ಪುಟ:ಅರಮನೆ.pdf/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೬ ಅರಮನೆ ಯೀ ಪ್ರಕಾರವಾಗಿ ಸಿವಾಸನಾರೂಢಿಯಾಗಿರುವ ತಾಯಿಯನ್ನು ಹೊಳಗೆ ಹೊಂದಿಸುವಂಥಾ ಸುಭಕಾರೈವು ಕಣ್ಣಿಗೆ ಹಬ್ಬ ಮಾಡುವಂತೆ, ಕಿವಿಗಡುಚಿಕ್ಕುವಂತೆ, ಅಳ್ಳೆದೆಗಳು ಕರಗಿ ನೀರಾಗಿ ಹರಿಯುವಂತೆ, ಆವೇಶ ಅಕ್ಕಯಿಸುತ್ತ ರವುಸ ರಕ್ಕಯಿಸುತ್ತ ಯಿದ್ಯುಕ್ತವಾಗಿ ಆರಂಭಗೊಂಡಿತು ಸಿವನೇss.. ಅದನು ಯೇನು ಕೇಳುವಿ ಸಿವನೇss ಯೇನು ಬಿಡುತಿ ಸಿವನೆ. ಸಿವನ್ನಾಮ ಪಾರೊತೀ ಪತಿ.. ತಾಯಿ ದಿಬ್ಬಣವು ಅರ ಮೊಳ ಕ್ರಮಿಸಲಕ ತಾಸೊಪ್ಪತ್ತು ಹಿಡಿಯಲಕ ಹತ್ತಿತು, ಮಂದಿ ವಂದಕ್ಕೊಂದು ಅಂಟಿಕೊಂಡುಬಿಟ್ಟಿತ್ತು, ಅವರದನ್ನು ಯಿವರೂ, ಯಿವರದನ್ನು ಅವರೂ ವುಸುರಾಡುತಲಿದ್ದ ಪರಿಣಾಮವಾಗಿ ವಂದು ಹಿಡಿ ಗಾಳಿಗೆ ಬರ ಬಂದಿತ್ತಲ್ಲಿ.. ಗುಡೇಕೋಟೆ, ಜರುಮಲಿ, ನೆಡುವಿ, ನಿಚ್ಚಾಪ್ರ ತುಂಬರಗುದ್ದಿ, ಮರಿಗುದ್ದಿ ಯವೇ ಮೊದಲಾದ ಪ್ರಾಂತ ದೂರುಗಳಿಂದ ಭಕುತಾದಿ ಮಂದಿ ರಗಡ ಸಂಖ್ಲಿ ಸದರಿ ಪಟ್ಟಣವನ್ನು ತುಂಬಿ ತುಳುಕಾಡತೊಡಗಿದ್ದರು.. ಬಂದ ಪ್ರತಿಯೋವ್ವನು ತಾನು ಸಾಂಬವಿಯ ಕಣ್ಣಳತೆಯೊಳಗಿರಬೇಕಂದರ ಹೆಂಗ? ಕೂಗಳತೆಯೊಳಗ ಯಿರಬೇಕಂದರ ಹೆಂಗ? ಆಟು ದೂರದಿಂದ ಪಾದ ಯಾತ್ರಮಾಡುತ ಬಂದ ತಮಗ ತಾಯ ದರುಶನ ಲಭ್ಯವಾಗುತಾ ಯಿಲ್ಲವಲ್ಲ ಯಂದು ಯಸನ ಮಾಡುತ ತಾವೆಲ್ಲೆಲ್ಲಿದ್ದರೋ ಅಲ್ಲಲ್ಲಿ ನಿಂತೂ, ಕುಂತೂ ಜಗದಂಬೆ ಯಿಲ್ಲೇ ಯಿರುವಳು ಯಂದು ಭಾವಿಸಿ ಅಲ್ಲಲ್ಲೇ ಪೂಜೆ ಪುನಸ್ಕಾರ ಮಾಡುತ, ತಮ್ಮ ಹರಕೆಯ ಕುರಿಯನ್ನು ಅಲ್ಲಲ್ಲೇ ಬಲಿ ಕೊಟ್ಟು ನಂದ್ಯ ಮಾಡುತ ಯಿರತೊಡಗಿದವರ ಮಂದಿ..ಯಿದೊಂದೇ ಅಲ್ಲದೆ ಸುತ್ತನ್ನಾಕಡೆ ಮೂರುಗಳಲ್ಲಿದ್ದ ವುಡುಸಲಮ್ಮ, ತಡಸಲಮ್ಮ, ಮಾರೆಮ್ಮ ಮಸಣಮ್ಮ ತೂರಮ್ಮ ಮೇರಮ್ಮರೇ ಮೊದಲಾದ ಹೆಣ್ಣು ದೇವರುಗಳು ತಮ್ಮ ತಮ್ಮ ಪೂಜಾರಿಗಳ ಹೆಗಲೇರಿ ಸದರಿ ಪಟ್ಟಣವನ್ನು ಹಿಗ್ಗಾ ಮುಗ್ಗಾ ತುಂಬಿ ಬಿಟ್ಟಿದ್ದವು. ಅವು ಯಲ್ಲೆಲ್ಲಿದ್ದವೋ ಅಲ್ಲಲ್ಲೇ ಸಾಂಬವಿಂಯ ನಾಮಸ್ಮರಣವನ್ನು ಮಾಡುತ ಕುಣಿಯಲಾರಂಭಿಸಿದ್ದವು. ಕೆಲವು ಹೆಣ್ಣು ದೇವರುಗಳಂತೂ ಅವರ ಸರೀರದೊಳಗೊಂದರೆಗಳಿಗೆ, ವರ ಸರೀರದೊಳಗೊಂದರಗಳಿಗೆ ಸ್ಥಾನಪಲ್ಲಟ ಮಾಡಲಾರಂಭಿಸಿದ್ದವು.. ತಾಯಿಯ ನಿಬ್ಬಣ ಹೊಂಟ ಸೋಲುಪ ಹೊತ್ತಿಗೇನೇ ಕುದುರೆಡವು ಪಟ್ಟಣದ ಮೇರೆಯು ಬಡೇಲಡಕು, ಸಿಡೇಗಲ್ಲು