ಪುಟ:ಅರಮನೆ.pdf/೪೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ಅರಮನೆ ವಂದಿಮಾಗದ ಮಂದಿ ಯಲ್ಲಯ್ತಂತ, ಸೊನ್ನಾಯಿ ಯಲ್ಲಯ್ತಂತ, ಕಳಸಗಿತ್ತೇರು ಯಲ್ಲದಾರಂತ ನೋಡುಲೋಸುಗ ಹುಬ್ಬಿಗೆ ಕಲ್ಕಿ ಹಚ್ಚಿ ವಂದು ಧಮ್ರುಸುತ್ತಮುತ್ತ ನೋಡಿದಳು, ಯಾದೇ ವಂದು ಗವುರವ ಕೊಡೋದು ಕಣ್ಣಿಗೆ ಬೀಳುತಾಯಿಲ್ಲ ಯಂದಾಕೆ ಯಸನ ಮಾಡೂತ ನೋಡಿದಳು.. ಮುಚ್ಚಿದ್ದ ಬಾಗಿಲನ್ನು ತೆರೆಯುವುದೋ, ಬಿಡುವುದೋ ಯಂದೊಂದರಗಳಿಗೆ ಯೋಚನೆ ಮಾಡಿದಳು. ಯಾಕೋ ಬಾಗಿಲು ಹಿಂದಕೂ ಮುಂದಕೂ ವಾಲಾಡುತಿರುವುದು. ಯಿರಲಿ, 'ಯೇನಿರಬೌದು?” ಗಟ್ಟಿಮನಸು ಮಾಡಿ ತೆರೆದು ನೋಡುತ್ತಾಳೆ.. ಅಂಗಳದಲ್ಲಿ ಅಸಂಖ್ಯಾತ ಮಂದಿ.. ಯೇನಪ್ಪಾ.. ಯಾಕ ಬಂದೀರಪ್ಪಾ. ಅರಮನೆಯಿಂದ ಯೇನಾಗಬೇಕಮ್ಮೆ ಯಂದು ಕೇಳಿದಳು ರಾಜಸತ್ತೆಯ ಗತ್ತಿನಿಂದ, ಅದಕಿದ್ದು ಗೊಲ್ಲರೀರಯ್ಯನು ಸದರಿ ಸಂಗತಿಯನ್ನು ಯಿವರಿಸಿ “ಯಿದಕ ಬಂದೀವವ್ವಾ” ಯಂದನು. ಸಂಗತಿ ಬರಸಿಡಿಲಿನಂತೆರಗಿತು. ಯಷ್ಟಿದ್ದರೂ ರಾಜವಮುಸದಾಕೆ, ತಡಕೊಂಡಳು. ತನ್ನ ಕಣ್ಣೆಳಗ ಮೂಡುತಲಿದ್ದ ದುಕ್ಕವನ್ನು ಹಂಗs ತಡಕೊಂಡಳು. ತಮ್ಮ ಅರಮನೆಯ ಸಿಮ್ಮಾಸನಯೇನು ಯೀಕಾಲದ್ದಾ.. ಅದರ ಮ್ಯಾಲ ವುಜ್ಜಯನಿಯ ಯಿಕ್ರಮಾದಿತ್ಯವಾರಾಜ ಕುಂತಿದ್ದ ಅಂಬುತಾರ, ನೊಳಂಬ, ಕದಂಬ, ಗಂಗ, ಚೋಳ, ಚೇರ, ಪಲ್ಲವರಾದಿಯಾಗಿ ಯಲ್ಲಾ ಮಾರಾಜರು ಕುಂತಿದ್ದರು ಅಂಬುತಾರss.. ಪುಣ್ಯಬಲದಿಂದ ತಮ್ಮ ಪೂರುವಿಕರಾದ ಸಾತವಾಹನರು ಕುಂತಿದ್ದರು ಅಂಬುತಾರss.. ಅದು ಸಾಮಾನ್ಯದ್ದಾ? ಅದರ ವಳ ಹೊರಗೆ ಯಿರುವ ಕಥೆಗಳು ವಂದಾ ಯರಡಾ? ಮುಟ್ಟಿದವರು ಚಿಟ್ಟನೆ ಚೀರಿರುವುದುಂಟು, ಮುಟ್ಟಿದವರ ಮುಟ್ಟು ನಿಂತಿರುವುದುಂಟು, ಅಜಮಾಯೇ ಯೇರಿದವರು ಸುಟ್ಟು ಭಸುಮವಾಗಿರುವುಂಟು, ಅದರ ಬಗ್ಗೆ ಹೀನಾಯವಾಗಿ ಮಾತಾಡಿದೋರ ಪುರುಷತ್ವ ಪ್ರಮಾಣ ತಗ್ಗಿರುವುದುಂಟು, ವಯಾಗ್ಯ ತಾಳಿದವರೂ ವುಂಟು, ಯಿವೆಲ್ಲ ಸದರಿ ಕುಂತಳ ಸೀಮೆಯೋಳಗ ಯಾರಿಗೆ ತಾನೆ | ಬರಸಿಡಿಲನ್ನು ಹಂಗೇ ತಲೆ ಮ್ಯಾಲ ಸಯ್ತಿಸಿಕೊಂಡೂ ರಾಜಮಾತೆಯು ಕೇಳಿದವರಿಗೆಷ್ಟು ದಯಯ್ಯ? ಹೇಳಿದವರಿಗೆಷ್ಟು ಧಯತ್ಯ? ಯಂದು ಪ್ರಶ್ನೆ ಮಾಡಲಕ ಬರೋದಿಲ್ಲ.. ವತ್ತಾಯ ಮಾಡಲಕ ಮಂದಿ ಯಿಲ್ಲಿಂದ ಅಲ್ಲೀತನಕ ರೆಪ್ಪೆ ಅಲುಗಿಸದೆ ನಿಂತವರೆ.. ತಾವೇ ವಂದೊಂದು ಆಯುಧಯಂಬಂತೆ. ಅವರು ಬಗುಸುತಲಿರುವುದು ಕೇವಲ ಸಿಮ್ಮಾಸನವನ್ನಲ್ಲ.. ಅರಮನೆಯ