ಪುಟ:ಅರಮನೆ.pdf/೪೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೫ ದ್ರುಷ್ಟಿಸಾರಿಸಿತು, ಮೆಲು ಮೆಲ್ಲಕ ಯದ್ದು ಬಂದು ಅದರ ಮಯ್ಯ ಸವರಿ ತರುವಾಯು ಅದರ ಮ್ಯಾಲ ಮಟ್ಟಸವಾಗಿ ಯಿರಾಜಮಾನಗೊಂಡೊಂಡನೆ ಭಕುತಾದಿ ಮಂದಿ ವುಫ್ ವುಫ್ ಅಂತು. ಕುದುರೆಡವನಿಧಿಯೇ ನಿನಗಾರು ಬದಿಯೇ, ಬದಿ ಅಂದವರ ಹಲ್ಲು ಮುರಿಯೇ ಭೋ ಪರಾಕ್ ಯಂದು ಜಯಘೋಷ ಮಾಡಿತು, ಹುಬ್ಬಿನ ಮಳೆ ಕರೆಯಿತು. ಹತ್ತಾರುಮಂದಿಯ ಮಯ್ಯೋಳಗ ಹತ್ತಾರು ದೇವತೆಗಳು ಕಾಣಿಸಿಕೊಂಡು ಕುಣಿಯಲಾರಂಭಿಸಿದರು. ಕೆಲವರು ಆವೇಸದಿಂದ ತಮ್ಮ ಸರೀರಗಳನ್ನು ತಾವೇ ದಂಡನಮಾಡಿಕೊಳ್ಳ ತೊಡಗಿದರು. ಸಿವಾಸನಾರೂಢರಾದ ತಾಯಿಯ ದರುಸನ ಪಡದು ಪಾವನರಾಗಲಕ ಮಂದಿಗೆ ನೆಲ ಸಾಲದಾಗಿ ಗಿಡ, ಮರ, ಮನೆ, ಮಠ, ಮಾಳಿಗೆಗಳನ್ನು ಸರಸರಾಂತ ಯೇರತೊಡಗಿದರು... ಯಲ್ಲಂದರಲ್ಲಿ ಗುಗ್ಗುಳಗಳು ಧಗ್ಗೆಂದು ಜಾಜ್ವಲ್ಯಮಾನವಾಗಿ ವುರಿಯಲಾರಂಭಿಸಿದವು.. ಆವೇಶ ರವುಷದ ಮಹಾಪೂರದ ಹೊಡೆತಕ್ಕೆ ಸಿಕ್ಕು ರುಮ್ಮಿಗಳು ರುಮುರುಮುಗುಟ್ಟಲಾರಂಭಿಸಿದ್ದೇನು? ಡೊಳ್ಳುಗಳು ಡೊಳ್ಡೊಳ್ ಗುಟ್ಟಲಾರಂಭಿಸಿದ್ದೇನು...? ಹಲಗೆ ತಮ್ಮಟೆಗಳು ಣಕ್ಕಣಕ್ಕಲಾರಂಭಿಸಿದ್ದೇನು? ನಾದ ಪ್ರವಾಹ ಭಕುತಿಯ ನೆರೆಯ ತಾಕತ್ತಿಗೆ ಸಿಲುಕಿದ ಸಿಮಾಸನವು ಯಿದ್ದಕ್ಕಿದ್ದಂತೆ ನೆಲ ಬಿಟ್ಟು ವಂದು ಮೊಳ ಮ್ಯಾಲಕ್ಕೆದು ಅತಂತ್ರಸ್ಥಿತೀಲಿ ನಿಂತುಗಂತು.. ಸಿವಸಿವಾsss ಸದರಿ ಪಟ್ಟಣದ ಮುವ್ವತ್ತಾರು ಮಂದಿ ಮಡಿವಾಳರಲ್ಲದ ಸುತ್ತುಮುತ್ತಲ ಯಿಪ್ಪತ್ತಾರು ಪರಗಣ ಮರುಗಳಿಂದಾಗಮಿಸಿದ್ದ ಯಪ್ಪತ್ತೇಳು ಮಂದಿ ಮಡಿವಾಳರು ಸಿಮ್ಮಾಸನದ ಪಾದದ ಬುಡಕ್ಕ ಪಟ್ಟೆಪೀತಾಂಬರ, ಜರತಾರಿ ಸೀರೆಗಳನ್ನು ಹಿಂದೇಸಿಂದ, ಮುಂದೇಸಿಂದ ಹಾಸದೆ ಯಿರಲಿಲ್ಲ.. ಸಗುತಿ ಸಂಪನ್ನ ವಸ್ತಿಯ ಬಾಯಿಯಿಂದ ವಂದು ಮಾತಿಲ್ಲ ಸಿವನ......... ವಂದು ಕಥೆಯಿಲ್ಲ ಸಿವನೇ... ಕಣ್ಣುಗಳನ್ನು ಕೊಂಡಮಾಡಿಕೊಂಡಯ್ಕೆ. ಕುಂತಲ್ಲಿಂದ ಸಿಮಾವಲೋಕನ ಮಾಡುತಯ್ದೆ. ಹಳ್ಳಗಳು ನದಿಗಳಾಗುವುದನ್ನು, ನದಿಗಳು ಸಮುಂದರಗಳಾಗುವುದನ್ನು ಸಮು೦ದರಗಳು ಸಾಗರಗಳಾಗುವುದನ್ನು, ತಂಗಾಳಿ ಬಿರುಗಾಳಿಯಾಗುವುದನ್ನು, ಬಿರುಗಾಳಿ ಸುಂಟರ ಗಾಳಿಯಾಗುವುದನ್ನು, ಭಕುತಾದಿ ಮಂದಿಯ ಸರೀರಗಳೊಳಗಿಂದ ಪಾಪಕರುಮಗಳು ಪುತುಪುತನೆ ವುದುರಿ ಭಸುಮವಾಗುತ್ತಿರುವುದನ್ನು, ಚಂದ್ರಾಮ ಸೂ‌ಮನೋಪಾದಿಯಲ್ಲಿ ಧಗಧಗನೆ ಪ್ರಜ್ವಲಿಸುತ್ತಿರುವುದನ್ನು ನೋಡುತಯ್ಕೆ, ನಿರೇಶನ ಮಾಡುತಯ್ಕೆ..