ಪುಟ:ಅರಮನೆ.pdf/೪೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೩೯೭ ಸಾದ್ರಿಯು ಪತಿಯ ಜೀವ ಸಂರಕ್ಷಣೆ ಮಾಡುವುದು ಸತಿಧರಯಂದು ಭಾವಿಸಿದಳು.. ನೂರಾರು ದೇವರು ದಿಂಡಿರುಗಳ ಮೊರೆ ಹೋದಳು. ದುರಕ್ಕೆ ಹೋಗಿ ವುಜ್ಜೆಗೆವ್ವನ ಗುಡೀಲೊಂದು ಅರಮಣ ತೂಕದ ಗಂಟೆ ತೂಗುಬಿಟ್ಟಳು, ಹಂಪೆಯ ಭುವನೇಶ್ವರಿ ದೇವಿಗೆ ವಂದು ವಕ್ಕಳದ ಗದ್ದೆಯನ್ನು ಧಾರಾಪೂರೈಕವಾಗಿ ಕೊಟ್ಟಳು, ಪ್ರಾಪ್ತ ಷಡ್ಡಕ್ಸನಾಚಾರ ವ್ಯಾಖ್ಯಾನ ಸಿಂಹಾಸನಾಧೀಶ್ವರ ಶ್ರುಂಗೇರಿ ಶ್ರೀ ನರಸಿಂಹ ಭಾರತೀ ಸ್ವಾಮಿಗಳ ಸನ್ನಿಧಿಗೆ ಬೆಳ್ಳಿಯ ಪೂಜಾ ಸಾಮಾನುಗಳನ್ನು ಭಕುತಿಪೂರಕವಾಗಿ ಕಳುವಿಕೊಟ್ಟಳು, ಯದುರು ಮುಖಾಂಜನೇಯ ಸ್ವಾಮಿಗಂತೂ ಸರೇ ಸರೆ... ತನ್ನ ಧರಪತ್ನಿ ಭುವನೇಶ್ವರಿಯ ಅಲವುಕಿಕ ವತ್ರನೆಗೆ ರೋಸಿ ಆರಿಕ ದಿಗ್ಧಂಧನ ಯಿಧಿಸಿದ ಹಂಪರಸಪ್ಪಯ್ಯನವರು ಬಾಗುಳಿಗೆ ಕಾರನಿಮಿತ್ತ ಹೋಗಿ ದೇಮೋತ್ತಮ ಭಟ್ಟ ಹನುಮಂತ ಭಟ್ಟ ನುಸಿಂಹಭಟ್ಟರನ್ನು ಬೆಳಗಿನ ಮೂರನೇ ಜಾವದಲ್ಲಿ ಕಂಡು ಶತ್ರುನಾಶಕ್ಕೆಂದೇ ಯಿಶೇಷ ಜಪತಪ ಮಾಡಬೇಕೆಂದು ಯಿನಂತಿ ಮಾಡಿಕೊಳ್ಳದೆಯಿರಲಿಲ್ಲ. ನಿಧಿ, ನಿಕ್ಷೇಪ, ಜಲತರು, ಪಾಷಾಣ, ಅಕ್ಷಿಣಿ, ಆಗಮಿಸಿದ್ದ ಸಾಧ್ಯಗಳೆಂಬ ಅಷ್ಟಭೋಗ ಯಿದ್ಯೆಗಳನ್ನು ಕರಾತಲಮಲಕ ಮಾಡಿಕೊಂಡಿದ್ದ ಮತ್ತು ಪುತ್ರಪವುತ್ರಪಾರಂಪಠ್ಯದಲ್ಲಿ ಸ್ವಾಸ್ಥಿಯನ್ನು ಅನುಭವಿಸುತಲಿದ್ದ ಅವರು ತಮ್ಮ ಆ ಹತ್ತಿರದ ಬಂಧುವಿನ ಪ್ರಾಣ ಭಯವನ್ನು ಅರಮಾಡಿಕೊಂಡು ವಡನೆ ಮನವಿಯನ್ನು ಪುರಸ್ಕರಿಸಿದರು. ಸದ್ಯಕ್ಕೆ ವಂದು ತಾಯತವನ್ನು ಮಂತ್ರಿಸಿ ಬಲದೋಳಿಗೆ ಕಟ್ಟಿ ಯನ್ನು ನಿಶ್ಚಿಂತರಾಗಿರಿ ಯಂದು ಧರ ತುಂಬಿ ಕಳುವಿಕೊಟ್ಟರು. ಮಾರು ಯೇಷದಲ್ಲಿ ಹಂಪರಸಪ್ಪಯ್ಯನು ಅಂಗರಕ್ಷಕರೊಂದಿಗೆ ಹರಪನಹಳ್ಳಿ ಕಡೇಕ ಹೊಳ್ಳಿದರು. ಆ ತನ್ನ ಅಂಗರಕ್ಷಕರ ಪಯ್ಕೆ ಯಾವ ಬ್ರಹ್ಮಹತ್ಯಾದೋಷಕ್ಕೆ ಸೋಪು ಹಾಕದವನೂ, ಭರಮನಗವುಡನ ಕಟ್ಟಾಭಿಮಾನಿಯೂ ಮತ್ತು ಹರಿಯಮ್ಮಾಜಿಯ ನುಡಿಸೇವಕನೂ ಆಗಿದ್ದಂಥ ಬಲವಂತನೆಂಬ ರ ಸಿಪಾಯಿಯು ಯಿದ್ದನು. ಅವನು ನಯವಂಚಕ ಹಂಪರಸಪ್ಪಯ್ಯನವರನ್ನು ಯೀಗ ಕೊಲ್ಲಬೇಕು.. ಆಗ ಕೊಲ್ಲಬೇಕು ಯಂದು ದಾರಿವುದ್ದಕ್ಕೂ ಪ್ರಯತ್ನಪಡದೆ ಯಿರಲಿಲ್ಲ.. ಆದರ ಪ್ರಧಾನ ಕಾರಖನನ ನಸೀಬು ಹರಪನಹಳ್ಳಿ ತಲುಪುವವರೆಗೆ ನೆಟ್ಟಗಿತ್ತು. ತಲುಪಿದ ಯರಡೇ ದಿವಸ ಬ್ರಾಹ್ಮ ಮುಹೂರದಲ್ಲಿ ಯಂದಿನಂತೆ ಪತಿ ದಯವದ ಪಾದಕ್ಕೆ ಹಣೆ ಮುಟ್ಟಿಸಲಕೆಂದು ಭುವನೇಶ್ವರಿ ಹಲವು ವರುಷಂಗಳಿಂದ