ಪುಟ:ಅರಮನೆ.pdf/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯೫ ವಾಯುಪುತ್ರನ ಯಿಯಿಧ ಭಂಗಿಗಳನ್ನು ಅಭ್ಯಾಸ ಮಾಡಿದ.. ಅಂತಿಮವಾಗಿ ಮಾರುತಿಯ ಸಾಕ್ಷಾತ್ಕಾರ ಪಡಕೊಳ್ಳುವಲ್ಲಿ ಯಶಸ್ವಿಯಾದ.. ಯಡಗಯ್ಲಿ ಗದೆಯನ್ನೂ, ಬಲಗಯ್ತಿ ಸಂಜೀವಿನಿ ಪರುವುತವನ್ನೂ, ಹಿಡಕೊಂಡಿರುವ ಆಂಜನೇಯಯ ಸ್ವಾಮಿ ಆಕಾಶಮಾರವಾಗಿ ವಂದೆರಡು ಮೋಡಗಳ ನಡುವೆ ಹಾರುತ್ತ ಸಾಗಿರುವನು. ತಪ್ಪಿಗೆ ಪಡೆಯುವ ನಿಮಿತ್ತ ಸೊಯಂ ಸೇವಕರೊಡನೆ ರಜತಾಚಾರನು ಮೋಕ್ಷ ಅಗ್ರಹಾರಕ್ಕೆ ಹೋಗಿ ಅಣಿಮಾಂಡವ್ಯವಾಚಾದ್ಯರಿಗೆ ತೋರಿಸಿದನು. ಅವರು ಅದನ್ನು ಪರಾಮರಿಸಿದರು. ಮೆಚ್ಚಿದರು, 'ದೀರಾಯುಷ್ಮಾನ್ ಭವ' ಯಂದು ಹರಿಸಿದರು, ಅದಕ್ಕೆ 'ಜಯ್ ಭಜರಂಗಬಲಿ'ಯಂದು ನಾಮಕರಣ ಮಾಡಿದರು.. ಹೇಳುವುದ ಹೇಳಲಕ, ಕೇಳುವುದ ಕೇಳಲಕ ಸಮುಸ್ಕೃತ ಭಾಷೆಯನ್ನು ಬಳಕೆ ಮಾಡುವುದನ್ನು ಅಪ್ಪಿ ತಪ್ಪಿ ಮರೆಯಲಿಲ್ಲ... 'ಜಮ್ ಭಜರಂಗಬಲಿ'ಯಂದು ನಿನಾದಗಯ್ಡು ಅವರು ತಮ್ಮ ತಮ್ಮ ಅಗ್ರಹಾರಗಳನ್ನು ಸೇರಿಕೊಂಡರೋ ಸೇರಿಕೊಂಡರು. ತಮ್ಮ ತಮ್ಮ ಅಗ್ರಹಾರದ ಬಾಲಕ, ಬಾಲಕಿಯರು ಹೆಂಗಿರಬೇಕು? ಹೆಂಗಿರಕೂಡದು? ಮುದುಕ ಮುದುಕಿಯರು ಹೆಂಗಿರಬೇಕು? ಹೆಂಗಿರಕೂಡದು? ಯಿವಾಹಿತರು ಹೆಂಗಿರಬೇಕು? ಹೆಂಗಿಕೂಡದು? ಗುಹಸ್ಥಾಶ್ರಮಧರ: ವಾನಪ್ರಸ್ಥಾಶ್ರಮಧರ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು ಎಂದು ಮುಂತಾಗಿ ನಿರೇಸನ ಮಾಡಲಾರಂಭಿಸಿದರು. ಪ್ರತಿಯೊಬ್ಬರೂ ಯಂತಿಷ್ಟೇ ಸಂಖ್ಯೆಯಲ್ಲಿ ರಾಮನಾಮ ಜಪಿಸಬೇಕೆಂದು ಆಗ್ನ ಮಾಡಲಾರಂಭಿಸಿದರು. ಜೊತೆಗೆ ತಮ್ಮ ಅಗ್ರಹಾರದ ಸಮವಸ್ತ್ರವ ಕೇಸರಿಮಯ ವಾಗಿರಬೇಕೆಂದು ಕೂಡ ತಮ್ಮ ನೇತಾಜಿ ಅಣಿಮಾಂಡವ್ಯವಾಚಾರ್ರವರ ನಿಕ್ಷೇಸನದ ಪ್ರಕಾರ ತಮ್ಮ ತಮ್ಮ ಅಗ್ರಹಾರಗಳದ್ದೇ ಆದ ಸಂಯಿಧಾನ, ನೀತಿಸಂಹಿತೆ, ದಂಡಸಂಹಿತೆ ರಚನೆ ಮಾಡಿಕೊಳ್ಳದೆಯಿರಲಿಲ್ಲ ಆ ಹಿಂದೂ ರಕ್ಷಕ ಭಟರು. ಯಾರು ಸಂಯಿಧಾನ ಯಿಧಿಯಿಧಾನಗಳನ್ನು ಚಾಚೂ ತಪ್ಪದೇ ಪಾಲಿಸುವುದಿಲ್ಲವೋ, ಯಾರು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಅಂಗ್ರೇಜಿಯ ಕಡೇಕ ವಲಿದು ಸಹಕರಿಸುವರೋ, ಅಂಥವರನ್ನು ತಮ್ಮ ಗೂಢಚಾರರಿಂದ ಪತ್ತೆಹಚ್ಚಿ ದಂಡ, ಶಿಕ್ಷೆ ಯಿಧಿಸಲಾರಂಭಿಸಿದರು. ಮೊದಲ ಮೊದಲು ತರೆಮರೆಯಲ್ಲಿ ಗುಟ್ಟಾಗಿ ನಡೆಯುತಲಿದ್ದ ಯೋ ಸಂರಕ್ಷಣಾ ಕಾರಸೂಚಿಯು ಬರುಬರುತ್ತ