ಪುಟ:ಅರಮನೆ.pdf/೪೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ರ್೩ರಿ ಅರಮನೆ ಮೋಬಯ್ಯನೆಂಬುವ ವಸ್ತಿಯು ಬಂಗಾರದ ತಗಡಿನಂಥ ಜಗೇದ ಮಾಲ ಯಿರಾಜಮಾನಗೊಂಡಯ್ಕೆ ಸಿವನೇ.. ಹಂಪಜ್ಜನ ನಾಲಿಗೆ ಪಾತ್ರಧಾರಿಯಾದ ಗಂಟಲಯ್ಯ 'ಕೇಳಿರಯ್ಯಾ.. ಕೇಳಿರಿ.. ಬೇಯಿನ ರುಕ್ಷದಲ್ಲಿ ಹುಟ್ಟಿ ಹೊನ್ನರಳಿ ಮರದಲ್ಲಿ ಬೆಳೆದಂಥವಳಾದ ತಾಯ ಯದುರುಗಡೆ ಯಿರೋದು ಮಣ್ಣಿನ ಕುಡಿಕೆ ಅಲ್ಲರಯ್ಯಾ.. ಅದಕ ಕೇಲು ಅಂಬುತಾರೆ.. ಆ ಕೇಲೇ ಸಾಂಬವಿ, ಸಾಂಬವಿಯೇ ಕೇಲು.. ಅದರೊಳಗೆ ಯಿರುವುದು ಸಾಮಾನ್ಯ ವುದಕವಲ್ಲ.. ಸಾವುರ ಸಿಡುಲು, ವಂದು ಲಕ್ಷ ಗುಡುಗುಗಳ ಜಲರೂಪವದು.. ಕಾನನ ಕಾಡು ಸಮಂದರ ನದಿಸ್ಥಿರ ಗುಡ್ಡ ಗವಿಗವ್ವರರಾರಣ್ಯ ಹಿಮಾಲಯ, ಭೂಲೋಕ ನರಸುರರ ಲೋಕ ಕಯ್ಯಾಸ ವಯಿಕುಂಠ ಯಿವೆಲ್ಲವೂದ್ರಾವಕ ರೂಪಧರಿಸಿ ಅಡಕವಾಗಯ್ತಿ ಅದರೊಳಗ” ಯಂದು ಹೇಳು ಹೇಳುತಲೇ ಭಕುತಾದಿ ಮಂದಿಯನ್ನು ಮಂತ್ರಮುಗ್ಧರನ್ನಾಗಿ ಮಾಡುತವನೆ ಸಿವನೇss.. ಅವನ ಬಲಗಯ್ಯ ಬಂಟನಾದ ಕಹಳಯ್ಯನು “ಯಿದು ಸುಳ್ಳುಯೆಂದು ವಾದಿಸುವ ನಾಸ್ತಿಕರಾದವರಿಗೆ ಯದೇಲಿ ಘಾಸಿ ಆಗತಯ್ಕೆ, ನಾಲಿಗೇಲಿ ನೆತ್ತರುಣ್ಣು ಅಡರುತಯ್ಕೆ.. ಮೂಗಿಗೆ ಪಿನಾಸಿ ಆಗುತಯ್ಕೆ.. ಕಿವೀಲಿ ಕದ್ಧ ಕುಂಡಲಿ ಯೇಳುತಯ್ಕೆ.. ಗಂಟಲಿಗೆ ಗಂಡಾ ಮಾಲೆ, ಜಂತಕ್ಕೆ ಜಂತಾ ಬಾವು, ತಲೇಲಿ ತಲೆಕೋವಿ, ಬೆನ್ನಿಗೆ ಬೆನ್ನಫಣಿ, ದೊಗೆ ದೊಕ್ಕೆ ಹಣ್ಣು, ಪಚ್ಚೆ ಮ್ಯಾಲ ಪರಮೇಸೂರನ ಹುಣ್ಣು...” ಯಂದು ಮುಂತಾಗಿ ವಂದೇ ಸಮಕ ಹೇಳುತ್ತ ಭಕುತಾದಿ ಮಂದಿಯ ಬಾಯಿಗಳನ ವಣಗಿಸುತವನೆ ಸಿವನೇ......... ..ಹೇ ಹಂಗಾಗತಯ್ತಾ! ಪ್ಲಾ....ಜ್ಞಾ... ಹಿಂಗಾಗತಯ್ಯಾ.. ಯಂದು ಮಂದಿ ತಮ್ಮ ತಮ್ಮ ಬಿಟುಗೊಂಡ ಕಣ್ಣುಗಳೊಳಗ ತರಾವರಿ ಬ್ಯಾನೆ ಬ್ಯಾಸರಿಕೆ, ರೋಗ ರುಜಿಣಗಳ ಕಣಸು ಕಾಂಬುತ ಬೆಚು ಬೆಚ್ಚಿ ಬೀಳುತವರೇ ಸಿವನೇsss.. ಅತ್ತ ಸೂರೆ ಪರಮಾತುಮನ ಮುಳುಗುವಿಕೆಯಿಂದಾಗಿ ಪಡುವಣ ಗೆಡೇಲಿ ಅರಾಜಕತೆ ಕಾಣಿಸಿಕೊಂಡಿತ್ತು. ಕತ್ತಲೆಯು ರಾಯಭಾರಿಕೆ ವಹಿಸಿಕೊಂಡಿತ್ತು. ಯಿತ್ತ ಚಂದ್ರಾಮ ವುರಿಸುತ್ತಲೇ ಮೋಬಯ್ಯ ಹೇಗಿದ್ದು ಆ ಗಲಾಟೆಯೊಳಗೆ ಯಾರಿಗೂ ಕೇಳಿಸಲಿಲ್ಲ.... ಕೊಪ್ಪರಿಗೆ ಚಿನ್ನ ಬೇಡುವಾಕಿಯಲ್ಲ ಮೇಲುಸ್ತರಿಗೆ ಮನೆ ಬೇಡುವಾಕಿಯಲ್ಲಿ