ಪುಟ:ಅರಮನೆ.pdf/೪೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರಮನೆ ೪೯ ಹೊತ್ತು ಮುಂದಕ ಹೊಳ್ಳದಂಗಾಗಿತ್ತು, ಹಿಂದಕ ಹೊಳ್ಳದಂಗಾಗಿತ್ತು ಅದು ನಿಂತಲ್ಲೆ ನಿಂತೇ ಯಿತ್ತು. ಅಂಥ ಮುಚ್ಚಂಜೆ ಮೂರುಗಳಿಗೆ ಹೊತ್ತಿನಲ್ಲಿ ಸಿಡೇಗಲ್ಲು ದ್ವಾರ ಬಾಕುಲಿಂದ ದಯಮಾಡಿದ ದಿಬ್ಬಣವು ಹತ್ತು ಮಾರು ದೂರದಲ್ಲಿದ್ದ ಮಾಸ್ತೀ ಬಾಕುಲು ತಲುಪೋ ಹೊತ್ತಿಗೆ ಮುಗುಲ ಆಕಾಸ ಮಾರದಲ್ಲಿ ನಚ್ಚತ್ರಗಳು ಹೊತ್ತನ್ನು ಲೆಕ್ಕಿಸದೆ ನಡಕೋತss ನಡಕೋತ.. ಆಟು ದೂರಕ ಬಂದಿದ್ದವು... ಮುಂದಲಕಿದ್ದ ನಕ್ಷತ್ರಗಳನ್ನು ಹಿಂದೇಸಿಂದ ಬಂದು ತಳ್ಳುತಲಿದ್ದ ನಕ್ಷತ್ರಗಳೆಷ್ಟೋ? ಹಿಂದಲಕಿದ್ದ ನಕ್ಷತ್ರಗಳನ್ನು ಮುಂದೇಸಿಂದ ನೂಕುತಲಿದ್ದ ನಕ್ಷತ್ರಗಳೆಷ್ಟೋ? ನಕ್ಷತ್ರಗಳ ವಡತಿಯಾಗಿದ್ದಂಥ ಸಿನಸರಣೆ ಚೆನ್ನವ್ವ ಮತ್ತು ಧರುಮ ದೇವತೇರು ಭೂಲೋಕದಿಂದ ಹೋಗಿ ಅಲ್ಲಿದ್ದಳಷ್ಟೆ ಅವರು ಕಾಯಿದೆ ತೀರಾ ಅವೆಲ್ಲವುಗಳ ಮುಖಂಡತ್ವ ವಹಿಸಿ ತಾಯಿ ದಿಬ್ಬಣ ಕಣ್ಣುಂಬ ನೋಡಲಕ ಅನುವು ಮಾಡಿ ಕೊಟ್ಟಿದ್ದರು. ಅಲ್ಲಿಗೆ ಮೂರೂವರೆ ಮಾರು ದೂರದಲ್ಲಿ, ಅಂದರೆ ಮೂರಮ್ಮನ ಬಯಲೂ ಅಂತ ಯೇನಿತ್ತೋ? ಅಲ್ಲಿ ಪದೋಬಯ್ಯ ನಾಯಕ ಪಟ್ಟ ಯೇರುವ ಸಮಯಕ್ಕೆ ಯಾವ ಜಾಗದಲ್ಲಿ ಹತ್ತಿಪ್ಪತ್ತೂರ ಜಟ್ಟಿಗಳು ಮಲ್ಲಯುದ್ಧ ಮಾಡಿ ಪವುರುಷ ಮೆರೆದಾಡಿದ್ದರೋ, ಅವರ ಪಯ್ಕೆ ಅಯಿದಾರು ಮಂದಿ ಮೀರ ಮರಣ ಅಪ್ಪಿದ್ದರೋ, ಅಲ್ಲಿ ತಾಯಿ ಸಾಂಬವಿ ಹಾದಿ ಆಯಾಸ ಪರಿಹಾರ ಮಾಡಿಕೊಳ್ಳೋ ಸಲುವಾಗಿ ವಂಬತ್ತು ಘನ ಮೊಳ ವುದ್ದಗಲ ಯತ್ತರದ ವಂದು ಕಟ್ಟೆ ನಿರುಮಾಣ ಮಾಡಿದ್ದರು. ತಾಯಿಯ ಬಾಯಾರಿಕೆ ತೀರಿಸಲಕೆಂದು ಕೊಳಗಗಟ್ಟಲೆ ನೊರೆವಾಲು ಯಿಟ್ಟಿದ್ದರು, ತಾಯಿಯ ಹಸುವೆ ಪರಿಹಾರಾಪ್ತವಾಗಿ ಹೋಳಿಗೆ, ಕರಿಗಡುಬು, ಹುಗ್ಗಿ, ಕರಚೀಕಾಯಿ ಮೊದಲಾದ ಪದಾರ್ಥಗಳನ್ನು ಯಿಟ್ಟಿದ್ದರು. ತಾಯಿ ಚಾವತ್ತು ವರಕ್ಕೊಂಡು ಜೋಂಪು ನಿದ್ದೆ ಮಾಡಲೀ ಅಂತ ಕವುದಿ, ಗುಡಾರ, ಚಾದರ, ತಲೆದಿಂಬು ಯವೇ ಮೊದಲಾದ ಹಾಸಿಗೊದ್ದಿಕೆಗಳನ್ನು ಬಿಟ್ಟಿದ್ದರು, ಅವ್ವನ ಸೆಕೆ ನೀಗಿಸಲಕಂತ ಚಾಮರಗಳನ್ನು, ಬೆಳದಿಂಗಳು ಬಿಸಿಲಾಗಿ ಸುರಿದಲ್ಲಿ ನೆರಳು ಮಾಡಲಕಂತ ಮುತ್ತಿನ ಗೊಂಡೇವ ಛತ್ರಿಗಳನ್ನೂ ಯಿಟ್ಟಿದ್ದರು. ಅವ್ವಗೆ ಬ್ಯಾಸರಿಕೆ ಆದಲ್ಲಿ ಅದನ್ನು ಕಳೆಯಲಕಂತ ಗೊಟ್ಟು ಪಾಪವ್ವ, ಪುಂಗಿ ನುಂಗವ್ವ, ಬಜ್ಜಿ ಕರಚವ್ವರೇ ಮೊದಲಾದ ಯಿಪ್ಪತ್ತೊಂದು ಮಂದಿ ಸೊಗಸುಗಾತಿಯರನ್ನು ಹಾಡಿಪಾಡಲಕಂತ, ನರನ ಮಾಡಲಕಂತ ಯಿಟ್ಟಿದ್ದರು. ಯಿ ಯೇರುಪಾಡಿನ ವುಸ್ತುವಾರಿ ನೋಡಲಕಂತ