ಪುಟ:ಅರಮನೆ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ನೀಗಿ ಬದುಕು ಬಲು ಬ್ಯಾಸರ ಆಗಯ್ತಪ್ಪಾ.. ಆದರ ನಾನ್ಯಾದ್ಯಾರ ಯುದ್ಧಕ ಹೋಗಿ ಯೀರ ಮರಣ ಸಾಯಬೇಕಂತ ಮಾಡೀನಿ, ಮಾಸ್ತಿಕಲ್ಲಿನ ಕರೆಗೆ ಓಂಗೊಡಾಕಂತ ಮಾಡೀನಿ” ಯಂದು ಕಣ್ಣಲ್ಲಿ ಯಲ್ಲು ಬೊಗಸೆ ನೀರು ತಂದುಕೊಂಡು ತನ್ನೆದೆಯಾಗಿದ್ದ ಗಿದ್ದುನ ದುಕ್ಕವನ್ನು ನಾಕು ಮಾತಲ್ಲಿ ಹೇಳಿದಳು. ಆವಾಗಿದ್ದು ಆಕೆಯ ತಾಯ್ತಂದೆಯರು ಹಂಗಾಡಬ್ಯಾಡವ್ವಾ.. ಹಂಗಾಡಬ್ಯಾಡ ಕಂದಾSS ಯಂದು ಬಗೆಯಿಂದ ರಮಿಸಿದರು. ಆದರೂ ಆಕೆಯ ದುಕ್ಕ ತಮಣಿಯಾಗಲಿಲ್ಲ. ಆಗ್ಗೆ ಗವುರಮ್ಮಗೆ ಆರತಿ ಬೆಳಗಲಕಂತ ಹಿರೇ ಗವುರಮ್ಮನುಣ್ಣುಮಿಗೆ ಬಂದಿದ್ದಂಥ ಆಕೆಯ ಯೇಳು ಮಂದಿ ಅಕ್ಕಂದಿರು 'ದುಕ್ಕ ಮಾಡಿಕೋಬ್ಯಾಡ ತಂಗಿ.. ಬೇಕಾರ ನನ್ನ ಮಗನ್ನ ತಗಂಡು ಸಾಕ್ಕೋ? ಯಂದರು. ಅದಕಿದ್ದು ಆಕೆಯು ನಿಮ್ಮಕ್ಕು ನನ ಮಕ್ಕು ಹೆಂಗಾಕಾವ್ರಕ್ಕಾ.. ಬ್ಯಾಡ... ಬ್ಯಾಡ” ಅಂದಳು.. ಅದೇ ಹೊತ್ತಿಗೆ ಊಾಣಗರುಮೊಂದು ತನ್ನ ಹೆತ್ತವ್ವನ ಮೊಲೆ ಜಿಲುಕಿ ಜಿಕ್ಕೋತ ಜಕ್ಕೋತ ಅಲ್ಲಿಗೆ ಬಂತು. ಅದರ ಕರಿದುಟಿಗಳ ನಡುವೆ ನೊರೆವಾಲಿನ ಗೆರೆಗಳಿದ್ದವು. ಅದರ ಮಯ್ಯ ಮಿರಿ ಮಿರಿ ಮಿಂಚುತಾಯಿತ್ತು.. ಅದು ಬರು ಬರುತ್ತಲೆ ತನ್ನ ನಾಲಗೆಯಿಂದ ಆಕೆಯ ಮಕಮಾರೆಯನ್ನು ನೆಕ್ಕಲಕ ಹತ್ತಿತು.. ಆ ವಂದು ಗಳಿಗೇಲಿ ಹತ್ತು ಕಂದಮ್ಮಗಳನ್ನು ಹೆತ್ತು ಆಡಿಸಿದೋಟು ಸಂತೋಷವಾಗಲು ಆಕೆಯು “ಯಪ್ಪಾ.. ನಿಮಾಸ್ತಿ ಬ್ಯಾಡ.. ನಿಮ್ಮಡಮಬ್ಯಾಡಯೀ ಕ್ಲಾಣಗರೂನ ಕೊಟ್ಟರಾಟೇ ಸಾಕು.. ಯದೇ ವಡಲ ಸವುಭಾಗ್ಯ ಯಂದಂದುಕೊಂಡು ಸಾಕೋತೀನಿ.. ಕಣ್ಣಾಗ ಕಣ್ಣಿಟ್ಟು ಜ್ಞಾಪಾನ ಜತುನ ಮಾಡತೇನಿ” ಯಂದೊಂದುಸುರಿಗೆ ಅಂದಳು. ಆವಾಗಿದ್ದು ಅಂತಾಡಪ್ಪನು “ಯಾರು ಬ್ಯಾಡಂತಾರ ಮಗಳೇ” ಯಂದು ವಪ್ಪಿಗೆ ನೀಡಿದನು. ಅದಕ ಮೊಲೆ ತಿಂಭೋ ಆಸೆ ಬಲು ಅಯ್ದೆ ಯಂಬ ಕಾರಣಕ್ಕೆ ಅದನ್ನು ಅದರ ತಾಯೊಂದಿಗೆ ಆಳಿನ ಕಣ್ಣು ಕುದುರೆಡವಿಗೆ ಹೊಡೆದು ಕಳುವಿ ಕೊಟ್ಟನು.... ಬರು ಬರುತ್ತಲೆ ಅದಕ್ಕೆ ಸೂರ ಯಂದು ನಾಮಕರಣ ಮಾಡಿದಳು. ತನ್ನೊಡಲಿಗೆ ಕಡಿಮೆ ಮಾಡಿಕೊಂಡು ಪಾಲನೆ ಪೋಷಣೆ ಮಾಡುತ ಸಾಕಿದಳು.. ತನ್ನ ಸಂಗಾಟ ವು೦ಬಲಕ ಯಿಡುತ್ತಿದ್ದಳು. ತನ್ನ ಮಗ್ಗುಲು ಮಲಗಿಸಿಕೊಳ್ಳುತ್ತಿದ್ದಳು.. ನಯ ನಾಜೂಕು ಕಲಿಸಿದಳು, ಆಕೆಯ ಮನದಾಗಿನ ಭಾವನೆಗಳನ್ನು ಅದು ಅರಮಾಡಿಕೊಳ್ಳುತ.. ಅದರ ಮನದಾಗಿನ ಭಾವನೆಗಳನ್ನು ಆಕೆ ಅರ ಮಾಡಿಕೊಳ್ಳುತ ಪರಸ್ಪರ ಸ್ಪಂದನ ಮಾಡುತ.. ವಂದೇ ಮಾತಲ್ಲಿ ಹೇಳಲಕಂದರ ಜಾಣ ಮನುಷ್ಯನೊಬ್ಬ ಊಾಣದ ರೂಪದಲ್ಲಿದ್ದನೆಂದರೆ