ಪುಟ:ಅರಮನೆ.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ದೂರಯಿರಿಸಬೇಕೆಂದು ನಿಧ್ವಯ ತಾಳಿದನು. ಯಿನು ಮುಂದೆ ತಾನು ಮಾಡಲಿರುವುದು ವಂದಾ, ಹೊರಕಡೀಕೆ, ಮಜ್ಜಣಾ, ಆಡಲಿರುವ ಮಾತು, ವುಸುರಾಡುವ ಗಾಳಿ, ನಿಂತಿರುವ ನೆಲ, ಮುಟ್ಟಲಿರುವ ಜಲ, ಮಾಡುವ, ಮಾಡದೇ ಯಿರುವ ಕೆಲಸ ಕಾರೈವುಗಳೆಲ್ಲ ಪಯಿತ್ರಯಂದು ಬಗೆಯ ಬೇಕೆಂದುಕೊಂಡನು. ಅವ್ವ ಮಲಕ್ಕೊಂಡಿರುವ ತನ್ನ ಸರೀರ ಯಂಬುವ ತೊಟ್ಟಿಲನ್ನೇ ವಂದು ಅಗೋಚರ ತೊಟ್ಟಿಲೊಳಗಿಟ್ಟು ತೂಗುತ, ಬಗೆಬಗೆಯ ಲಾಲಿಪಾಡುಗಳಿ೦ದ ಸ೦ತ ಯಿಸಬೇಕೆಂದುಕೊಂಡನು. ಹಿಂಗ ಯೋಚಿಸುತ್ತಿರುವಾಗ್ಗೆ ಆತನ ಸರೀರವು ಕ್ರಮ ಕ್ರಮೇಣ ಯಿಸ್ತಾಮ ಸ್ಥಿತಿಗೆ.... ವಂದು ವಪ್ಪಂದ ಮಾಡಿಕೊಳ್ಳಲಕೆಂದು ಕುಂಪಣಿ ಕಛೇರಿಗೆ ಆಗಮಿಸಿ ತಲೆ ಕೆಳಗು ಮಾಡಿ ಮೀಸೆ ಮ್ಯಾಲಕೆ ಮಾಡಿ ನಿಂತುಕೊಂಡಿದ್ದ ಚಿನ್ನೋಬುಳ ರಡ್ಡಿಯನ್ನೂ ವುಯಾವುಲ ಕೇಸವರೆಡ್ಡಿಯನ್ನೂ ಕುಳ್ಳಿರಿಸಿ ನೀವು ನಿಮ್ಮ ನಿಮ್ಮ ವಳಿತದೊಳಗಿರುವ ದೂರುಗಳಿಗೆ ಯೇನು ಮಾಡೀರಿ? ಯೇನು ಬಿಟ್ಟಿರಿ ಯಂದು ಥಾಮಸು ಮನೋ ಸಾಹೇಬ ಯಿಚಾರಿಸುತ್ತಿರುವಾಗ್ಗೆ. ತಾನು ಬೇಟೆಯಾಡಿದ ಹುಲಿಯ ಕಳೇಬರದ ಮಾಲ ಯಡಗಾಲಿಟ್ಟು ಯಡ್ಡವರು ಮೆರವಣಿಗೆಯನ್ನು ಕೂಡ್ಲಿಗಿಯ ಬೀದಿ ಬೀದಿಗುಂಟ ಮಾಡಿಸಿಕೊಳ್ಳುತ್ತಿರುವಾಗ್ಗೆ. ಕರಿಯೇಮುಲ ದಟ್ಟರಷ್ಟೇವಳಗೆ ಅಹರಿಶಿ ಚರೈಸೀ ಚರೈಸೀ ಗುರುಪ್ಪನಾಯಕನೂ, ಪೆದ ತಿಮ್ಮಾರೆಡ್ಡಿಯೂ, ಹರಿಶ್ಚಂದ್ರರೆಡ್ಡಿಯೂ ಕುಂಪಣಿ ಸರಕಾರಕ್ಕೆ ಸರಣಾಗಿ ಯಿಲಿಯಂಗ ಬದುಕೋದಕ್ಕಿಂತ ಅವರ ವಿರುದ್ದ ಹುಲಿಯಂಗ ಹೋರಾಡಿ ಸಾವುದೇ ಮೇಲೆಂದು ತೀರುಮಾನಿಸಿ ತಮ್ಮ ಮನೆದೇವರಾದ ಕದರಿ ನರಸಿಂಹಸ್ವಾಮಿಯನ್ನು ತಮ್ಮ ತಮ್ಮ ಮನಸೊಳಗೆ ನೆನೆಯುತ್ತಿರುವಾಗ್ಗೆ.. ತಮ್ಮ ತಮ್ಮ ಕಾಲಿನುಂಗುಟಕ್ಕೆ ಕಟ್ಟಿಕೊಂಡಿದ್ದ ಪಾರಿವಾಳಗಳ ಪಯ್ಲಿ ಕೆಲವು ಗಿಡುಗಗಳ ಬೇಟೆಗೋ, ಬೇಟೆಗಾರರ ಬಾಣಗಳಿಗೋ ತುತ್ತಾಗುತ್ತಿರುವಾಗ್ಗೆ.. ಬೊಮ್ಮಕ್ಕನ ರಣಬಯ ಲಿಂದ ಗಾಯಗೊಂಡು ಹೊರಟಿದ್ದ ಕುದುರೆಗಳ ಪಯ್ಲಿ ಕೆಲವು ಗಾದರಿಮಲೆ ಅರಣ್ಯದಲ್ಲಿನ ತೋಳ, ಕಿರುಬ, ಚಿರತೆ, ಹದ್ದು, ರಣಹದ್ದುಗಳಿಗೆ ಬಲಿಯಾಗುತ್ತಿರುವಾಗ್ಗೆ. ಮದ್ದಿಕೇರಿಯಿಂದ ಹೊರಟಿದ್ದ ಸಂತರಸ್ತರನ್ನು ಜೊನ್ನಗಿರಿಯ ಕದಿರೆಪ್ಪನಾಯಕನ ಸಯೀಕರು ನಿಮ್ಮಲ್ಲೇನುಂಟು ಯೇನಿಲ್ಲಯಂದು ಸುಲಿಗೆ ಮಾಡುತ್ತಿರುವಾಗ್ಗೆ.. ಯಿತ್ತ ಕುದುರೆಡವು ಪಟ್ಟಣದಲ್ಲಿ ರಾಜಮಾತೆ ಭಮ್ರಮಾಂಬೆಯು ತನ್ನೊಂದೊಂದು ವುಸುರಿಗೂ ಹಿಂದಕು