ಪುಟ:ಅರಮನೆ.pdf/೪೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೮೯ ಹಿಡಕೊಂಡರು. ಮಂಟಸ್ವಾಮಿ ವಕ್ಕಲು ಮಂದಿ ಚೀಟಿಗಳನ್ನು ತೆಗೆದುಕೊಂಡರು. ಅದನ್ನು ನೋಡುತಲಿದ್ದ ಕೆಚ್ಚುಗಾರ ಮುಂಡೇರು, ನೆಗಾರ ಮುಂಡೇರು “ತಾಯಿss ಸಾಂಬವೀ sss ಭೂತಬಿಲ್ಲೆಯ ಹೆಂಡತಿಯ ಸವುಭಾಗೈವ ಕಾಪಾಡಪ್ಪಾ” ಯಂದು ಕಯ್ಕ ಮುಗುದು ಬೇಡಿಕೊಳ್ಳುತ್ತಿರುವಾಗ್ಗೆ, ಹುಟ್ಟು ಮಾರದೆಸೇಲಿದ್ದ ಭೂತಬಿಲ್ಲೆಯು ವುರಿಭಂಡಾರದೋಪಾದಿಯಲ್ಲಿ ಮೂರ ವಾರೆಗುಂಟ ನಡೆಯುತ್ತಿರುವಾಗ್ಗೆ ಆಕಾಸ ವಾರದಲ್ಲಿ ಚಂದ್ರಾಮನು ಅವಿತಿಟ್ಟುಕೊಳ್ಳಲು ವಂದು ತುಂಡು ಮೋಡಕ್ಕಾಗಿ ಹುಡುಕಾಡುತ್ತಿದ್ದಾನೆ ಸಿವನೇs... ನಿನ್ನ ಮಾಯೆನ ಕಂಡವರಿಲ್ಲ ಸಾಂಬವೀ... ನಿನ್ನ ಕೂಡೆ ಯುದ್ಧ ಮಾಡಿ ಗೆದ್ದೋರಿಲ್ಲ ಸಾಂಬವಿಜ... ನೀನು ಬೂದಿ ಮುಚ್ಚಿದ ಕೆಂಡ ತಾಯಿSS ಭೂಲೋಕಕುದ್ದಂಡೆ ತಾಯಿSSS. ಸರುವರ ನಾಲಗೆ ವಳಗ ತುಳುಕಾಡುತ ನೀನು ಯಲ್ಲಲ್ಲಿದೀ ಅಂದರೆ ತೆರ ಬಾಯಿ ಆರಬಾರದು.. ನಡೆವ ಅಂಗಾಲಲ್ಲಿ ಅಪ್ಪುಳಿ, ಬೊಬ್ಬುಳಿ ಮೇಳಬಾರದುss... ಬೀಸುಡೋಳು ಬಡವಾಗಬಾರದು.. ಬಾಯೊಳಗಿನ ತೊಂಬಲ ಕರಗಬಾರದು.. ಭಕುತಾದಿ ಮಂದಿಯನ್ನು ಹಂಗ ಸಲುವೇ ಮಂಗಳವಾರದ ಮಾಯಕಾರೇ.. ಬುಧವಾರದ ಬುದ್ದಿವಂತೇ.. ಗುರುವಾರದ ಗುರುತ್ನವಂತೆ.. ಸುಕ್ಕುರುವಾರದ ಸೂಸ್ತರ ರಮಣಿಯೇ.. ಸಣಿವಾರದ ಸನ್ನಡತೆಯೇ.. ಆವಾರದ ಆದಿಲಚುಮಿಯೇ.. ಹಿಂಗss ಮುಂತಾಗಿ ಮಿತ್ರರು ಹಾಡುತಲಿದ್ದ ಗುಣಗಾನವನ್ನು ಕೇಳಿಸಿಕೊಂಡ ಸರುವ ಮುನ್ನೂರು ಕೋಟಿ ದೇವಾನುದೇವತೆಗಳು ಅಗೋಚರ ಸ್ಥಿತಿಯಲ್ಲಿ ಸದರಿ ಪಟ್ಟಣದ ಕಡೇಕ ದಯಮಾಡಿಸುತಿರುವಾಗ್ಗೆ ವಂದೊಂದು ಜೀವವು ತಣ್ಣಗಾಗಯ್ತಿ.. ಅನ್ನದ ಮದ ಅಳೀತಯ್ಕೆ.. ತನುವಿನ ಮದ ತಣ್ಣಗಾಗತಯ್ಕೆ.. ತಣ್ಣಗಾಗುತಲಿದ್ದಂಥ ಪ್ರತಿಯೊಂದು ಜೀವಿಯು ಭೂತಬಿಲ್ಲೆ ಅತ್ತ ಮರೆಯಾಗುತ್ತಲೇ ಅಮ್ಮವಾರಿ ನಿಧಿಸ್ಥಳಕ್ಕೆ ಹೋಗಿ ಜಗಾನುಜ್ಯೋತಿ ಯಂಬಂತೆ ನೋಡುತಲಿದ್ದ ಚಂಡಮಾಶಯನ ದರಸನ ಪಡಕಂತು. ತರುವಾಯ ಪರಾನು ಜ್ಯೋತಿ ಹೆಂಗಾಳ? ಜಗಾನು ಜ್ಯೋತಿ ಹೆಂಗಾಳ? ಯಂದು ಕನವರಿಕೆ ಮಾಡುತ ಬಂದು ನೋಡುತದ....