ಪುಟ:ಅರಮನೆ.pdf/೪೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೩೯೮ ಅರಮನೆ ವಾನಪ್ರಸ್ತ ಧರುಮವನ್ನೂ, ಬ್ರಹ್ಮಚದ್ಯೆಯನ್ನೂ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರುತಲಿದ್ದ, ಮತ್ತು ಆ ಕಾರಣದಿಂದ ತಾನು ಪ್ರತ್ಯೇಕ ಕೋಣೆಯಲ್ಲಿ ಮಲಗುತಲಿದ್ದ ಗಂಡನಲ್ಲಿಗೆ ಹೋದಳು.. ಹರಳೆಣ್ಣೆದೀಪದ ಬೆಳಕಲ್ಲಿ ಬಿಳುಚಿಕೊಂಡಿದ್ದ ಗಂಡನ ಪಾದಗಳನ್ನು ಹಾಸಿಗೆಯೊಳಗೆ ಹುಡುಕಿ ಅನಾವರಣಗೊಳಿಸಿದಳು, ಕಯ್ಯಗಳಿಂದ ಮುಟ್ಟಿದಳು, ಹಣೆಯನ್ನು ತಾಕಿಸಿದಳು.. ತಣ್ಣಗೆ ಕೊರೆದಂತೆ ಭಾಸವಾಯಿತು, ಯೇನೀ ಅಂದಳು, ಮಾರುತ್ತರ ಲಭ್ಯವಾಗಲಿಲ್ಲ.. ಹಿಡಿದು ಅಲುಗಾಡಿಸಿದಳು.. ಪ್ರತಿಕ್ರಿಯೆ ಲಭ್ಯವಾಗಲಿಲ್ಲ.. ಗಾಬರಿಗೊಂಡು ಹರಳೆಣ್ಣೆ ದೀಪ ಹಿಡಿದು ನೋಡುತ್ತಾಳೆ.. ಬೆಳ್ಳನೆಯ ಬುರುಬುರುನೆ ನೊರೆಯೊಳಗೆ.. ಅಯ್ಯೋ ಯಂದು ಚೀರಿದಳು.. ಹಂಪರಸಪ್ಪಯ್ಯ ಯಿಹಲೋಕ ತ್ಯಜಿಸಿದರೆಂಬ ಸುದ್ದಿ ಪಟ್ಟಣದಾದ್ಯಂತ ಹಬ್ಬಿದ್ದಾಗಲೀ, ಜನ ತಂಡೋಪತಂಡವಾಗಿ ಬಂದು ನೋಡಿದ್ದಾಗಲೇ ತಡ ಆಗಲಿಲ್ಲ, ಸರಕಾರೀ ಧನ್ವಂತರಿಗಳಾದ ಹಿರೇ ಚಂದ್ರಭಟ್ಟರು, ಚಿಕ್ಕ ಚಂದ್ರಭಟ್ಟರು ಬಂದು ನಾಡಿ ಪರೀಕ್ಷಿಸಿ ಪ್ರಾಣಪಕ್ಷಿ ರಾವಂದನೇ ಜಾವದ ಸುಮಾರಿನಲ್ಲಿ ಹಾರಿಹೋಗಿರುವುದೆಂದು ಸಾವನ್ನು ಖಾತರಿ ಮಾಡಿದರು. ಅದು ಆತುಮಹತ್ಯೆಯೋ, ಕೊಲೆಯೋ ಯಂಬ ಯಿಷಯದಲ್ಲಿ ಅವರಲ್ಲೇ ಜಿಗ್ನಾಸೆ ಹುಟ್ಟಿತು, ಯಿಂಥದ್ದೊಂದು ಯಚ್ಚರಿಕೆ ಪತ್ರಬಂದಿತ್ತು ಯಂದು ಬಾಯಿ ಬಿಚ್ಚುವ ಧಯರ ವಯ್ಡವ್ಯದ ಪಟ್ಟಯೇರುತಲಿದ್ದ ಭುವನೇಶ್ವರಮ್ಮಗೂ ಬರಲಿಲ್ಲ. ಕಳೇಬರ ತನ್ನ ಅಂತಿಮ ದರುಸನವನ್ನು ಯಾರಾದರೂ ಪಡಕೊಳ್ಳಲಿ ಅಂತ ಮದ್ಯಾಹ್ನದ ಮಟ ಅಂಗಳದಲ್ಲಿತ್ತು. ನಿರೀಕ್ಷಿತ ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿಲ್ಲ, ದರುಶನ ಪಡಕೊಳ್ಳಲಿಲ್ಲ. ಜುಲುಮಿಗೆ ಬಂದವರು ತಮ ತಮ್ಮ ಯೋಗ್ಯಾನುಸಾರವಾಗಿ ಹಿಡಿ ಹಿಡಿ ಶಾಪ ಹಾಕದೆಯಿರಲಿಲ್ಲ.. ಮೊದಲೇ ಯಿಷ ಪ್ರಾಶನದಿಂದ ಸತ್ತಿರುವಂಥಾದ್ದು., ಮದ್ಯಾಣಕ್ಕೆಲ್ಲ ದುರಾತ ಬೀರಲಾರಂಭಿಸಿತು. ಸ್ಕೂವರನ ಆಪ್ತಕಾರದರಿಯು ಪರಿಸರ ನೈರಲ್ಯ ಕಾಪಾಡುವ ನಿಮಿತ್ತ ಸದರಿ ಕಳೇಬರವು ಮತ್ತೊಂದು ಹತ್ಯೆಗೋ, ಆತುಮಹತ್ಯೆಗೋ ಸೂಕ್ತಿದಾಯಕ ವಾಗಬಹುದೆಂದು ಮೊಹಿಸಿ ಯಷ್ಟು ಸಾಧ್ಯವೋ ಅಷ್ಟು ತ್ವರಿತವಾಗಿ ಸಂಸ್ಕಾರಮಾಡಿ ಮುಗಿಸುವಂತೆ.. ಗತಿಸಿದ ಪ್ರಧಾನ ಕಾರಖನನ ಬಗ್ಗೆ ಅಸಡ್ಡೆ ಭಾವನೆಯನ್ನು ಯಿಟ್ಟುಕೊಂಡಿದ್ದ ಸ್ಫೂವರನು ಅಲಗಿಲವಾಡದಲ್ಲಿ ಗವುಡನಿಗಾಗಿ ಜಾಲಾಡಿ,