ಪುಟ:ಅರಮನೆ.pdf/೪೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯೧ ವಂದು ಹಿಡಿ ಭಕುತಿ ಕೊಟ್ಟವರೆದೆಯೊಳಗೆ ತಾಯ್ತನವ ಬಿತ್ತಿ ಬೆಳೆವಾಕಿ ಸಾವುರ ಸಂತಾನವ ಕರುಣಿಸುವಾಕಿ ಯಂದು ಮುಂತಾಗಿ ಹಾಡು ಹಾಡುತಲಿದ್ದ, ಹಾಡಿನ ಮೂಲಕ ಕೊಂಡಾಡುತಲಿದ್ದ ಗೊಗ್ಗಯ್ಯನ ಕಡೆ ನೋಡು ನೋಡುತ್ತ ವಸ್ತಿ ಪ್ಲಾ... ಯಂದು ಆಕಳಿಸಿದೊಡನೆ ಸಿವನಾಮ ಪಾರೋತಿ ಪತಿ ಹರಹರ ಮಾದೇವss... ನೂರೊಂದನೆ ಸಲಕ್ಕ ಟಗರೊಂದು ಬಲಿಗೊಂಡು ಸಿವನೇs... ಬಲಗಾಲು ಕೊಯ್ದು ಬಾಯಿಗೆ ಕೊಟ್ಟೆವು ಹೊಟ್ಟೆ ಕರುಳ ಕಿತ್ತು ತಿನ ಮುಂದ ಹರಡೇವು ತಾಯೇ ದಯಮಾಡು... ಯಂದು ಹಾಡುತಲಿದ್ದ ಚರಕಲಯ್ಯನ ಕಡೇಕ ನೋಡೂತ ವಸ್ತಿಮೋಬಯ್ಯ ಲಟ ಲಟಾಂತ ಮಯ್ಯ ಮುರಿದೊಡನೆ ನೂರೆರಡನೇ ಸಲಕ ಬಲಿಗೊಂಡ ಟಗರಿನ ರುಂಡವು ಮೆಹೆಹೆಹ್ ಅಂತ ನಿಶ್ಚಲಗೊಂಡಿತು ಸಿವನೇ... ಪ್ಲಾ...ಹ್ಲಾ.. ವಸ್ತ್ರೀಯ ಸರೀರದೊಳಗ ಯಚ್ಚರಾಗ್ಯಾಳ ತಾಯಿ.. ಹಾ... ಹಾ... ಪಟ್ಟೆ ಪೀತಾಂಬುರವ ವುಟ್ಟವಳೆ ರವುಕೆ ತೊಟ್ಟವಳೆ ಹ್ವಾ... ಪ್ಲಾ. ತುರುಬು ಬಿಗಿದವಳ ಮಣಮಣ ಹುವ್ವ ಮುಡುದವಳೆ ಪ್ಲಾ.. ಜ್ಞಾ.. ಹಣೆ ಮ್ಯಾಲ ತಿಲಕ ಬೊಟ್ಟನಯಿಟ್ಟವಳೆ ತೊಂಬಲ ನಮಲುತವಳೆ. ಹಾ... ಹಾ... ಮಲ್ಲಿಗೆ ಮಹಾಕಾಂತೆ ಆನಂದ ಹೊಂದಿ ಮಂಡೀಗೆ ಕಯ್ಯ ಹಚ್ಚಿ ಮ್ಯಾಲ ಕೇಳುತಲವಳೆ ಪ್ಲಾ.. ಜ್ಞಾ.. ಹೋ ಹೋ.... ರುಮುರುಮು ರುಮ್ಮಿಗಳದು ಯೇನು ಹೇಳಲಿ ಸಿವನೇ... ಡೊಳ್ ಡೊಳ್ ಡೊಳ್ಳುಗಳದು ಯೇನು ಹೇಳಲಿ ಸಿವನೇ... ಮೆಹೆಹೇ ಯಂದು ಆನಂದೋದ್ದಾರ ಹೊಂಡಿಸುತಲಿದ್ದ ಸಾವುರಾರು ಟಗರು ಮ್ಯಾಕೆಗಳ ಸಂಭರವ ಯೇನು ಹೇಳಲಿ ಸಿವನೇ.... ಸಿವನ್ನಾಮ ಪಾರೋತೀ ಪತಿ ಹರಹ ಮಾದೇವಾss... ಪಲ್ಲಾಕಿ ಬಂತು.. ಅದು ಸೊರಗುದ ತುಂಡಿನಂಗಿತ್ತು. ಸಿವನ್ನಾಮವೇ... ಸಾಂಬವಿಂರ ಆತುವು ಸೋರೂಪಿಯಾದ ಕೇಲನ್ನೆತ್ತಿ ಹುದ್ವಿನ ಮಂಟಪದೊಳಗಿಡಲಕೆಂದು ಮಡಿವುಡಿಯಿಂದ ಬಂದೋರು