ಪುಟ:ಅರಮನೆ.pdf/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪da ಅರಮನೆ ಯಾವ ತೆರನದ್ದು? ಯಾವ ಕಾಲದ್ದು? ನಡುನಡುವೆ ನನ್ನ ಹೆಸರೂ ಪ್ರಸ್ತಾಪವಾಗುತ್ತಿತ್ತಲ್ಲ? ನನ್ನ ಜನುಮದ ಗುಟ್ಟಿಗೂ, ಆ ಪ್ರಸ್ತಾಪಕ್ಕೂ ಸಂಬಂಧಯಿರುವುದಾ? ಯಿಲ್ಲವಾ? ಯಿ ಯಲ್ಲಿ ನನ್ನ ಪ್ರಶ್ನೆಗಳಿಗೆ ಮುಖಕ್ಕೆ ಮುಖ ಕೊಟ್ಟು ಯಾಕ ಜವಾಬು ನೀಡುಮೊಲ್ಲೆ? ಹೇಳಲಕಾಗಲೀ, ಕೇಳಲಕಾಗಲೀ ನನಗೆ ಅಧಿಕಾರ ಯಿಲ್ಲವಾ?.. ಮಗಳೆದೆಯಿಂದ ಹುಟ್ಟಿಕೊಂಡಿದ್ದ ಪ್ರಶ್ನೆಗಳಿಂದಾಗಿ ತಿಲ್ಲಾನ ತಾಯಕ್ಕಳ ದಯ್ಕಂದಿನ ಬದುಕಿನಲ್ಲಿ ಹದ ತಪ್ಪಿತ್ತು.. ಮನಸ್ಸಿನ ನಾದ ತಪ್ಪಿತ್ತು. ಮಹಾನ್ ತೇಜಸ್ವಿ ಭೂತಭುಜಂಗನಾಥರ ವರಪ್ರಸಾದದ ಫಲವೇ ನೀನು ಮಗಳೇ ಯಂದು ಖುಲ್ಲಮ ಖುಲ್ಲ ಹೇಳಿಬಿಡಬೇಕೆಂದು ನಾಲಕಾರು ದಿವಸಗಳಲ್ಲಿ ಯಷ್ಟೋ ಸಲ ಅಂದುಕೊಂಡಳು.. ಯಾಕೋ ಯೇನೋ? ಅನ್ನಲಕ ಆಗಿರಲಿಲ್ಲ.. ಕಾರಣ ಮಾನ್ಯರ ಮಸಲವಾಡ ಬಿಡುವ ಹಿಂದಲ ರಾತ್ರಿಕಣಸಿನಲ್ಲಿ ಕಾಣಿಸಿಕೊಂಡಿದ್ದ ನಾಥರು 'ಪ್ರಿಯೇ.. ಸಾವುರಾರು ವರುಷಂಗಳ ಪಠ್ಯಂತ ಬದುಕಿರಬೇಕಾದಂತ ನಾನು ಸ್ತ್ರೀ ಯಾಮೋಹದಿಂದಾಗಿ ಪ್ರಾಣ ನಷ್ಟ ಮಾಡಿಕೊಂಡಿರುವವನು. ನನ್ನ ನೆನಪಿನ ಮ್ಯಾಲ ಅಪವಾದಗಳ ಕರಿ ನೆರಳು ದಟ್ಟವಾಗಿ ಕವಿದುಕೊಂಡಿರುವುದು. ಆದ್ದರಿಂದ ನಮ್ಮಿಬ್ಬರ ನಡುವೆ ಯಿದ್ದ ಲಂಯ್ದಿಕ ಸಂಬಂಧವನ್ನು ಯಾರ ಬಳಿಯೂ ಹೇಳುವುದಿಲ್ಲವೆಂದು ಮಾತು ಕೊಡು.. ಹಾಂ..ಯೀಗ ಯಷ್ಟೋ ಸಮಾಧಾನವಾಯಿತು ನೋಡು. ನೀನು ನಂಬಿಕಸ್ಥಳು ಯಂದು ನಮಗೆ ಗೊತ್ತು. ಆದ್ದರಿಂದಾಗಿಯೇ ನಿನ್ನಲ್ಲಿಗೆ ಬರಮಾಡಿಕೊಂಡದ್ದು.. ನಮ್ಮಿಬ್ಬರ ಪ್ರೇಮದ ಕುಡಿ ಬಾಡದಂತೆ ಜೋಪಾನವಾಗಿ ನೋಡಿಕೋ.. ಯಂದು ಮುಂತಾಗಿ ಹೇಳಿ ಮರೆಯಾಗಿದ್ದರು.. ಯೀ ಕಾರಣದಿಂದ ಆಕೆ ವುಭಯ ಸಂಕಟದಿಂದ ನರಳುತಲಿದ್ದಳು ಯಂಬಲ್ಲಿಗೆ ಸಿವಸಂಕರ ಮಾದೇವsss.... ಅತ್ತ ಕುದುರೆಡವು ಪಟ್ಟಣದೊಳಗ ಯಲ್ಲಿ ನೋಡಿದಡಲ್ಲಿ ತಾಯಿ ಬಗಸ್ಯಾಳ ಸಿಮ್ಯಾಸನ ಯಂದು ಮುಂತಾಗಿ ಹಾಡುತ್ತ ಕುಣಿದಾಡುತ್ತಿರುವ ದ್ರುಸ್ಯವು.. ಯಲ್ಲಿ ಕಿವಿಚಾಚಿದಡಲ್ಲಿ ಸಿಮ್ಮಾಸನ, ಪುವ್ವಲ ರಾಜವಮುಸಸ್ಥರ ಸಿಮಾಸನ ಯಂಬ ವುದ್ದಾರಗಳು.. ಸಾಂಬವಿಯು ಪುವ್ವಲ ಸಾಮ್ರಾಜ್ಯ ಲಚ್ಚುಮಿಯಾಗಬೇಕೆಂದು ಯಿಚ್ಚಪಟ್ಟಿರುವಳು ಯಂದನಕಂತ ಮಠದೋರು, ಜಾತ್ರೋರು, ವಕ್ಕಲೂರು,