ಪುಟ:ಅರಮನೆ.pdf/೪೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೦೭ ದಾಟಿ ಮುಂದಕ ಹೋಗಿ ಬಿಟ್ಟಿತ್ತೆಂದರ.. ಹುಟ್ಟಿದಾರಾಭ ಬಾಯನ ಕಳಕೊಂಡಿದ್ದೋರು ಯಿದ್ದಕ್ಕಿದ್ದಂತೆ ಸಿವನಾಮ ಪಾರೋತೀ ಪತಿಹರ ಹರ ಮಾದೇವ ಯಂದು ಕೂಗಲಕ ಆರಂಭ ಮಾಡಿದರೆಂದರ, ಹುಟ್ಟಿದಾರಾಧ್ಯ ಕಾಲನ ಕಳಕೊಂಡಿದ್ದೋರು ಯಿದ್ದಕ್ಕಿದ್ದಂತೆ ಚಕಚಕ ನಡೆದಾಡ ಲಾರಂಭಿಸಿದ್ದರೆಂದರ.. ಹುಟ್ಟಿದಾರಾಭ್ಯ ಕಿವಿಕಳಕೊಂಡಿದ್ದೋರು ಯಲ್ಲಾ ಕೇಳಿಸಿಕೊಳುತ ಸಾನುಕೂಲವಾಗಿ ಪ್ರತಿಕ್ರಿಯಿಸಲಾರಂಭಿಸಿದ್ದರೆಂದರ.. ನೋಡದಿದ್ದವರೂ ನೋಡುತಲಿದ್ದರೆಂದರ, ಚಾಚದಿದ್ದವರೂ ಕಯ್ಯಗಳನು ಅಷ್ಟುದ್ದಗಲಕ ಚಾಚುತಲಿದ್ದವರೆಂದರ.. ಮುಗೇರು ಹರೇದವರಾಗಿದ್ದರೆಂದರ. ಹರೇದ ಹುಡುಗರು ಕೂಸುಕಂದಮ್ಮಗಳಾಗಿದ್ದರೆಂದರ.. ಕೂಸುಕಂದಮ್ಮಗಳಿಗೂ ಹರೆಯ ಮೂಡಿ ತಮ್ಮ ತಮ್ಮ ತಾಯಂದಿರ ಕಂಕುಳಗಳಿಂದ ಕೊಸರುತ್ತ ಕೆಳಕ್ಕೆ ಯಿಳಿಯುತ್ತಿದ್ದವೆಂದರ.. ಸಿಂಹವಿಷ«ರದಲ್ಲಿ ಅಲಂಕಾರ ಮಾಡಿದ್ದ ತಾಯಿಯು ತನ್ನ ಸಕಲ ಸರುವಸ್ವವನ್ನೂ ಪರಿಸೆ ದಿಬ್ಬಣದಲ್ಲಿದ್ದ ಯಾವತ್ತೂ ಸಚರಾಚರಕ್ಕೆ ಧಾರೆ ಯರಕೋತಲೇ ಮುಂದುಮುಂದಕ ಜರುಗುತಲಿದ್ದಳು. ಪಡ್ಡು ಚಿಮುಳವ್ವ ಗೂಡು ಲಿಂಗವ್ವ, ಗಾದರಿಪಾಲೆ ವ್ಯ, ಕುರಿಂರ ಕ೦ಪಳವ್ವ ಮುಂತಾದೇಳುನೂರು ಮಂದಿ ಯದೆ ತುಂಬಿ, ಬಾಯಿ ತುಂಬಿ ಹಾಡುತಲಿದ್ದ ಪದಗಳನ್ನು ಆಲಿಸುತ್ತ ವಂದರಗಳಿಗೆ ಮಯ್ಯನ ಮರೆಯುತ್ತಿದ್ದಳು, ಸವುಟು ನಿಂಗಯ್ಯ, ಸಣ ಮುಂಡಯ್ಯ, ದೊಡ ರುಂಡಯ್ಯ, ಗೊಡಗು ಜೋರರೇ ಮೊದಲಾದ ವಂಭಯೂರು ಮಂದಿ ನಿಜ ಭಕುತರು ಕುಣಿದು ಕುಪ್ಪಳಿಗೆ ಮಾಡುತಲಿದ್ದುದನ್ನು ನೋಡುತ ನಂದರಗಳಿಗೆ ಮರು ಯಚ್ಚರ ಆಗುತಲಿದ್ದಳು. ಗಾದರಯ್ಯ ಚರಯ್ಯ ಚಿತ್ತಾರಯ್ಯ ಕೊಟ್ಟೆಹನುಮಂತಯ್ಯ, ಕೊರಲೀರಯ್ಯ ಯವರೇ ಯಿತ್ಯಾದಿನ್ನೂರು ಮಂದಿ ತಮ್ಮ ತಮ್ಮ ಕಯ್ಲಿದ್ದ ಚಬಕು, ಬರಲುಗಳಿಂದ ತಮ್ಮ ತಮ್ಮ ಮಯ್ದೆ ಬಡಕೊಂಡು ರಾಮಾ ರಗುತ ಹನಿಯುತ್ತಿದ್ದುದನ್ನು ನೋಡುತ್ತ ಅವುಡುಗಚ್ಚಿ ವಂದರಗಳಿಗೆ ಮುಖ ಬಿಗಿಯುತಲಿದ್ದಳು. ಕೊರಲಯ್ಯ, ಮ್ಯಾಸರೆಲ್ಲಯ್ಯ, ಕೊಲ್ಲಾರಯ್ಯ ಹೊಟ್ಟೆಯ್ಯ ತಾಳ್ಳಕರಯ್ಯ, ಬುಡೈನಿಂಗಯ್ಯ ಯಿವರೇ ಮುಂತಾದ ಮುನ್ನೂರು ಮಂದಿ