಿss ನಿಗಿನಿಗೀಲೆ ವುರಿತಾಳೆ ಸೀದೇವಿ ಕುದುರೆಡವ ಮನೆ ಮನೆಯ ಸಾಂಬವೀ ಬೋ ಪರಾಕ್.... ಪ್ಲಾ... ಹಾ... ಮೋರುಗಲ್ಲಯ್ಯನ ವಂದೊಂದು ಬಿರುಬೀಸಾದ ಮಾತಿನಿಂದ ದ್ಯಾಮಯ್ಯನು ಭೂತ ಬಿಲ್ಲೆಯನ್ನು ತನ್ನ ಮಯ್ದೆ ಬರಮಾಡಿಕೋತಾನೆ.. ಅದು ತುಂಬಿಕೊಳ್ಳುವುದು ತಾನು ಸೇರಿಕೊಂಡ ಸರೀರವನ್ನುಂಡು ತೇಗಲಿಕ್ಕೆ ಸಿವನೇ.. ಅದು ಆತನ ಮಯ್ಯೋಳಗ ಬೆಳ್ಳಿ ಬಾರಕೋಲು, ಬಂಗಾರದ ಗುದ್ದಲಿ ಹುಡುಕಾಡಿ ಪಡಕೊತ್ತಿದೆ ಸಿವನೇ.. ಅದರಿಂದ ಯಿದೂ.. ಯಿದರಿಂದ ಅದೂ ಆವೇಸ ಪಡಕೊಳ್ಳಲಕ.. ರವುಸ ಪಡಕೊಳ್ಳಲಕ. ರುಮು ರುಮೂಂತ ರುಮ್ಮಿಗಳು.. ಡೊಳ್ ಡೊಳ್ ಅಂತ ಡೊಳ್ಳುಗಳು... ಜಡ್ಡೆಣಕ್ಕು ಜಡಜಡ್ಡಿ ಣಕ್ಕೂಣಕ್ಕೂ ಅಂತ ತಮ್ಮಟೆಗಳು, ಪೀss ಪೀss ಅಂತ ಸೊನ್ನಾಯಿಗಳೂ.. ಭೂತಬಿಲ್ಲೆಯನ್ನು ಕೆಡವಿ ಸದರಿ ಪಟ್ಟಣದ ಫಸಲನ್ನು ಫಲವತ್ತು ಮಾಡಲಕ ನಾರಾಯಣ ವಕ್ಕಲು ಮಂದಿ ಬಡಿಗೆಗಳನ್ನು ತೆಗೆದುಕೊಂಡರು, ನರಸಿಮ್ಮನ ವಕ್ಕಲು ಮಂದಿ ಭಡ್ಡಿ