ಪುಟ:ಅರಮನೆ.pdf/೪೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦೪ ಅರಮನೆ ವುಪಯೋಗವಾಗುತಯ್ತಲ್ಲಾ, ನಮಗ ಅಷ್ಟೆ ಸಾಕು” ಯಂದು ತಿಳುವಳಿಕಸ್ಥೆ ಥರ ಮಾತಾಡಿ ಸಮ್ ಅನ್ನಿಸಿಕೊಂಡಳು. “ಯೀ ಥಟಗು ವಯಸ್ಸಿಗೇನೇ ಅನುಭವದ ಮಾತ ಆಡಿದಿ ತಾಯಿ.. ಸಾಂಬವಿಯ ಕ್ರುಪ ಯಾವತ್ತೂ ನಿನ ಮಾಲಿರಲಿ” ಯಂದು ಹರಸುತ್ತ ಗೊಲ್ಲರೀರಯ್ಯ, ಕಜ್ಜಾಲಯ್ಯ ವಳಹೋಗಿ ಸಿಮಾಸನದ ಬುಡಕ್ಕೆ ಕಮ್ಮ ಹಚ್ಚಿದರೋ ಯಿಲ್ಲವೋ.. ಎಂದು ಕಾಲದಲ್ಲಿ ಆನೆಯಿಂದ ಯಳಸಿಕೊಂಡಿದ್ದ ಅದು ಯಳೇ ಕಂದಮ್ಮನೋಪಾದಿಯಲ್ಲಿ, ಮಲ್ಲಿಗೆ ಹಾರದೋಪಾದಿಯಲ್ಲಿ, ಸಡನ್ನ ಖುಲಾಸೆಗೊಂಡ ಮರಣ ದಂಡನಾ ಶಿಕ್ಷೆಗೊಳಗಾದ ಖಯ್ಲಿಯೋಪಾದಿಯಲ್ಲಿ ಅಸಾರಗೊಂಡು ಅವರ ಕಯ್ದೆ ಬಂತು.. ಹಂಗs ಅವರ ಹೆಗಲೇರಿತು. ಜಯನಾಮ ಪಾರೊತೀ ಪತಿ ಹರ ಹರ ಮಾದೇವಾSS ಯಂದನಕಂತ ತಲಬಾಗಿಲು ದಾಟಿದೊಡನೆ ಅರಮನೆಯವ್ವ ಅಲಲಾ ನನ ಕರುಮವೇ ಯಂದು ದುಕ್ಕ ಮಾಡಿದಳು... ಜಡಜಡ್ಡಿ ಕಾಕ್ಕಟ ಣಕ್ಕೆ ಯಂದು ಬಾರಿಸಿಕೋತ.. ಕುಣಿಯೂತ.. ಕುಪ್ಪಳಿಸೂತ.. ಬೀದಿ ಬೀದಿಯಲ್ಲಿ ಮೆರೆಸಿಕೋತ.. ಹೂಮಾಲೆಗಳಂ ಹಾಕಿಸಿಕೋತ.. ಹುಬ್ಬಿನ ಮಳೆಯಲ್ಲಿ ನೆನೆಯೂತ ಮೆರೆಸಿಕೋತsss.. ನಿಧಿ ಸ್ಥಳಕ್ಕೆ ಬಂದು ವಸ್ತಿ ಸಮಚ್ಚಯದಲ್ಲಿ ಅದು ಸಾವುರ ಸಾವು... ಲಚ್... ಲಚ್ಚ ಜನರ ಕಷ್ಟೊಳಗ ರಾರಾಜಾತು.. ಓ ಹೋ ಸಿಮ್ಮಾಸನಾ... ಪ್ಲಾ.. ಹ್ವಾ.. ಸಿಮ್ಮಾಸನಾSS.. ಅಜ್ಜಹಾ ವೀರೇ. ಅಸ್ಟಹಾ ದೀರೇ. ನಮ್ಮ ಸಾಂಬವಿ ಮುಡುದಿರುವ ಆಭರಣಗಳು ಯಾವ್ಯಾವೆಂದರೆ ಮುಂಗಯ್ಯಗೆ ಕಂಕಣ ಕಡಗ ತೋಳಬಂದಿ ವಂಕಿಯೇ ಮೊದಲಾದ ಯಿಪ್ಪತ್ತು ಸಹಸ್ರ.. ಯೀ ತಾಯಿಯ ವಂಭತ್ತು ಬೆರಳುಗಳಿಗಿರುವ ವಂಭತ್ತು ವುಂಗುರುಗಳು ಎಂಭತ್ತು ಸೂಯ್ಯರಿಗೆ ಸಮಾನ... ಹಾಲು ತುಂಬಿ ಕಳಸದಂತಿರುವ ಮೊಲೆಗಳಿಗೆ ಮನೋಹರವಾದ ಕೆಂಪು ವಸ್ತದ ರವಿಕೆಯಂತೂ ರತ್ನಾಭರಣದ ಪ್ರವಾಹದಂತೆ ಬಲು ಶೋಭಾಯಮಾನವಾಗಿರುವುದು.. ಯೀ ತಾಯಿಯು ತನ್ನ ನಡುವಿಗೆ ಬಿಗಿದಿರುವ ವಡ್ಯಾಣವು ಕೋಟಿ ಸೂರರನ್ನು ಮುಚ್ಚಿ ಮುಳುಗಿಸಿರುವುದು........ ಗಂಟಲಯ್ಯ ಖಂಡು ಖಂಡು ಖಡುಗ ಹೇಳುತ ಯಿರುವಾಗಲೇ ವಸ್ತಿಯು ಸಿವಾಸನ ಕಡೇಕ ತೀಕ್ಷವಾಗಿಂರೂ, ಹೆಮ್ಮೆಯಿಂದಲೂ