ಪುಟ:ಅರಮನೆ.pdf/೪೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೦೮ ಅರಮನೆ "ಯವ್ವಾs ನಿನ ಪಾದ ನನ ಮ್ಯಾಲಿಡು, ನನ ಮ್ಯಾಲ ಯಿಡು” ಯಂದು ಅಂಗಲಾಚುತ ಅಡ್ಡಡ್ಡ ಬಕ ಬೋರಲೆ ಮಲಗುತ್ತಿದ್ದುದನ್ನು ನೋಡಿ ಅಲಲಲಲಾಂತ ಕಿಲಕಿಲಗುಟ್ಟುತಲಿದ್ದಳು.. ಕುಂತಯ್ಯ ಮಂಕಲಯ್ಯ ಬೀಮಯ್ಯ ಅಂಜಿಣಿ, ಕೆಂಗಯ್ಯ ಭರುಮಯ್ಯ ಅಪ್ಪಯ್ಯ, ಮರಿಪಾಲಿ ಯಿವರೇ ಮೊದಲಾದ ನೂರಾರು ಮಂದಿ ತಮ್ಮ ತಮ್ಮ ಯಡಗಯ್ಯಗಳಿಗೆ ಬಟ್ಟೆಬರೆ ಸುತ್ತಿ ಅವುಡಲೆಣ್ಣೆ ಸುರುದು ದೀವಟಿಗೆ ಮಾಡಿ ವುರುಸುತ್ತಿದ್ದುದನ್ನು ನೋಡಿ ತನ್ನ ಕಣ್ಣುಗಳನ್ನು ಮರಗಲ ಹಿಗ್ಗಿಸುತಲಿದ್ದಳು.. ಯವರೊಂದೇ ಅಲ್ಲದೆ ತಲೆ ಕೆಳಗು ಮಾಡಿ ಅಂಗಾಸರೆಯಿಂದ ನೆಡೆಯುತಲಿದ್ದ ಪುಲ್ಲಾದ ಪಾತಯ್ಯ ತಿಪ್ಪಯ್ಯ, ಹಟ್ಟೆಯ್ಯ ಸಿವಯ್ಯ, ಗೊಟ್ಟರಯ್ಯರೇ ಮುಂತಾದವರೂsss.. ಮೋಳುಮಗ್ಗುಲಲೇ ದುಡುದುಡುನೆ ವುರುಳಾಡುತಲಿದ್ದ ಗುರಯ್ಯ, ಪಾಪಯ್ಯ, ಪುನ್ನಯ್ಯ, ಕರೆಮೋರಯ್ಯ, ತೂಬಯ್ಯ ಮುಂತಾದವರೋsss.. ಸಿವ.. ಸಿವಾ... ಯವ್ವಾss ಯಿದು ನಿನ್ನ ಕರುಣ ಪರಸಾದ ತಾಯಿss ಯಂದು ತಮ್ಮ ತಮ್ಮ ಕೂಸು ಕುನ್ನಿಗಳನು ತಾಯಿ ಕಡೇಕ ಬೀಸಿ ಹಿಡಿಯುತಲಿದ್ದ ತಾಯಂದಿರೆಷ್ಟೋ ಮಂದಿ.. ಹೆಂಡಂದಿರು ತಮ್ಮ ತಮ್ಮ ಗಂಡಂದಿರನ್ನೂ, ಗಂಡಂದಿರು ತಮ್ಮ ತಮ್ಮ ಹರೇದ ಮಕ್ಕಳನ್ನೂ... ಬಯಲೊಳಗ ಖಡುಗಗಳ ಹೊಳೆ ತುಳುಕಾಡುತಲಿತ್ತು.. ಬಯಲೊಳಗ.. ಪರಾಕು ವಕ್ಕಲು ನಡಿತಾ ಯಿತ್ತು.. ಮಾಡೋ ಕಯ್ಯಗಳಿಗೆ.. ನಡೆಯೋ ಕಾಲುಗಳಿಗೆ.. ನೋಡೋ ಕಣ್ಣುಗಳಿಗೆ.. ಕೇಳೋ ಕಿವಿಗಳಿಗೆ.. ಹೊಡಕೊಳ್ಳೋ ರುದಯಗಳಿಗೆ ರವ್ವಂಥಾದರೂ ಪುರುಸೊತ್ತುಯಿರಲಿಲ್ಲ. ಯಂಥಾ ಪರಿಸ್ಥಿತೀಲಿ ಗಡಗಡಾ ನಡೆ ಅಂದರ ಹೆಂಗ ನಡದಾಳು ಸಾವುರ ಸಾವುರ ಪಾದಗಳ ತಾಯಿ. ಅದು ತನಗೆ ಅರುಪಿತ ಆಯ್ತಾ.. ಯಿದು ತನಗ ಅರುಪಿತ ಆಯ್ತಾ ಯಂದಾಕೆ ತನ್ನ ಸಾವುರ ಸಾವುರ ಕಣ್ಣುಗಳಿಂದ ಪರಾಂಬರಿಕೆ ಮಾಡುತಾ ಯಿದ್ದಳು. ಭಕುತಾದಿ ಮಂದಿಯ ಸಮಸ್ತ ಪಂಚೇಂದ್ರಿಯಂಗಳಿಗೆ, ಅಂಗಾಂಗಗಳಿಗೆ ರವುಸ, ಕಸುವು ತುಂಬುತಲೇ ಯಿದ್ದಳು.. ಭಕುತಾದಿ ಮಂದಿಯ ಸಮಸ್ತ ಸರೀರಗಳನ್ನು ಹೊಕ್ಕು ಕಾಮಗಾರಿ ಮಾಡುತಲಿದ್ದಳು, ಆಸ್ತಿಕ ಭಾವದ ವಕ್ಕಲಾಟ ನಡೆಸಿದ್ದಳು, ಆದ್ದರಿಂದ ಜರಜರ ಜರುಗುತಲಿದ್ದ ಆ ಮಹಾನ್ ಪರಿಶ, ದಿಬ್ಬಣದಲ್ಲಿದ್ದ ಯಾರೊಬ್ಬರಿಗೂ ಬ್ಯಾನೆ ಬ್ಯಾಸರಿಕೆಯಾಗಲೀ, ಹಸುವು ತುಷೆಯಾಗಲೀ ಬಾಧಿಸುತಲಿರಲಿಲ್ಲ.