ಪುಟ:ಅರಮನೆ.pdf/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೪ ಅರಮನೆ ಅವರು ಅಲ್ಲಿ ಬರುತ್ತಿರುವರೆ೦ದರೆ ಯವರು ಉಲ್ಲೇ ಮರೆಯಾಗಲಾರಂಭಿಸಿದರು, ಅನಿವಾದ್ಯವಾಗಿ ಅವರ ನೆರಳು ತಮ್ಮ ದೇಹದ ಮ್ಯಾಲ ಬಿತ್ತೆಂದರೆ ಮರುಕ್ಷಣ ಸ್ನಾನ ಸಂಧ್ಯಾವಂದನೆ ಮಾಡಿ ಪಾಶ್ಚಾತ್ಯಾಪೀ ಮಂತ್ರಪಠಣ ಮಾಡತೊಡಗಿದರು.. ಅನಿವಾದ್ಯವಾಗಿ ಅವರೊಂದಿಗೆ ಸಂಭಾಷಿಸಲೇ ಬೇಕಾದಾಗ ಮರುಕ್ಷಣ ತಮ್ಮ ತಮ್ಮ ಗುಹಗಳನ್ನು ಪ್ರವೇಶಿಸಿ ತಮ್ಮ ತಮ್ಮ ಜಿಹೈಗಳನು ಜಗ್ಗಾಡಿಯೋ, ಮೊದಿನಕಡ್ಡಿಯ ತುದಿಯಿಂದ ಚುರುಕು ಮುಟ್ಟಿಸಿಯೋ ಪ್ರಾಯಶ್ಚಿತ್ತ ಶಿಕ್ಷೆ ನೀಡಿಕೊಳ್ಳತೊಡಗಿದರು. ಅನಿವಾರವಾಗಿ ಅವರ ಮೇಚ್ಛ ಭಾಷೆ ಯಿನ್ನೇನು ಬೀಳಲಿದೆಯನ್ನುವಷ್ಟರಲ್ಲಿ ತಮ್ಮ ತಮ್ಮ ಹಸ್ತಾಂಬುಜಗಳಿಂದ ತಮ್ಮ ತಮ್ಮ ಕಲ್ಲಂಗಳನ್ನು ಮುಚ್ಚಿಕೊಳ್ಳಲಾರಂಭಿಸಿದರು.. ವಂದೊಂದು ಅಗ್ರಹಾರದ, ವಂದೊಂದು ಗೋಡೆಯ ಮ್ಯಾಲ ಯಷ್ಟು ಸಾಧ್ಯವೋ ಅಷ್ಟು ಸುಂದರವಾಗಿ ಮಾದಾ ಪುರುಷೋತ್ತಮನ ಯಿಯಿಧ ಭಂಗಿಗಳ ಬಹುವಗ್ನ ಚಿತ್ರಗಳನ್ನು ಬರೆಯಿಸಲಾರಂಭಿಸಿದರು.. ಮನುಸೃತಿ, ಭಗವದ್ಗೀತೆಯ ಪ್ರಮುಖ ಸ್ಟೋಕಗಳನ್ನು ಬರೆಯಿಸಲಾರಂಭಿಸಿದರು. ಯಷ್ಟು ಸಾಧ್ಯವೋ ಅಷ್ಟು ಕರಠತೆಯಿಂದ ರಾರಾಜಿಸ ಲಾರಂಭಿಸಿದರು. ಪಯಿತ್ರತುಳಸಿ ಸಸಿಗಳನ್ನು, ದಡ್ಡೆಗಳನ್ನು ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ಸಂತರಸ್ತರಿಗೆ ಯಿತರಣೆ ಮಾಡುತ್ತ ಮಾಡಿಸಲಾರಂಭಿಸಿದರು.. ಆಚಾರರು ಪಂಚ ಅಗ್ರಹಾರಗಳ ವಕ್ಕೂಟವನ್ನುದ್ದೇಶಿಸಿ, ಅಗ್ರಹಾರ ಅಗ್ರಹಾರದ ನಡುವೆ ಸಮನ್ವಯ ಯಿರಬೇಕಂದೂ, ಸೊಯಂ ಸೇವಕರು ಅಕ್ಕಪಕ್ಕದ ಅಗ್ರಹಾರಗಳೊಂದಿಗೆ ನಿಕಟ ಸಂಪಕ್ಕ ಯಿಟ್ಟುಕೊಳ್ಳಬೇಕೆಂದೂ ಹೇಳಿದ ಪರಿಣಾಮವಾಗಿ... ಯೀ ಅಗ್ರಹಾರದವರು ಆ ಅಗ್ರಹಾರದ ಕಡೆಗೂ, ಆ ಅಗ್ರಹಾರದವರು ಯೀ ಅಗ್ರಹಾರದ ಕಡೆಗೂ ಹೋಗಿ ಬರಲಾರಂಭಿಸಿದರು, ಪುರುಷೋತ್ತಮನಿಗೇ 'ಮಾದಾ' ಯಂಬ ಬಿರುದನ್ನು ಮುಡಿಸಿದ ಆಂಜನೇಯ ಸ್ವಾಮಿಯನ್ನು ಆದರವಾಗಿಟ್ಟುಕೊಂಡರು.. ಮಣಿಕಂಠಾಪುರ ಅಗ್ರಹಾರದ ಕಲಾಯಿದ ರಜತಾಚಾರನು ಆಂಜನೇಯ ಸ್ವಾಮಿವುಳ್ಳ ಬಾವುಟವನ್ನು ರಚನೆ ಮಾಡಿಕೊಡುವ ಗುರುತರ ಕಾರವನ್ನು ವಹಿಸಿಕೊಂಡ. ಅದಕ್ಕೆಂದೇ ಚಂದನಾಪುರಕ್ಕೆ ಹೋಗಿ ಆಂಜನೇಯಸ್ವಾಮಿ ಯಿಷಯದಲ್ಲಿ ಅನೇಕ ಸಮುಶೋಧನೆಗಳನ್ನು ಮಾಡಿ ರುದ್ಧಶಯ್ಕೆಯಲ್ಲಿದ್ದ ಹಯಗ್ರೀವಾಚಾರರನ್ನು ಕಂಡು ಚಿಂತನ ಮಂಥನ ನಡೆಸಿದ.