ಪುಟ:ಅರಮನೆ.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೨ ಅರಮನೆ ಮುಂದಕೂ ಕಿರಕೂ ಕಿರಕೂ ಯಂದು ಸಬುಧ ಮಾಡುತ ವಾಲಾಡುತ್ತಿದ್ದ ಸಿಮಾಸನವನ್ನು ತದೇಕ ಚಿತ್ತದಿಂದ ನೋಡುತ ತನ್ನ ದವಡೇಲಿದ್ದ ತೊಂಬಲ ದುಂಡೆಯನ್ನು ಯಡಕೂ ಬಲಕ್ಕೂ ತಳ್ಳಾಡುತ್ತಿರುವಾಗ್ಗೆ.... ಪರರ್ಗುಣಿ ಮಾಗಿ ಯಂಬುವ ಹಚ್ಚ ಹಸುರನೆಯ ಯಿಪ್ಪತ್ತು ಕೂರಿಗೆ ಹೊಲದಲ್ಲಿ ತನ್ನೆಡಗಾಲನ್ನು ಹುಲ್ಲಿನ ಹೊರೆಯ ಮಾಲಿಟ್ಟು ತನ್ನೆರಡೂ ಕಯ್ಕೆಗಳನ್ನು ಸೊಂಟದ ಯರಡೂ ಬದಿಯಲ್ಲಿಟ್ಟು ಜಗಲೂರೆವ್ವ “ಹೋಹೋಮ್ ಸೂರಾss.. ಹೋಂ ಸೂರಾss..” ಯಂದು ಕೂಗಿದೊಡನೆ ಹೊಲದ ಮ್ಯಾರೇಲಿ ಆಸು, ಬೇವು, ಹೊನ್ನಿ, ಸಾಗುವಾನಿ ಯವೇ ಮರಗಿಡಗಳ ಮ್ಯಾಲ ಯಿಸ್ತಮಿಸಿ ಕೊಂಡಿದ್ದ ಕಾಗೆ, ಗೂಗೆ, ಮೀನು ಮಿಂಚುಳ್ಳಿಯೇ ಮೊದಲಾದ ಪಕ್ಷಿಗಳು ಬೆಚ್ಚಿಬಿದ್ದು ಹಾರಿ ಮುಗಿಲ ಬಯಲ ತುಂಬ ಅಂಡಾವರನಗೊಂಡವು.... ಮುಂಗೋಳಿ ಕೂಗಿನ ನಾದವನ್ನ ಹಾದಿ ಮಾಡಿಕೊಂಡು ಹೊಲ ಸೇರಿ ಯುಂಟಾಳು ಮಾಡೋ ಕೆಲಸವನ್ನು ತಾನೊಬ್ಬಾಕೆಂದೇ ಮಾಡಿ ಮುಗಿಸುವಂತಾಕೆಯಾದ ಜಗಲೂರೆವ್ವನ ತಂದೆ ಯಾರಪ್ಪಾ ಅಂದರೆ ಮಿಂಚೇರಿಯ ಪರಿಶೇ ಪಯ್ಕೆ ಪಯಿಲುವಾನನಾದ ಅಂತಾಡಪ್ಪನೆಂಬಾತನು, ತಾಯಿ ಯಾರಪ್ಪಾ ಅಂದರ ಕಂಬಳೆವ್ವನು, ಆ ದಂಪತಿಗಳಿಗಾಕೆ ಯಷ್ಟನೆಯವಳೆಂದರೆ ಅಷ್ಟಮ ಸುಪುತ್ರಿಯು, ತಾನು ಬಾಯಿ ಸತ್ತ ಹುಳದಂಥ ಮೋಬಯ್ಯನೆಂಬಾತನ ಕಯ್ಕೆ ಹಿಡಿದು ಆವತ್ತಿಗೆ ಬರೋಬ್ಬರಿ ಯಿಪ್ಪತ್ತೇಳು ವರುಷ ತುಂಬಿರುವುದು. ಆದರೆ ತನ್ನುದುರದೊಳಗ ವಂದಾದರು ನರಹುಳ ಕಂಡಿಲ್ಲ. ಯರಡು ಕಂಭಗಳ ನಡುವೆ ಜ್ವಾಲೆ ಕಟ್ಟಿಲ್ಲ.. ಮೊಲೆ ವುಣುಸಿ ಲಾಲಿ ಪಾಡಿಲ್ಲ. ಮುಟ್ಟು ನಿಲ್ಲೋ ಲಚ್ಚಣ ಕಾಣದ್ದ ರಿಂದಾಕೆಯು ಕಚ್ಚಿ ಹಿಡಿದ ಗಂಡನ ಮ್ಯಾಲ ಬ್ಯಾಸರ ಮಾಡಿಕೊಂಡಿದ್ದಿಲ್ಲ.. ವಂದಾನೊಂದಿನ ತವರು ಮನೀಗೆ ಹೋಗಿ “ಯಪ್ಪಾ...... ನನ್ನುದುರ ಬಿತ್ತೊರಿಲ್ಲದ, ರೆಂಟೆ ಹೊಡೆಯೋರಿಲದ ಬರಡು ಹೊಲಾ ಆಗಯ.. ಮೊನೆ ವಂದಿನ ನಸುಕಿನಾಗ ಅಂಗಯ್ದಾಡೋ ಅರಗಿಣಿ ಬಂದು ಮನೆಯಂಗಳದ ಬೇಯಿನ ಮರದ ಮ್ಯಾಲ ಕುಂತು ಬಂಜೆ ಬಂಜೆಯಂದು ಕೂಗಿದಂಗಾತು.. ನನ ಗಂಡನೆಂಬೋದು ಹಗಲಿಪ್ಪತ್ನಾಕು ತಾಸು ತೊಂಬಲ ವುಗುಳೋ ಪಿಕದಾನಿ ಹಿಡಕೊಂಡು ಅರಮನ್ಯಾಗ ಭಮ್ರಮಾಂಬೆಯ ಕಾಪಲ ಮಾಡತಯ್ಕೆ.. ಅದಕ ಹೆಂಡತಿ ಯಿದ್ರೂವಂದ... ಯಿರದಿದ್ರೂವಂದss.. ಕಂದನಿಲ್ಲದ ಬಂಜೆ ಬಾಳು ನೀಗೀ